More

    ಪ್ರಜಾಪ್ರಭುತ್ವ ವ್ಯವಸ್ಥೆ ಉಳಿವಿಗೆ ಅಭಿಯಾನ

    ಕಲಬುರಗಿ: ದೇಶದಲ್ಲಿ ಸಂವಿಧಾನ ಸಂರಕ್ಷಣೆ, ಪ್ರಜಾಪ್ರಭುತ್ವ ವ್ಯವಸ್ಥೆ ಉಳಿವಿಗಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜನಾಂದೋಲನ ರೂಪಿಸಲಾಗಿದೆ ಎಂದು ಭಾರತ ಜೋಡೋ ಅಭಿಯಾನ ಸಿವಿಲ್ ಸೊಸೈಟಿಯ ಪ್ರಮುಖ ಯೋಗೇಂದ್ರ ಯಾದವ ತಿಳಿಸಿದರು.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂತ್ವ, ಕೋಮುಭಾವನೆ ವಿಷ ಬೀಜ ದೇಶ ಒಡಕು ಮಾಡುವ ಭಾವನೆ ಅವರಲ್ಲಿದೆ. ಎಸ್‌ಸಿ, ಎಸ್‌ಟಿ, ಓಬಿಸಿ, ಆದಿವಾಸಿ, ಅಲ್ಪಸಂಖ್ಯಾತರು, ರೈತ ಪರ ಸಂಘಟನೆಗಳ ಒಗ್ಗೂಡಿ, ದೇಶದ ಆಯ್ದ ೧೦೦ ಕ್ಷೇತ್ರಗಳಲ್ಲಿ ಭೇಟಿ ನೀಡಿ ಪ್ರಚಾರ ನಡೆಸಿದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ದುರಾಡಳಿತ, ಸುಳ್ಳು ಭರವಸೆಗಳ ಬಗ್ಗೆ ಮನೆ ಮನೆಗೆ ಪ್ರಚಾರ ಮಾಡಲಾಗುತ್ತಿದೆ ಎಂದರು.
    ಉತ್ತರಪ್ರದೇಶ, ರಾಜಸ್ಥಾನ, ಹರಿಯಾಣ, ಬಿಹಾರ, ಮಹಾರಾಷ್ಟç ಮತ್ತು ಕರ್ನಾಟಕ ರಾಜ್ಯದಲ್ಲಿ ಬಿಜೆಪಿಗೆ ನಿರೀಕ್ಷೆ ತಕ್ಕಂತೆ ಹೆಚ್ಚಿನ ಸ್ಥಾನಗಳು ಲಭಿಸುವುದಿಲ್ಲ. ಮತದಾರರು ಜಾಗೃತರಾಗಿದ್ದು, ಯೋಚಿಸಿ, ಯೋಜಿಸಿ ಯೋಗ್ಯರಿಗೆ ಮತ ಚಲಾಯಿಸುತ್ತಿದ್ದಾರೆ. ಹೀಗಿರುವಾಗ ಅಬ್ ಕೀ ಬಾರ್ ಚಾರಸ್ಸೋ ಫಾರ್ ಮಾನಸಿಕ ಆಟವಾಗಿದೆ. ೪೦೦ ಅಲ್ಲ ೪೨೦ ವಂಚಿಸುವ ಕೆಲಸವಾಗಿದೆ ಎಂದು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts