More

    ಓಬವ್ವ ತವರೂರಿನಲ್ಲಿ ಜಯಂತಿ ಆಚರಿಸಿ

    ಕೂಡ್ಲಿಗಿ/ಕಾನಹೊಸಹಳ್ಳಿ: ರಾಜ್ಯಾದ್ಯಂತ ಓಬವ್ವ ಜಯಂತಿ ಆಚರಿಸಲಾಗುತ್ತಿದೆ. ಅದೇ ರೀತಿ ಓಬವ್ವ ತವರೂರಾದ ಗುಡೇಕೋಟೆಯಲ್ಲಿ ಗ್ರಾಪಂ ಹಾಗೂ ತಾಲೂಕು ಆಡಳಿತ ಅದ್ದೂರಿಯಾಗಿ ಆಚರಣೆ ಮಾಡಬೇಕು ಎಂದು ಕರವೇ ಸ್ಥಳೀಯ ಘಟಕದ ಅಧ್ಯಕ್ಷ ಶಿವಕುಮಾರ್ ಒತ್ತಾಯಿಸಿದರು.

    ಇದನ್ನೂ ಓದಿ: ಓಬವ್ವನ ವೀರತನ ಎಲ್ಲರಿಗೂ ಮಾದರಿ

    ಗುಡೇಕೋಟೆಯಲ್ಲಿ ಕರವೇಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಕೃಷ್ಣ ಮಾತನಾಡಿ, ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅಪೇಕ್ಷೆಯಂತೆ 2024ರ ಫೆಬ್ರವರಿಯಲ್ಲಿ ಅದ್ದೂರಿಯಾಗಿ ಓಬವ್ವ ಜಯಂತಿ ತಾಲೂಕು ಆಡಳಿತದಿಂದ ಆಚರಿಸಲಾಗುತ್ತದೆ ಎಂದು ತಿಳಿಸಿದರು.

    ಗ್ರಾಮದ ಮುಖ್ಯಬೀದಿಗಳಲ್ಲಿ ಭುವನೇಶ್ವರಿ ದೇವಿ ಹಾಗೂ ಓಬವ್ವ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಬೆಂಗಳೂರಿನ ರೋಟರಿ ಕ್ಲಬ್‌ನಿಂದ ಬಡ ಹೆಣ್ಣು ಮಕ್ಕಳಿಗೆ ಸೀರೆಗಳನ್ನು ಉಚಿತವಾಗಿ ನೀಡಲಾಯಿತು. ಸಾಧಕರಿಗೆ ಸನ್ಮಾನ ಮಾಡಲಾಯಿತು.

    ಗ್ರಾಪಂ ಸದಸ್ಯರಾದ ಸಣ್ಣ ಬೊಮ್ಮಣ್ಣ, ಮಹೇಶ್ವರಿ, ಡಿ.ಮೀನಾಕ್ಷಮ್ಮ, ಕೆ.ಮಂಜುನಾಥ, ಮುರಳಿರಾಜ್, ಪ್ರಮುಖರಾದ ನಜೀರ್, ಗೊಂಚಿಗಾರ್ ಮಲ್ಲಿಕಾರ್ಜುನ, ಕೆಇಬಿ ಗೋವಿಂದ, ಬಂಗಾಳಿ ಒಬ್ಬಯ್ಯ, ಕಿಟ್ಟಪ್ಪ, ಕರವೇ ಪದಾಧಿಕಾರಿಗಳಾದ ಕೆ.ಆರ್.ಶ್ರೀಧರ್, ಮಡಿವಾಳ ನಾಗರಾಜ್, ತಳವಾರ ರಮೇಶ, ರಾಜಣ್ಣ, ಎನ್. ದುರುಗೇಶ್, ಎಂ.ಜೆ.ರಮೇಶ್, ಕೆ.ಮಲ್ಲಿಕಾರ್ಜುನ, ಮೊಬೈಲ್ ಆಚಾರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts