More

    ಅಂಚೆ ಕಚೇರಿಗಿಲ್ಲ ಸೂರು

    ವಿಜಯ ಸೊರಟೂರ ಡಂಬಳ

    ಗ್ರಾಮದಲ್ಲಿ 1975ರಿಂದ ಕಾರ್ಯನಿರ್ವಹಿಸುತ್ತಿರುವ ಅಂಚೆ ಕಚೇರಿಗೆ ಸ್ವಂತ ನಿವೇಶನವಿದ್ದರೂ ಕಟ್ಟಡ ಭಾಗ್ಯವಿಲ್ಲ. ಇದರಿಂದಾಗಿ ಕಚೇರಿಯ ಸ್ವಂತ ಜಾಗವೀಗ ಅನ್ಯ ಚಟುವಟಿಕೆ ತಾಣವಾಗಿದೆ.

    ಗ್ರಾಮದ ಅಂಚೆ ಕಚೇರಿ ವ್ಯಾಪ್ತಿಗೆ ಡಂಬಳ, ನಾರಾಯಣಪುರ, ಹೊಸಡಂಬಳ ಗ್ರಾಮಗಳು ಬರುತ್ತವೆ. ಈ ಗ್ರಾಮಗಳಿಂದ ಅಂಚೆ ಕಚೇರಿಗೆ ನಿತ್ಯ ನೂರಾರು ಗ್ರಾಹಕರು ಬರುತ್ತಾರೆ. ಅಂಚೆ ಕಚೇರಿಗೆ ಗ್ರಾಮದ ಕಂದಾಯ ನಿರೀಕ್ಷಕರ ಕಚೇರಿ ಪಕ್ಕದಲ್ಲಿ 100 ಅಡಿ ಉದ್ದ, 50 ಅಡಿ ಅಗಲ ವಿಸ್ತೀರ್ಣದ ನಿವೇಶನವಿದೆ. ಆದರೆ, ಇಲ್ಲಿ ಅಂಚೆ ಕಚೇರಿಗೆ ಇನ್ನೂವರೆಗೆ ಕಟ್ಟಡ ನಿರ್ಮಾಣ ಮಾಡಿಲ್ಲ. ಹೀಗಾಗಿ, ಅಂಚೆ ಕಚೇರಿ ತೋಂಟದಾರ್ಯ ಮಠಕ್ಕೆ ಸಂಬಂಧಿಸಿದ ಕಟ್ಟಡವೊಂದರಲ್ಲಿ ತಿಂಗಳಿಗೆ 2,500 ರೂಪಾಯಿ ಬಾಡಿಗೆ ಪಾವತಿಸಿ ಕಾರ್ಯನಿರ್ವಹಿಸುತ್ತಿದೆ.

    ಭಾರತೀಯ ಅಂಚೆ ಇಲಾಖೆ ಸೇವೆ ವಿಶ್ವದಲ್ಲೇ ಅತಿ ದೊಡ್ಡ ಸಂಪರ್ಕಜಾಲ ಹೊಂದಿದೆ. ಗ್ರಾಹಕರಿಗೆ ಪತ್ರ ವ್ಯವಹಾರ, ನೋಂದಾಯಿತ ಪತ್ರ ವ್ಯವಹಾರ, ಶೀಘ್ರ ಅಂಚೆ, ಪಾರ್ಸೆಲ್ ಸೇವೆ, ಇ-ಅಂಚೆ, ವಿಶೇಷ ಕೋರಿಯರ್ ಸೇವೆ, ತಂತಿ ಸಂದೇಶ, ಮನಿ ಆರ್ಡ್​ರ್ ಸೇವೆಗೆ ಅಂಚೆ ಕಚೇರಿ ಮೀಸಲಾಗಿತ್ತು. ಆದರೀಗ ಚಲನ್ ಸ್ವೀಕೃತಿ, ಸ್ಪೀಡ್ ಪೋಸ್ಟ್, ಮ್ಯುಚುವಲ್ ಫಂಡ್, ಉಳಿತಾಯ ಖಾತೆ ಸೇವೆ, ಕಿಸಾನ್ ವಿಕಾಸ್ ಪತ್ರ, ಠೇವಣಿ, ಸುಕನ್ಯಾ ಸಮೃದ್ಧಿ ಯೋಜನೆ, ಹಣ ವರ್ಗಾವಣೆ ಸೇರಿದಂತೆ ನೂರಕ್ಕೂ ಹೆಚ್ಚು ಸೇವೆಗಳನ್ನು ನೀಡುತ್ತಿದೆ. ಆದರೆ, ಬಾಡಿಗೆ ಕಟ್ಟಡದಲ್ಲಿರುವ ಕಾರಣ ಗ್ರಾಮದ ಅಂಚೆ ಕಚೇರಿಯಲ್ಲಿ ಗ್ರಾಹಕರಿಗೆ ಆಸನಗಳು, ಕುಡಿಯುವ ನೀರು ಸೇರಿದಂತೆ ಇತರ ಸೌಲಭ್ಯಗಳಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ, ಬಾಡಿಗೆ ಕಟ್ಟಡವು ತುಂಬಾ ಇಕ್ಕಟ್ಟಾಗಿದೆ.

    ಅಂಚೆ ಕಚೇರಿ ಸ್ವಂತ ಜಾಗದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯಲಾಗಿದೆ. ರಾತ್ರಿಯಾದರೆ ಮದ್ಯ ಸೇವಿಸಿ, ಬಾಟಲ್​ಗಳನ್ನು ಅಲ್ಲಿಯೇ ಬಿಸಾಕುತ್ತಿದ್ದಾರೆ. ಜಾಲಿ ಕಂಟಿಗಳು ಬೆಳೆದಿದ್ದರಿಂದ ಅನೈತಿಕ ಚಟುವಟಿಕೆ ತಾಣವಾಗಿದೆ. ಅಂಚೆ ಕಚೇರಿಗೆ ಮೀಸಲಿದ್ದ ಜಾಗಕ್ಕೆ ಸುಮಾರು ವರ್ಷಗಳ ಹಿಂದೆ ಅಂಚೆ ಕಚೇರಿ ನಾಮಫಲಕ ಹಾಕಿದ್ದಾರೆ. ಅದೀಗ ಇದ್ದೂ ಇಲ್ಲದಂತಾಗಿದೆ. ಅಂಚೆ ಕಚೇರಿ ಜಾಗದ ಸುತ್ತಲೂ ತಂತಿ ಬೇಲಿ, ಕಲ್ಲುಗಳನ್ನು ನೆಟ್ಟು ಹದ್ದುಬಸ್ತ್ (ಫೆನ್ಸಿಂಗ್) ಮಾಡದ ಕಾರಣ ಒತ್ತುವರಿ ಮಾಡಿಕೊಂಡು ಕೆಲವರು ಡಬ್ಬಾ ಅಂಗಡಿ ಹಾಕಲು ಮುಂದಾಗುತ್ತಿದ್ದರೂ ಅಂಚೆ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.

    ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಇಲಾಖೆ ಜಾಗ ಸಂಪೂರ್ಣ ನಿರ್ಲಕ್ಷ ್ಯ್ಕೊಳಗಾಗಿ ಮುಳ್ಳುಕಂಟಿ ಬೆಳೆದು ಅನ್ಯ ಚಟುವಟಿಕೆ ತಾಣವಾಗಿದೆ. ಸ್ಥಳೀಯ ಗ್ರಾಪಂನವರು ಇದರ ಸ್ವಚ್ಛತೆಗೆ ಮುಂದಾಗಿಲ್ಲ. ಈ ಭಾಗದ ಜನಪ್ರತಿನಿಧಿಗಳು ಡಂಬಳ ಗ್ರಾಮದ ಅಂಚೆ ಕಚೇರಿಗೆ ಶಾಶ್ವತ ಕಟ್ಟಡ ನಿರ್ವಿುಸಲು ಮುಂದಾಗಬೇಕು.

    | ಈರಣ್ಣ ನಂಜಪ್ಪನವರ ಸಾಮಾಜಿಕ ಕಾರ್ಯಕರ್ತ, ಡಂಬಳ

    ಡಂಬಳ ಗ್ರಾಮದ ಅಂಚೆ ಇಲಾಖೆ ನಿವೇಶನ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಲಾಗುತ್ತದೆ. ಆ ಜಾಗದ ಸುತ್ತಲೂ ಬೆಳೆದು ನಿಂತಿರುವ ಮುಳ್ಳುಕಂಟಿಗಳನ್ನು ಸ್ವಚ್ಛಗೊಳಿಸಿ ನಿವೇಶನದಲ್ಲಿ ಫೆನ್ಸಿಂಗ್ ಕಾರ್ಯ ಮಾಡಲಾಗುತ್ತದೆ. ಸದರಿ ಕಟ್ಟಡ ನಿರ್ವಣಕ್ಕೆ ಅಗತ್ಯ ಅನುದಾನ ನೀಡುವುದು ಅಂಚೆ ಇಲಾಖೆ ಡೈರೆಕ್ಟರ್ ಜನರಲ್ ವ್ಯಾಪ್ತಿಗೆ ಬರುತ್ತದೆ. ಇಲಾಖೆ ಇಂಜಿನಿಯರ್ ಅವರಿಂದ ಪ್ರಸ್ತಾವನೆ ಸಿದ್ಧಪಡಿಸಿ ಮೇಲಧಿಕಾರಿಗಳಿಗೆ ಕಳುಹಿಸಲಾಗುತ್ತದೆ.

    | ಚಿದಾನಂದ ಪದ್ಮಶಾಲಿ, ಅಂಚೆ ಅಧೀಕ್ಷಕರು, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts