More

    ಪೊಲೀಸರ ಪಾಡು ಹೇಳತೀರದ್ದು..; ಕೈಚೆಲ್ಲಿ ಕುಳಿತಿದ್ದಾರೆ ಮುಖ್ಯಮಂತ್ರಿ

    ಮುಂಬೈ: ದೇಶದಲ್ಲಿ ಅತ್ಯಂತ ಹೆಚ್ಚು ಕರೊನಾ ಸೋಂಕಿತರು ಇರುವುದು ಮಹಾರಾಷ್ಟ್ರದಲ್ಲಿ. ಅದರಲ್ಲೂ ಮುಂಬೈ, ಪುಣೆಯಲ್ಲಿಯೇ ಅಧಿಕ ಸೋಂಕಿತರು ಇದ್ದಾರೆ.

    ಅದರಲ್ಲೂ ಈ ಕೊವಿಡ್​-19ಕ್ಕೆ ತುತ್ತಾಗುತ್ತಿರುವ ಪೊಲೀಸರ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಮಹಾರಾಷ್ಟ್ರದಲ್ಲಿ 700ಕ್ಕೂ ಅಧಿಕ ಪೊಲೀಸರಿಗೆ ಸೋಂಕು ತಗುಲಿದ್ದು, ಐವರು ಮೃತಪಟ್ಟಿದ್ದಾರೆ. ಈಗ ಒಟ್ಟಾರೆ 648 ಸಕ್ರಿಯ ಕೇಸ್​​ಗಳು ಇವೆ ಎಂದು ರಾಜ್ಯ ಪೊಲೀಸ್​ ಇಲಾಖೆ ತಿಳಿಸಿದೆ. ಕಳೆದ 24 ಗಂಟೆಯಲ್ಲೇ ಬರೋಬ್ಬರಿ 157 ಪೊಲೀಸರಲ್ಲಿ ಕರೊನಾ ಕಾಣಿಸಿಕೊಂಡಿದೆ.

    ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆನೆ, ಹುಲಿಯನ್ನು ದತ್ತು ಪಡೆದ ಶಾಸಕ ಎಂ.ಕೃಷ್ಣಪ್ಪ…

    ಹಾಗೇ ದೇಶದಲ್ಲಿ ಲಾಕ್​ಡೌನ್​ ಮೊದಲು ಪ್ರಾರಂಭವಾಗಿದ್ದು ಮಾರ್ಚ್​ 25ರಂದು. ಅಂದಿನಿಂದ ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಅತಿ ಹೆಚ್ಚು ಹಲ್ಲೆಯಾಗಿದೆ. ಮಾ.25ರಿಂದಲೂ ಇಲ್ಲಿಯವರೆಗೆ ಪೊಲೀಸರ ಮೇಲೆ ನಡೆದ ಹಲ್ಲೆಯ ಒಟ್ಟು 194 ಪ್ರಕರಣಗಳು ದಾಖಲಾಗಿವೆ. ಅದಕ್ಕೆ ಸಂಬಂಧಪಟ್ಟಂತೆ 689 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್​ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

    ಮಹಾರಾಷ್ಟ್ರದಲ್ಲಿ 20,000ದೆಡೆಗೆ ಸೋಂಕಿತರ ಸಂಖ್ಯೆ ಏರುತ್ತಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರೂ ಕೂಡ ನಮ್ಮಿಂದ ಸೋಂಕು ಹರಡುವ ಸರಪಣಿಯನ್ನು ಕತ್ತರಿಸಿ, ವೈರಸ್​ ನಿಯಂತ್ರಣ ಮಾಡುವುದು ಕಷ್ಟವಾಗುತ್ತಿದೆ ಎಂದು ಒಪ್ಪಿಕೊಂಡು ಕೈ ಚೆಲ್ಲಿ ಕುಳಿತಿದ್ದಾರೆ.

    ಇದನ್ನೂ ಓದಿ: ಶ್ವೇತಭವನದಲ್ಲಿ ಏರುತ್ತಲೇ ಇದೆ ಕರೊನಾ ಸೋಂಕಿತರ ಸಂಖ್ಯೆ…ಇವಾಂಕಾ ಟ್ರಂಪ್​ ಅಪಾಯದಲ್ಲಿ?

    ಹಾಗೇ ನಮಗೆ ಲಾಕ್​ಡೌನ್​ನ್ನು ತುಂಬ ದಿನಗಳ ಕಾಲ ಮುಂದುವರಿಸಲಾಗುವುದಿಲ್ಲ. ಆದಷ್ಟು ಬೇಗ ಸೋಂಕು ನಿಯಂತ್ರಣವಾಗಿ, ಲಾಕ್​ಡೌನ್​ನಿಂದ ಹೊರಬರಬೇಕು ಎಂದರೆ, ಕೆಲವು ಶಿಸ್ತು, ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲೇಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್​ ಧರಿಸಲೇಬೇಕು ಎಂದಿದ್ದಾರೆ. (ಏಜೆನ್ಸೀಸ್)

    ಛತ್ತೀಸ್​ಗಢ ಮಾಜಿ ಸಿಎಂ ಅಜಿತ್​ ಜೋಗಿಗೆ ಕಾರ್ಡಿಯಾಕ್ ಅರೆಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts