More

    ತುಂಬಿ ಹರಿಯುತ್ತಿರೋ ತೊಂಡಿಹಾಳ ಹಳ್ಳ: ರಸ್ತೆ ಇಲ್ಲದೇ ದಡದಲ್ಲೇ ನಿಂತಿದೆ ಬಸ್​​! ಪ್ರಯಾಣಿಕರ ಸ್ಥಿತಿ ಹೇಳತೀರದು

    ಕೊಪ್ಪಳ: ರಾಜ್ಯದ ವಿವಿದೆಡೆ ಗುರುವಾರ ಭಾರೀ ಮಳೆಯಾಗಿದ್ದು, ಅದರಲ್ಲೂ ಕರಾವಳಿ ಹಾಗೂ ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಸುರಿದ ಮಳೆಯಿಂದಾಗಿ ಭಾರೀ ಅವಾಂತರವೇ ಸೃಷ್ಟಿಯಾಗಿದೆ.

    ಕೊಪ್ಪಳ ಜಿಲ್ಲೆಯಲ್ಲೂ ಭಾರೀ ಮಳೆಯಾಗಿದ್ದು, ಇದರಿಂದ ಯಲಬುರ್ಗಾ ತಾಲೂಕಿನ ತೊಂಡಿಹಾಳ ಹಳ್ಳ ಸಂಪೂರ್ಣ ಜಲಾವೃತಗೊಂಡಿದೆ. ರಸ್ತೆ ಕಾಣದಂತೆ ಹಳ್ಳ ತುಂಬಿರುವುದರಿಂದ ಪ್ರಯಾಣಿಕರನ್ನು ಹೊತ್ತು ಬಂದ​ ಬಸ್​ ದಡದಲ್ಲೇ ನಿಂತಿದೆ.

    ತುಂಬಿ ಹರಿಯುತ್ತಿರೋ ತೊಂಡಿಹಾಳ ಹಳ್ಳ: ರಸ್ತೆ ಇಲ್ಲದೇ ದಡದಲ್ಲೇ ನಿಂತಿದೆ ಬಸ್​​! ಪ್ರಯಾಣಿಕರ ಸ್ಥಿತಿ ಹೇಳತೀರದು

    ತೊಂಡಿಹಾಳ – ಬಂಡಿಹಾಳ‌ ಸಂಪರ್ಕ ಕಡಿತಗೊಂಡಿದ್ದು, ಹಳ್ಳ ತುಂಬಿ ಹರಿಯುತ್ತಿರುವುದರಿಂದ ಜನರು ದಡದಲ್ಲೇ ಸಿಲುಕಿಕೊಂಡಿದ್ದಾರೆ. ತೊಂಡಿಹಾಳ ಗ್ರಾಮಕ್ಕೆ ಬರಬೇಕಿದ್ದ ಬಸ್​​ ಪ್ರಯಾಣಿಕರ ಜತೆ ದಡದಲ್ಲೇ ನಿಂತಿದೆ. ಪ್ರತಿ ವರ್ಷ ಮಳೆಯಾದಾಗ ಈ ಹಳ್ಳ ತುಂಬಿ ಹರಿಯತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

    ವರ್ಷಧಾರೆಗೆ ಬೆಚ್ಚಿದ ಕರಾವಳಿ, ಉತ್ತರ ಕನ್ನಡದ ಶಿರಾಲಿಯಲ್ಲಿ ಬರೋಬ್ಬರಿ 200 ಮಿಮೀ ದಾಖಲೆಯ ಮಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts