More

    ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣಗಿಲ್ಲ ಯೋಗ್ಯ ಶಿಕ್ಷಣ:  ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಟೀಕೆ

    ಮಂಡ್ಯ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕುವಂತೆ ಪ್ರಚೋದನಾಕಾರಿ ಭಾಷಣ ಮಾಡಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಯೋಗ್ಯ ಶಿಕ್ಷಣ ಕಲಿತ್ತಿಲ್ಲ. ಅನಾಗರಿಕರಂತೆ ವರ್ತಿಸಿರುವ ಅವರದ್ದು ಬಿಜೆಪಿಯ ಗೂಡ್ಸೆ ಸಂಸ್ಕೃತಿಯನ್ನು ತೋರಿಸುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಟೀಕಿಸಿದರು.
    ಟಿಪ್ಪು ಸುಲ್ತಾನ್ ಅವರನ್ನು ಉರಿಗೌಡ, ನಂಜೇಗೌಡರು ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಕಾರ್ಯಕರ್ತರನ್ನು ಪ್ರಚೋದಿಸಿದ್ದಾರೆ. ಅವರನ್ನು ಹೊಡೆದು ಹಾಕುವುದರಿಲಿ, ಮುಟ್ಟಿ ನೋಡಿ ನೋಡೋಣ. ಸಿದ್ದರಾಮಯ್ಯ ಅವರನ್ನು ಮುಟ್ಟುವುದಕ್ಕೂ ಮೊದಲು ನಮ್ಮನ್ನು ಎದುರಿಸಿ ಎಂದು ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
    ಉನ್ನತ ಶಿಕ್ಷಣ ಸಚಿವರಿಗೆ ಯೋಗ್ಯ ಶಿಕ್ಷಣ ಸಿಕ್ಕಿದಂತಿಲ್ಲ. ಸಚಿವರ ಹೇಳಿಕೆಗಳು ಅಯೋಗ್ಯತನದ ಪರಮಾವಧಿ. ಮಂಡ್ಯಕ್ಕೆ ಬಂದು ಮಂಡ್ಯದವರಂತೆ ಗತ್ತಿನಲ್ಲಿ ಮಾತನಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಮಂಡ್ಯದ ಗತ್ತು ಬೇರೆ ಯಾರಿಗೂ ಬರುವುದಿಲ್ಲ. ಇಂತಹ ನಾಟಕೀಯ ಮತ್ತು ಲಘುವಾದ ಮಾತುಗಳನ್ನು ಮೊದಲು ನಿಲ್ಲಿಸಿ. ಜಾತಿ, ಧರ್ಮ, ಕೋಮುಗಲಭೆ ಸೃಷ್ಟಿಸಿ ಅಧಿಕಾರ ಹಿಡಿಯಲು ಬಿಜೆಪಿ ಹೊರಟಿದೆ. ಅದು ಅವರ ಭ್ರಮೆ. ಸಮಯೋಚಿತವಾಗಿ ತೀರ್ಪು ಕೊಡುವಾಗ ಜಿಲ್ಲೆಯ ಜನ ನ್ಯಾಯದ ಪರವಾಗಿ ನಿಲ್ಲಲಿದ್ದಾರೆ ಎಂದರು.
    ಕಾರ್ಯಕರ್ತರನ್ನು ಹುರಿದುಂಬಿಸುವ ನೆಪದಲ್ಲಿ ಕೊಲೆ ಮಾಡುವಂತೆ ಪ್ರಚೋದನಾಕಾರಿ ಭಾಷಣ ಮಾಡುವುದು ಎಷ್ಟು ಸರಿ?. ಪ್ರಚೋದನಾಕಾರಿ ಭಾಷಣವು ಕೊಲೆಗೆ ಸಂಚು ರೂಪಿಸಿದಂತೆಯೇ ಆಗುತ್ತದೆ. ಮನುಷ್ಯತ್ವ, ಮಾನವೀಯತೆ, ಸಂವಿಧಾನದ ಬಗ್ಗೆ ಗೌರವವಿದ್ದರೆ ಪ್ರತಿಭಟನೆ ತೀವ್ರಗೊಳ್ಳುವ ಮುನ್ನ ರಾಜ್ಯದ ಜನರಲ್ಲಿ ಕ್ಷಮೆ ಕೇಳಿ. ಇಲ್ಲದಿದ್ದರೆ ಗೂಂಡಾ ಸಂಸ್ಕೃತಿಯನ್ನು ಒಪ್ಪಿಕೊಂಡಅತಾಗುತ್ತದೆ. ನಿಮ್ಮ ಗೊಡ್ಡು ಬೆದರಿಕೆಗಳಿಗೆ ಯಾರೂ ಮಣಿಯಲ್ಲ. ನಿಮಗೆ ಬುದ್ದಿ ಕಲಿಸುವ ದಿನ ಬಂದಿದೆ. ಜನರೇ ಉತ್ತರ ಕೊಡಲಿದ್ದಾರೆ ಎಂದು ಎಚ್ಚರಿಸಿದ ಅವರು, ನಿಮ್ಮ ಭಾಷಣದಷ್ಟೇ ತೀಷ್ಣವಾಗಿ ಉತ್ತರ ಕೊಡಲು ನಮಗೂ ಗೊತ್ತು. ಆದರದು ನಮ್ಮ ಸಂಸ್ಕೃತಿಯಲ್ಲ. ನಾವು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಪಕ್ಷ ಹೇಳಿಕೊಟ್ಟಿದೆ. ಬಡವರ ಕಲ್ಯಾಣ ಕಾರ್ಯಕ್ರಮ ಅನುಷ್ಠಾನ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಹೇಳಿದರು.
    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್, ಯುವ ಘಟಕ ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್, ನಗರಸಭೆ ಸದಸ್ಯ ನಯೀಂ, ನಾಗರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts