More

    ಓಬವ್ವನ ವೀರತನ ಎಲ್ಲರಿಗೂ ಮಾದರಿ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ವೀರ ವನಿತೆ ಒನಕೆ ಓಬವ್ವನ ಸಮಯ ಪ್ರಜ್ಞೆ ಹಾಗೂ ವೀರತನ ಎಲ್ಲರಿಗೂ ಮಾದರಿಯಾಗಿದೆ. ಸೂರ್ಯ-ಚಂದ್ರ ಇರುವವರಿಗೂ ಓಬವ್ವನ ಹೆಸರು ಅಜರಾಮರವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.
    ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ಚಿತ್ರದುರ್ಗ ಸಾಮ್ರಾಜ್ಯವನ್ನು ವೀರ ಮದಕರಿ ನಾಯಕ ಆಳ್ವಿಕೆ ಮಾಡುತ್ತಿದ್ದ. ಈ ಕೋಟೆ ಕವಾಲುಗರನಾಗಿ ಓಬವ್ವನ ಪತಿ ಕಾರ್ಯನಿರ್ವಹಿಸುತ್ತಿದ್ದ. ಪತಿ ಊಟ ಮಾಡುವಾಗ ಸಮಯದಲ್ಲಿ ಹೈದರಲಿ ಸೈನ್ಯ ದಾಳಿ ಮಾಡಿದಾಗ ವೀರತನದಿಂದ ಸೈನ್ಯ ಹಿಮ್ಮೆಟ್ಟಿದಳು. ನಿಷ್ಠೆ, ಪರಾಕ್ರಮ, ವೀರತನ, ಸಮಯ ಪ್ರಜ್ಞೆಯನ್ನು ಓಬವ್ವನನ್ನು ನೋಡಿ ಕಲಿಯಬೇಕು. ಚಿತ್ರದುರ್ಗ ಸಾಮ್ರಾಜ್ಯದ ಜನರ ಮತ್ತು ಸಂಸ್ಕೃತಿ ರಕ್ಷಿಸಲು ಓಬವ್ವ ತೋರಿದ ಧೈರ್ಯ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
    ವಿದ್ಯಾಗಿರಿ ಜೆಎಸ್‌ಎಸ್ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ವಿ.ಜಿ. ಪೂಜಾರ ವಿಶೇಷ ಉಪನ್ಯಾಸ ನೀಡಿದರು. ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಮಾಣಪತ್ರ, ಪ್ರತಿಭಾ ಪುರಸ್ಕಾರ ನೀಡಲಾಯಿತು.
    ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಎಸ್.ಬಿ.ಚಿಕ್ಕೊಪ್ಪ, ಗಿರೀಶ ಕಾಂಬಳೆ, ಲಕ್ಷ್ಮಣ ಬಕ್ಕಾಯಿ, ಸರೋಜಾ ಮುಶನ್ನವರ, ಯಲಪ್ಪ ಮಂಟೂರ, ದೇವಾನಂದ ರತ್ನಾಕರ, ಪ್ರಕಾಶ ಮಲ್ಲಿಗವಾಡ, ಇತರರು ಇದ್ದರು.
    ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ದೇವಾಶಿಖಾಮಣಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts