More

    ಖರೀದಿಸಿದ ಮೂರೇ ತಿಂಗಳಿಗೆ ಕೆಟ್ಟುಹೋದ ಎಲೆಕ್ಟ್ರಿಕ್​ ಬೈಕ್​ಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಮಾಲೀಕ!

    ಚೆನ್ನೈ: ಇತ್ತೀಚೆಗೆ ಎಲೆಕ್ಟ್ರಿಕ್​ ಬೈಕ್​​ ಗುಣಮಟ್ಟ ಕುರಿತು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈಗಾಗಲೇ ಖರೀದಿಸಿರುವ ಗ್ರಾಹಕರಿಗೆ ಮಾತ್ರ ಹಣವೂ ಇಲ್ಲ, ಬೈಕೂ ಇಲ್ಲದಂತಾಗಿದೆ. ಖರೀದಿಸಿದ ಕೆಲವೇ ದಿನಗಳಲ್ಲಿ ಬೈಕ್​​ ಕೆಟ್ಟುಹೋಗುತ್ತಿರುವುದರಿಂದ ಸಂಸ್ಥೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

    ಗುಣಮಟ್ಟ ಚೆನ್ನಾಗಿದೆ ಎಂದು ನಂಬಿಸಿ ಖರೀದಿಸಿದ ಕೆಲವೇ ತಿಂಗಳಲ್ಲಿ ಎಲೆಕ್ಟ್ರಿಕ್​ ಬೈಕ್​​ ಕೆಟ್ಟುಹೋಗಿದ್ದರಿಂದ ಮಾಲೀಕ ಬೈಕಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಸುಟ್ಟಿರುವ ವಿಡಿಯೋ ಭಾರೀ ವೈರಲ್​ ಆಗುತ್ತಿದೆ.

    ಇತ್ತೀಚೆಗೆ ಓಲಾ ಕಂಪನಿಯ ಎಲೆಕ್ಟ್ರಿಕ್​ ಬೈಕ್​ಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಈ ಹಿನ್ನಲೆಯಲ್ಲಿ ಸ್ವತಃ ಸಂಸ್ಥೆಯೇ 1400 ಕ್ಕೂ ಅಧಿಕ ಬೈಕನ್ನು ಹಿಂಪಡೆದಿದೆ. ಈ ಬೆನ್ನಲ್ಲೇ ಗ್ರಾಹಕರೂ ಕೂಡ ಇಷ್ಟಪಟ್ಟು ಖರೀದಿಸಿದ ಬೈಕ್​​ ಅಲ್ಪ ದಿನವೂ ಬಾಳಿಕೆ ಬರಲಿಲ್ಲ ಎಂದು ಹೇಳಿದ್ದಾರೆ.

    ತಮಿಳುನಾಡಿದ ಫೃಥ್ವಿರಾಜ್​ ಎಂಬ ವ್ಯಕ್ತಿ ಜನವರಿಯಲ್ಲಿ ಎಲೆಕ್ಟ್ರಿಕ್​ ಬೈಕ್​ ಖರೀದಿಸಿದ್ದಾರೆ. ಆ ವೇಳೆ ಸಂಸ್ಥೆ ಬೈಕ್​ ಉತ್ತಮ ಗುಣಮಟ್ಟದ್ದಾಗಿದೆ ಎಂದು ಹೇಳಿತ್ತು. ಖರೀದಿಸಿದ ಮೂರೇ ತಿಂಗಳಿಗೆ ಬಣ್ಣ ಬಯಲಾಗಿದ್ದು, ಹಾಗಾಗಿ ಬೈಕನ್ನೇ ಸುಟ್ಟಾಕುತ್ತಿದ್ದೇನೆ ಎಂದು ಹೇಳಿದ್ದಾರೆ.

    PSI ಹುದ್ದೆ ನೇಮಕಾತಿ ಅಕ್ರಮ: ಇಡೀ ಪರೀಕ್ಷೆ ರದ್ದು, ಮರು ಪರೀಕ್ಷೆಗೆ ಆದೇಶಿಸಿದ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts