More

    ಮಂಗಳನಲ್ಲಿ ಆಮ್ಲಜನಕ ಪತ್ತೆ

    ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ನಾಸಾದ ಪರ್ಸಿವರನ್ಸ್ ಮಂಗಳ ಗ್ರಹಕ್ಕೆ ತಲುಪಿದ ಬಳಿಕ ಮಾರ್ಸ್ ಆಕ್ಸಿಜನ್ ಇನ್ ಸಿತು ರಿಸೋರ್ಸ್ ಯುಟಿಲೈಸೇಷನ್ ಎಕ್ಸ್​ಪರಿಮೆಂಟ್ (ಎಂಒಎಕ್ಸ್​ಐಇ) 5 ಗ್ರಾಮ್ ಆಮ್ಲಜನಕವನ್ನು ಉತ್ಪಾದಿಸಿದೆ.

    ಇದನ್ನು ಅದು ಮಂಗಳನ ವಾತಾವರಣದಲ್ಲಿರುವ ಕಾರ್ಬನ್ ಡೈ ಆಕ್ಸೆ ೖಡ್ ಬಳಸಿಕೊಂಡೇ ಉತ್ಪಾದಿಸಿತ್ತು. ಇದು ಗಗನಯಾತ್ರಿಗೆ 10 ನಿಮಿಷ ಉಸಿರಾಟ ನಡೆಸುವುದಕ್ಕೆ ಸಾಕಾಗುವಷ್ಟು ಪ್ರಮಾಣ ಎಂದು ನಾಸಾ ಹೇಳಿದೆ. ಮಂಗಳನ ವಾತಾವರಣದಲ್ಲಿ ಶೇಕಡ 96 ಕಾರ್ಬನ್ ಡೈ ಆಕ್ಸೆ ೖಡ್ ಇದ್ದು, ಭೂಮಿಯ ವಾತಾವರಣಕ್ಕೆ ಹೋಲಿಸಿದರೆ ಆಕ್ಸಿಜನ್ ಶೇಕಡ 0.13 ಮಾತ್ರ ಇದೆ.

    ಭೂಮಿಯ ವಾತಾವರಣದಲ್ಲಿ ಶೇಕಡ 21 ಆಮ್ಲಜನಕವಿದೆ. ಭೂಮಿಯ ಮೇಲೆ ಮರ ಮಾಡುವ ಪ್ರಯೋಗವನ್ನು ಎಂಒಎಕ್ಸ್​ಐಇ ಮಂಗಳನ ಅಂಗಳದಲ್ಲಿ ಮಾಡಿದೆ ಎಂದು ನಾಸಾ ಹೇಳಿದೆ. ಪರ್ಸಿವರನ್ಸ್​ನ ಒಳಗೆ ಇರುವ ಎಂಒಎಕ್ಸ್​ಐಇ ಪ್ರತಿಗಂಟೆಗೆ 10 ಗ್ರಾಮ್ ಆಕ್ಸಿಜನ್ ಉತ್ಪಾದಿಸುತ್ತದೆ. ಕಾರಿನ ಬ್ಯಾಟರಿಯ ಗಾತ್ರದ ಇದು 17.1 ಕಿಲೋ ಭಾರ ಭೂಮಿಯಲ್ಲಿದ್ದರೆ, 6.41 ಕಿಲೋ ಭಾರ ಮಂಗಳನಲ್ಲಿ ತೋರಿಸಿದೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಎಂಒಎಕ್ಸ್​ಐಇ 9 ಪಟ್ಟು ಹೆಚ್ಚು ಆಕ್ಸಿಜನ್ ಉತ್ಪಾದಿಸಲಿದೆ ಎಂದು ನಾಸಾ ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts