More

    ಪಾಕಿಸ್ತಾನದಲ್ಲಿ ಶೇ.30ರಷ್ಟು ನಕಲಿ ಪೈಲಟ್​​ಗಳು…ಹಣ ಕೊಟ್ಟು ಲೈಸನ್ಸ್​ ಪಡೆದವರು !

    ಇಸ್ಲಮಾಬಾದ್​: ಪಾಕಿಸ್ತಾನದ ನಾಗರಿಕ ವಿಮಾನಗಳ ಪೈಲಟ್​ಗಳಲ್ಲಿ ಶೇ.30ರಷ್ಟು ಪೈಲಟ್​ಗಳು ನಕಲಿ ಲೈಸೆನ್ಸ್​ ಹೊಂದಿದ್ದಾರೆ ಎಂಬ ಸತ್ಯವನ್ನು ಅಲ್ಲಿನ ವಿಮಾನಾಯನ ಸಚಿವ ಗುಲಾಂ ಸರ್ವರ್ ಖಾನ್​ ಅವರೇ ತಿಳಿಸಿದ್ದಾರೆ.

    ನಾಗರಿಕ ವಿಮಾನದ ಪ್ರತಿ ಮೂವರು ಪೈಲಟ್​​ಗಳಲ್ಲಿ ಓರ್ವ ಪೈಲಟ್​ ನಕಲಿ ಲೈಸನ್ಸ್​ ಹೊಂದಿದ್ದಾನೆ. ವಿಮಾನ ಹಾರಿಸಲು ಅರ್ಹತೆ ಹೊಂದಿರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

    ನ್ಯಾಷನಲ್ ಅಸೆಂಬ್ಲಿಯನ್ನುದ್ದೇಶಿಸಿ ಮಾತನಾಡಿದ ಸಚಿವ, ಪಾಕಿಸ್ತಾನದಲ್ಲಿ 260ಕ್ಕೂ ಹೆಚ್ಚು ಪೈಲಟ್​ಗಳು ಹಣ ಕೊಟ್ಟು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ನಕಲಿ ಲೈಸೆನ್ಸ್​ ಪಡೆದಿದ್ದಾರೆ. ಇದಕ್ಕಾಗಿ ಗಣ್ಯರ ಪ್ರಭಾವನ್ನು ಬಳಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ-ಚೀನಾ ಗಡಿ ಬಿಕ್ಕಟ್ಟು: ಪರಿಸ್ಥಿತಿ ಗಂಭೀರವಾಗಿದೆ ಎಂದ ಬ್ರಿಟಿಷ್​ ಪ್ರಧಾನಿ

    ಹಾಗೇ ನಕಲಿ ಲೈಸೆನ್ಸ್​ ಹೊಂದಿದ್ದವರನ್ನು ಪತ್ತೆ ಹಚ್ಚಿ, ಅವರನ್ನು ಕೆಲಸದಿಂದ ತೆಗೆಯುವ ಕೆಲಸವನ್ನು ಪಾಕಿಸ್ತಾನ ಅಂತಾರಾಷ್ಟ್ರೀಯ ಏರ್​ಲೈನ್ಸ್​ ಮಾಡಿದೆ ಎಂದಿದ್ದಾರೆ.

    ಪಾಕಿಸ್ತಾನದಲ್ಲಿ ದೇಶೀಯ ವಿಮಾನಗಳು, ಅಂತಾರಾಷ್ಟ್ರೀಯ ವಿಮಾನಗಳೆಲ್ಲ ಸೇರಿ 850ಕ್ಕೂ ಹೆಚ್ಚು ಪೈಲಟ್​ಗಳು ಇದ್ದಾರೆ. ಇತ್ತೀಚೆಗೆ ಕರಾಚಿಯ ಜನವಸತಿ ಪ್ರದೇಶದಲ್ಲಿ ವಿಮಾನ ಬಿದ್ದು ಸುಮಾರು 97 ಮಂದಿ ಸತ್ತಿದ್ದರು. ಅದಾದ ಬಳಿಕ ಪಿಐಎಯಿಂದ ತನಿಖೆ ಕೈಗೊಳ್ಳಲಾಗಿತ್ತು. ಈ ತನಿಖೆಯ ವೇಳೆ ಶೇ.30ರಷ್ಟು ಪೈಲಟ್​ಗಳ ಬಳಿ ಇರುವುದು ನಕಲಿ ಪರವಾನಗಿ ಎಂಬುದು ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕರಾಚಿಯಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ ಬ್ಯಾಗ್​ನಲ್ಲಿ ಸಿಕ್ಕ ವಸ್ತುವನ್ನು ನೋಡಿ ತಬ್ಬಿಬ್ಬಾದ ರಕ್ಷಣಾ ಸಿಬ್ಬಂದಿ

    ಮೇ 22ರಂದು ನಡೆದ ಕರಾಚಿ ವಿಮಾನ ದುರಂತಕ್ಕೆ ಪೈಲಟ್​​ನ ಅತಿಯಾದ ಆತ್ಮವಿಶ್ವಾಸ ಮತ್ತು ಏಕಾಗ್ರತೆ ಇಲ್ಲದಿರುವುದೇ ಕಾರಣ. ಅಂದು ಏರ್​ ಟ್ರಾಫಿಕ್​ ಕಂಟ್ರೋಲರ್​ಗಳು ನೀಡಿದ್ದ ಮಾರ್ಗದರ್ಶನವನ್ನು ಪೈಲಟ್​ ನಿರ್ಲಕ್ಷ್ಯ ಮಾಡಿದ್ದ. ವಿಮಾನ ಎಂಜಿನ್​​ನಲ್ಲಿ ಉಂಟಾಗಿದ್ದ ಘರ್ಷಣೆ ಬಗ್ಗೆ ಮಾಹಿತಿ ನೀಡಿರಲಿಲ್ಲ. ಅಂದು ವಿಮಾನದಲ್ಲಿದ್ದ ಪೈಲಟ್​ಗಳು ಕರೊನಾ ಬಗ್ಗೆ ಚರ್ಚೆ ಮಾಡುತ್ತಿದ್ದರು. ಹಾಗಾಗಿ ತಮ್ಮ ಕೆಲಸದ ಮೇಲೆ ಗಮನ ಇರಲಿಲ್ಲ. ಆಗ ಪ್ಲೇನ್​​ನ್ನು ಇನ್ನಷ್ಟು ಮೇಲಕ್ಕೆ ಹಾರಿಸುವಂತೆ ಏರ್​ ಟ್ರಾಫಿಕ್ ಕಂಟ್ರೋಲರ್​ನಿಂದ ಸೂಚನೆ ಹೋಗಿದೆ. ಆದರೆ ಅದನ್ನು ನಿರ್ಲಕ್ಷಿಸಿದ ಪೈಲಟ್​ಗಳು ನಾವು ಮ್ಯಾನೇಜ್​ ಮಾಡುತ್ತೇವೆ ಎಂದಿದ್ದಾರೆ. ಇದೆಲ್ಲದರ ಪರಿಣಾಮ ದುರಂತ ಸಂಭವಿಸಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ನಟ ಸುಶಾಂತ್​ ಸಿಂಗ್​ ರಜಪೂತ್​ ಹಾದಿ ತುಳಿದ 16 ವರ್ಷದ ಟಿಕ್​ಟಾಕ್​ ನಟಿಯ ದುರಂತ ಅಂತ್ಯ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts