More

    ಉಘೇ ಮಾದಪ್ಪ; ಈ ಬಾರಿ ಆದ್ರೂ ರೈತ ಮಕ್ಕಳಿಗೆ ಕನ್ಯೆ ಭಾಗ್ಯ ಕರುಣಿಸು..ಪಾದಯಾತ್ರೆ ಹೊರಟ ಯುವಕರು

    ಬೆಂಗಳೂರು: ಶಿವರಾತ್ರಿ ಸಮೀಪಿಸುತ್ತಿದ್ದಂತೆ ಮಾದಪ್ಪನ ಸನ್ನಿಧಾನಕ್ಕೆ ಹರಕೆ ಹೊತ್ತ ಭಕ್ತರು ಪಾದಯಾತ್ರೆ ಹೊರಟಿದ್ದಾರೆ. ಮಳವಳ್ಳಿ ತಾಲೂಕಿನ ಅಂಚೆದೊಡ್ಡಿ ಗ್ರಾಮಕ್ಕೆ ಗ್ರಾಮವೇ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದು, ಈ ಗ್ರಾಮದ ರೈತ ಮಹಿಳೆಯರು ತಮ್ಮ ಗಂಡು ಮಕ್ಕಳಿಗೆ ಒಳ್ಳೆ ಕನ್ಯೆ ಸಿಗಲಿ ಅಂತ ಹರಕೆ ಕಟ್ಟಿ ಪಾದಯಾತ್ರೆ ಮಾಡಿ ಬಂದಿದ್ದಾರೆ.

    ರಾಜ್ಯದ ನಾನ ಭಾಗಗಳಿಂದ ಪಾದಯಾತ್ರಿಕರು ಬರಲಾರಂಭಿಸಿದ್ದಾರೆ. ಮಲೆ ಮಾದೇಶ್ವರನ ಸನ್ನಿಧಿಗೆ ಅಂಚೆದೊಡ್ಡಿಯ ಸುತ್ತಮುತ್ತಲ ನಾಲ್ಕೈದು ಗ್ರಾಮಗಳ ಜನರು ಕಾಲ್ನಡಿಗೆಯಲ್ಲಿ ಯಾತ್ರೆ ಮಾಡಿದ್ದಾರೆ. ಊರಿಗೆ ಊರೇ ಸುಮಾರು 115 ಕಿಲೋಮೀಟರ್ ದೂರದಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಿದ್ದಾರೆ.

    ಅಂಚೆದೊಡ್ಡಿ ಸೇರಿದಂತೆ ಅಕ್ಕ-ಪಕ್ಕದ ಗ್ರಾಮಗಳಾದ ಕಂದೇಗಾಲ,ಅಮೃತೇಶ್ವರನಹಳ್ಳಿಯ ಸಾವಿರಾರು ಯುವಕರು ಪಾದಯಾತ್ರೆಯಲ್ಲಿ ಪಾಲ್ಗೋಂಡು,ಮಾದಪ್ಪನ ದರ್ಶನ ಮಾಡಿದ್ದಾರೆ.

    ಮಗನಿಗೆ ಒಳ್ಳೆ ಕನ್ಯೆ ಸಿಗ್ಲಿ ಅಂತ ಬರುವ ಪಾದಯಾತ್ರಿಕರ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಶಿವರಾತ್ರಿ ಹಬ್ಬ ಬೇರೆ ಮುಂದಿನ ತಿಂಗಳು ಇರುವ ಕಾರಣ ಈಗಿನಿಂದಲೇ ಭಕ್ತಾಧಿಗಳು ರಾಜ್ಯದ ನಾನಾ ಭಾಗಗಳಿಂದ ಇಷ್ಟಾರ್ಥ ನೆರವೇರಲೆಂದು ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದಾರೆ. ರೈತರ ಮಕ್ಕಳಿಗೆ ಕನ್ಯೆ ಸಿಗಲಿ ಅಂತ ಪಾದಯಾತ್ರೆ ಮಾಡುತ್ತಿರುವವರ ಸಂಖ್ಯೆಯೇ ಹೆಚ್ಚು.

    ಮಾದಪ್ಪನ ದರ್ಶನ ಪಡೆದರೆ ಒಳಿತಾಗುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಭಕ್ತರು ಪ್ರತಿ ವರ್ಷ ದೀಪಾವಳಿ, ಯುಗಾದಿ ಹಾಗೂ ಶಿವರಾತ್ರಿ ಸಂದರ್ಭದಲ್ಲಿ ಪಾದಯಾತ್ರೆ ನಡೆಸಿ ಮಾದಪ್ಪನ ಕೃಪೆಗೆ ಪಾತ್ರವಾಗುವ ವಾಡಿಕೆಯಿದೆ.

    ಒಂದು ಕೈಯಲ್ಲಿ ಮಗು, ಇನ್ನೊಂದು ಕೈಯಿಂದ ಟ್ರಾಫಿಕ್ ಕಂಟ್ರೋಲ್; ಪೊಲೀಸ್ ವಿಡಿಯೋ ವೈರಲ್

    ಶಿವಮೊಗ್ಗ ಹೋರಿ ಹಬ್ಬ; ಗೂಳಿ ತಿವಿತಕ್ಕೆ ಪ್ರಾಣ ಕಳೆದುಕೊಂಡ ಯುವಕ

    20 ವರ್ಷದ ಹಿಂದೆ ಈ ವ್ಯಕ್ತಿ ಕೊಟ್ಟಿದ್ದ ಗುಲಾಬಿಯನ್ನು ಇನ್ನು ಇಟ್ಟುಕೊಂಡಿದ್ದಾರೆ ನಟಿ ಜೆನಿಲಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts