More

    ಪ್ಯಾಕೇಜ್ ಟೆಂಡರ್ ರದ್ದುಗೊಳಿಸಿ

    ಬೆಳಗಾವಿ: ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆ ಪಡೆಯುವಲ್ಲಿ ಸಣ್ಣ ಪ್ರಮಾಣದ ಗುತ್ತಿಗೆದಾ ರರಿಗೆ ಮಾರಕವಾಗಿರುವ ಪ್ಯಾಕೇಜ್ ಟೆಂಡರ್ ಪದ್ಧತಿ ರದ್ದುಗೊಳಿಸುವಂತೆ ಒತ್ತಾಯಿಸಿ ಬೆಳಗಾವಿ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘವು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ
    ಶುಕ್ರವಾರ ಧರಣಿ ನಡೆಸಿದರು.

    ಮಹಾನಗರ ಪಾಲಿಕೆಯು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿನ 10, 15, 20 ಲಕ್ಷ ರೂ. ವರೆಗಿನ ಕಡಿಮೆ ಮೊತ್ತದ ಕಾಮಗಾರಿಗಳನ್ನು ಪ್ಯಾಕೇಜ್ ರೀತಿಯಲ್ಲಿ ಐದು ಕೋಟಿ ರೂ. ಮೊತ್ತದ ಟೆಂಡರ್ ಮಾಡಿ, ಹೊರ ರಾಜ್ಯದ ಗುತ್ತಿಗೆದಾರರಿಗೆ ನೀಡುತ್ತಿದೆ. ಇದರಿಂದಾಗಿ ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಅಲ್ಲದೆ, 50 ಲಕ್ಷ ರೂ. ಒಳಗಿನ ಟೆಂಡರ್‌ಗಳಲ್ಲಿ ಪರಿಶಿಷ್ಟ ಜಾತಿ ಗುತ್ತಿಗೆದಾರರಿಗೆ ಶೇ. 17.5 ಮತ್ತು ಪ.ಪಂಗಡ ಗುತ್ತಿಗೆದಾರರಿಗೆ ಶೇ. 6.95 ಕಡ್ಡಾಯವಾಗಿ ಮೀಸಲಾತಿ ಕಲ್ಪಿಸಬೇಕು. ಆದರೆ, ಯಾವುದೇ ನಿಯಮ ಪಾಲಿಸುತ್ತಿಲ್ಲ ಎಂದು ಆರೋಪಿಸಿದರು. ಎಲ್ಲ ಸಿವಿಲ್ ಗುತ್ತಿಗೆದಾರರಿಗೆ ಮುಕ್ತವಾಗಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಸಂಘದ ಅಧ್ಯಕ್ಷ ರಾಜು ಪದ್ಮಣ್ಣವರ, ಕಾರ್ಯದರ್ಶಿ ಎಚ್.ಬಿ. ಪಾಟೀಲ, ಬಸವರಾಜ ಗಾಣಿಗೇರ, ಕಿರಣ ಪಾಟೀಲ, ಮನೋಹರ ಕೆ., ಜೆ.ವೈ. ಅಷ್ಟೇಕರ್, ಡಿ.ಎಲ್. ಕುಲಕರ್ಣಿ, ಮಹೇಶ ಅಷ್ಟೇಕರ್, ಸುರೇಶ ಕರಗುಪ್ಪಿ, ಪ್ರಕಾಶ ತಹಸೀಲ್ದಾರ್, ಅಶೋಕ ಅನಗೇಕರ್, ದಿಲೀಪ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts