More

    ಆಕ್ಸಿಜನ್ ಉಪಕರಣ : ಸ್ವಿಟ್ಜರ್​ಲ್ಯಾಂಡ್​ ಟು ಅಂಡಮಾನ್ ನಿಕೋಬಾರ್​

    ನವದೆಹಲಿ : ಸ್ವಿಟ್ಜರ್​ಲ್ಯಾಂಡ್​ನಿಂದ ಬಂದ ಆಕ್ಸಿಜನ್ ಕಾನ್ಸಂಟ್ರೇಟರ್​ಅನ್ನು ಭಾರತದ ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪಗಳ ಜಿ.ಬಿ.ಪಂತ್​ ಆಸ್ಪತ್ರೆಯಲ್ಲಿ ರೋಗಿಯ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಂ ಬಾಗ್ಚಿ ಅವರು ಇಂದು ವಿಡಿಯೋ ಒಂದನ್ನು ಟ್ವೀಟ್​ ಮಾಡಿದ್ದಾರೆ.

    ಇದು ಸ್ವಿಟ್ಜರ್​ಲ್ಯಾಂಡ್ ಕಳೆದ ವಾರ ಕಳುಹಿಸಿಕೊಟ್ಟ 600 ಕಾನ್ಸಂಟ್ರೇಟರ್ ಉಪಕರಣಗಳಲ್ಲಿ ಒಂದು. ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಲಾಗುತ್ತಿದ್ದು, ದೇಶದ ದೂರದ ಮೂಲೆಗಳನ್ನೂ ತಲುಪಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ಮೇ 7 ರ ಬೆಳಗ್ಗೆ ಸ್ವಿಟ್ಜರ್​ಲ್ಯಾಂಡ್​ ವಿಮಾನ ಭಾರತಕ್ಕೆ 600 ಆಕ್ಸಿಜನ್ ಕಾನ್ಸಂಟ್ರೇಟರ್​ಗಳು, 50 ವೆಂಟಿಲೇಟರ್​ಗಳು ಮತ್ತು ಇತರ ವೈದ್ಯಕೀಯ ಅಗತ್ಯಗಳನ್ನು ಕಳುಹಿಸಿಕೊಟ್ಟಿದೆ. ಈ ಸ್ನೇಹಮಯ ಕಾರ್ಯಕ್ಕೆ ಧನ್ಯವಾದಗಳು ಎಂದು ಬಾಗ್ಚಿ ಅವರು ಕಳೆದ ವಾರ ತಿಳಿಸಿದ್ದರು.

    ವಾತಾವರಣದಲ್ಲಿ ಶೇ. 21 ರಷ್ಟಿರುವ ಆಕ್ಸಿಜನ್ ಪ್ರಮಾಣವನ್ನು ಎಳೆದು ಕಾನ್ಸಂಟ್ರೇಟ್ ಮಾಡಿ ಪೈಪ್​ ಮೂಲಕ ರೋಗಿಗೆ ಶುದ್ಧ ಆಕ್ಸಿಜನ್ ಒದಗಿಸುವ ‘ಆಮ್ಲಜನಕ ಸಾಂದ್ರಕ’ ಅಥವಾ ‘ಆಕ್ಸಿಜನ್ ಕಾನ್ಸಂಟ್ರೇಟರ್​’ಗಳನ್ನು ಶೇ. 85 ಕ್ಕಿಂತ ಹೆಚ್ಚು ಎಸ್​​ಪಿಒ2 ಇರುವ ಕರೊನಾ ರೋಗಿಗಳ ಚಿಕಿತ್ಸೆಗೆ ಮನೆಯಲ್ಲೇ ಬಳಸಬಹುದು ಎನ್ನಲಾಗಿದೆ.

    ಪಶ್ಚಿಮ ಬಂಗಾಳದಲ್ಲಿ 15 ದಿನ ಸಂಪೂರ್ಣ ಲಾಕ್​ಡೌನ್​

    ‘ಹೆಚ್ಚು ಮಲಗಿದ್ದಕ್ಕೆ ಸಾರಿ’ ಎಂದು ಸಾವಿನ ವದಂತಿಯನ್ನು ಅಲ್ಲಗಳೆದ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts