More

    ಭತ್ತದ ಮೇವಿಗೆ ಹೆಚ್ಚಿದ ಬೇಡಿಕೆ

    ಕವಿತಾಳ: ಬರಗಾಲದಿಂದಾಗಿ ಜೋಳದ ಫಸಲು ಬಾರದಿರುವುದರಿಂದ ಭತ್ತದ ಮೇವಿಗೆ ಬೇಡಿಕೆ ಹೆಚ್ಚಾಗಿದೆ.

    ಹಣಗಿ, ಚಿಂಚರಕಿ, ಅಮೀನಗಡ, ವಟಗಲ್ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಒಣ ಬೇಸಾಯ ಹೊಂದಿದ್ದು, ಬಾಗಲವಾಡ, ತೋರಣದಿನ್ನಿ, ಮಲ್ಲದಗುಡ್ಡ, ಹಾಲಾಪುರ ಪಂಚಾಯಿತಿ ವ್ಯಾಪ್ತಿಯು ನೀರಾವರಿ ಪ್ರದೇಶವಾಗಿದೆ. ಹಾಲಾಪುರ, ಬಾಗಲವಾಡ, ತೋರಣದಿನ್ನಿ ಪಂಚಾಯಿತಿ ವ್ಯಾಪ್ತಿಯಲ್ಲಿ ಭತ್ತದ ಕಟಾವು ನಡೆದಿದ್ದು, ಮೇವನ್ನು ಗದ್ದೆಯಲ್ಲಿ ಬಿಡುತ್ತಿದ್ದಾರೆ. ಈ ಮೇವನ್ನು ಒಣ ಭೂಮಿ ಪ್ರದೇಶದ ರೈತರು ಖರೀದಿಸಿ ಟ್ರಾೃಕ್ಟರ್‌ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ.

    ಮೇವು ಖರೀದಿಸಿ ಒಂದು ಟ್ರಾೃಕ್ಟರ್‌ನಲ್ಲಿ ಸಾಗಿಸಲು 15 ಸಾವಿರ ರೂ. ವೆಚ್ಚವಾಗುತ್ತಿದ್ದು, ರೈತರಿಗೆ ಹೊರೆಯಾಗಿದೆ. ಭತ್ತದ ಮೇವು ಸಾಗಿಸುವಾಗ ವಿದ್ಯುತ್ ಅವಘಡ ನಡೆಯುವ ಸಾಧ್ಯತೆಗಳು ಕೂಡ ಇರುತ್ತವೆ. ಸಾಗಣೆ ಮಾರ್ಗದಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕೆಂದು ಹಣಗಿ, ಹುಸೇನಪುರ, ಕವಿತಾಳದ ರೈತರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts