More

    ಸಂವಿಧಾನ ಓದಿ ಅರ್ಥೈಯಿಸಿಕೊಳ್ಳಬೇಕು; ಸಚಿವ ಸತೀಶ ಜಾರಕಿಹೊಳಿ

    ರಾಣೆಬೆನ್ನೂರ: ಸಂವಿಧಾನ ಉಳಿವು ನಮ್ಮೆಲ್ಲರ ಆದ್ಯ ಕರ್ತವ್ಯ. ಸಂವಿಧಾನದಿಂದಲೇ ನಾವೆಲ್ಲರೂ ಕೂಡ ಇಂದಿನ ಉನ್ನತ ಮಟ್ಟದ ಸ್ಥಿತಿಗೆ ತಲುಪಿದ್ದೇವೆ. ನಾವೆಲ್ಲರೂ ಸಂವಿಧಾನವನ್ನ ಓದಿ ಅರ್ಥೈಯಿಸಿಕೊಳ್ಳಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
    ನಗರದ ಡಾ. ಬಾಬು ಜಗಜೀವನರಾಮ್ ಭವನದಲ್ಲಿ ಚಲವಾದಿ ಮಹಾಸಭಾ, ಡಾ. ಬಿ.ಆರ್. ಅಂಬೇಡ್ಕರ್ ಸೇವಾ ಸಂಸ್ಥೆ, ತಾಲೂಕು ಆಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರ ಏರ್ಪಡಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತೋತ್ಸವ ಹಾಗೂ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಸರ್ಕಾರದ ವತಿಯಿಂದ ಸಂವಿಧಾನ ಪೂರ್ವಪೀಠಿಕೆ ಓದುವ ಸಂಸ್ಕೃತಿಯನ್ನು ಸರ್ಕಾರದ ಮಟ್ಟದಲ್ಲಿ ಅಯೋಜಿಸಿದ್ದು ಸರ್ಕಾರಿ ಹಾಗೂ ಸರ್ಕಾರೇತರ ಕಾರ್ಯಕ್ರಮದಲ್ಲೂ ಸಂವಿಧಾನ ಪೂರ್ವಪೀಠಿಕೆ ಓದುವ ಪರಿಪಾಠವನ್ನು ನಾವೆಲ್ಲರೂ ಕೂಡ ಅಳವಡಿಸಿಕೊಡಬೇಕು ಎಂದರು.
    ಶಾಸಕ ಪ್ರಕಾಶ ಕೋಳಿವಾಡ ಅಧ್ಯಕ್ಷತೆ ವಹಿಸಿದ್ದರು. ಓಬವ್ವನ ಇತಿಹಾಸ ಹಾಗೂ ಸಂವಿಧಾನದ ಶ್ರೇಷ್ಠತೆಯ ಕುರಿತು ರಾಜ್ಯ ಲೈಂಗಿಕ ಅಲ್ಪಸಂಖ್ಯಾತ ವೇದಿಕೆಯ ಪ್ರಧಾನ ಕಾರ್ಯದರ್ಶಿ ಅಕ್ಷತಾ ಕೆ.ಸಿ. ಉಪನ್ಯಾಸ ನೀಡಿದರು.
    ಪ್ರಮುಖರಾದ ಮಲ್ಲೇಶಪ್ಪ ಮದ್ಲೇರ, ಬಸವರಾಜ ಸಾವಕ್ಕನವರ, ಶ್ರೀಧರ ಚಲವಾದಿ, ಮಂಜುನಾಥ ಮೀನಗಲವರ, ಕರಬಸಪ್ಪ ಚಲವಾದಿ, ಧನಂಜಯ ಕಡೇಮನಿ, ಚಂದ್ರಪ್ಪ ಬೇಡರ, ಪ್ರಕಾಶ ಪೂಜಾರ, ಮಾಲತೇಶ ಸಾವಕ್ಕನವರ, ಮಾಲತೇಶ ಚಿಕ್ಕಯಡಚಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts