More

    ಕೃಷ್ಣಾ ನದಿಯಲ್ಲಿ ತುಂಬಿದ ಪ್ರವಾಹ; ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಹಿ, ಕುರಿಗಳು

    ಕೊಡೇಕಲ್: ಪ್ರವಾಹದಿಂದ ತತ್ತರಿಸಿರುವ ಇಲ್ಲಿಯ ಛಾಯಾಭಗವತಿ ದೇವಸ್ಥಾನದ ಹತ್ತಿರ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಒಬ್ಬ ಕುರಿಗಾಹಿ ಹಾಗೂ 230 ಕುರಿಗಳು ಸಿಕ್ಕಿ ಹಾಕಿಕೊಂಡಿವೆ.

    ಛಾಯಾ ಭಗವತಿ ದೇವಸ್ಥಾನದ ಹತ್ತಿರದ ಯಲವನ ಗಡ್ಡಿ ನಡುಗಡ್ಡೆಯಲ್ಲಿ ಕುರಿ ಮೇಯಿಸಲು ಇಬ್ಬರು ಕುರಿಗಾಹಿಗಳು ತೆರಳಿದ್ದರು. ಇವರ ಪೈಕಿ ಓರ್ವ ಕುರಿಗಾಹಿ ಸುರಕ್ಷಿತವಾಗಿ ಮರಳಿದ್ದಾನೆ.

    ಆಲಮಟ್ಟಿ ಜಲಾಶಯದಿಂದ ಬಸವಸಾಗರ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದಿರಿಂದ 21 ಗೇಟ್​​ಗಳನ್ನು ತೆರೆದು ನದಿಗೆ 2,20,620 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಇದರಿಂದ ಪ್ರವಾಹ ಉಂಟಾಗಿದೆ.

    ಈಜಿ ಬಂದ: ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ಕುರಿಗಾಹಿಗಳಿಬ್ಬರ ಪೈಕಿ ಡಾಕಪ್ಪ ಎನ್ನುವವ ಬುಧವಾರ ಆಹಾರ ಪದಾರ್ಥಗಳನ್ನು ಕೊಂಡೋಯ್ಯುವ ಸಲುವಾಗಿ ನದಿಯಲ್ಲಿ ಈಜಿಕೊಂಡು ಗ್ರಾಮಕ್ಕೆ ಬಂದಿದ್ದಾನೆ. ಆತ ಮರಳಿ ನಡುಗಡ್ಡೆಗೆ ಹೋಗಬೇಕೆಂದರೆ ಪ್ರವಾಹ ಹೆಚ್ಚಿದೆ. ತನ್ನ ಸಂಗಡಿಗ ಟೋಪಣ್ಣ(19) ಮತ್ತು ಕುರಿಗಳು ನಡುಗಡ್ಡೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಆತ ಜನರಿಗೆ ತಿಳಿಸಿದ್ದಾನೆ.

    ತಕ್ಷಣವೇ ವಿಷಯವನ್ನು ಹುಣಸಗಿ ತಹಸಿಲ್ದಾರರಿಗೆ ತಿಳಿಸಲಾಗಿದೆ. ಕೂಡಲೇ ತಹಸೀಲ್ದಾರ್ ವಿನಯಕುಮಾರ ಪಾಟೀಲ್ ಮತ್ತು ನಾರಾಯಣಪುರ ಪಿಎಸ್ಐ ಭಾಷುಮಿಯಾ ಅವರು ಕುರಿಗಾಹಿ ರಕ್ಷಣೆಗೆ ಅಗ್ನಿಶಾಮಕ ದಳದವರನ್ನು ಕರೆಸಿ ರಕ್ಷಣಾ ಕಾರ್ಯಕ್ಕೆ ಮುಂದಾಗಲು ಪ್ರಯತ್ನಿಸಿದ್ದಾರೆ. ಆದರೆ ಹೆಚ್ಚಿದ ಪ್ರವಾಹ ಮತ್ತು ನದಿಯಲ್ಲಿರುವ ದೊಡ್ಡ ದೊಡ್ಡ ಬಂಡೆಗಳು ರಕ್ಷಣಾ ಕಾರ್ಯಕ್ಕೆ ಹಿನ್ನಡೆಯುಂಟು ಮಾಡಿದೆ.

    ಎನ್​ಡಿಆರ್​ಎಫ್​​  ಕರೆ: ನಡುಗಡ್ಡೆಯಲ್ಲಿ ಸಿಲುಕಿಕೊಂಡಿರುವ ಕುರಿಗಾಹಿ ರಕ್ಷಣೆ ಅಗ್ನಿಶಾಮಕ ದಳದವರಿಂದ ಅಸಾಧ್ಯವಾಗಿದ್ದರಿಂದ ಎನ್​ಡಿಆರ್​ಎಫ್​​ತಂಡದ ಸಹಾಯವನ್ನು ಜಿಲ್ಲಾಧಿಕಾರಿ ಮೂಲಕ ಕೇಳಿದ್ದು, ರಕ್ಷಣೆಗೆ ತಂಡ ಶೀಘ್ರ ಆಗಮಿಸಲಿದೆ ಎಂದು ತಹಸೀಲ್ದಾರ್ ವಿನಯಕುಮಾರ ಪಾಟೀಲ್ ಮಾಹಿತಿ ನೀಡಿದರು.

    ಶಾಸಕ ನರಸಿಂಹನಾಯಕ ಭೇಟಿ: ಕುರಿಗಾಹಿ ಸಿಲುಕಿದ ಸುದ್ದಿ ತಿಳಿದ ಶಾಸಕ ನರಸಿಂಹನಾಯಕ ಸ್ಥಳಕ್ಕೆ ಭೇಟಿ ನೀಡಿದ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು, ಕುರಿಗಾಹಿಯನ್ನು ರಕ್ಷಣೆ ಮಾಡುವ ಕುರಿತಂತೆ ಜಿಲ್ಲಾಧಿಕಾರಿಗಳ ಜತೆ ಮಾತನಾಡಿದ್ದಾರೆ. ಅಲ್ಲದೆ ನಿರಂತರ ಸಂಪರ್ಕದಲ್ಲಿದ್ದು, ಘಟನಾ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts