More

    ಮಾಸ್ಕ್ ಹಂಚಿದ ನಿಡಸೋಸಿ ಜಗದ್ಗುರು

    ಸಂಕೇಶ್ವರ: ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮದ ದುರದುಂಡೀಶ್ವರ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಅವರು, ಕರೊನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಬುಧವಾರ ಮನೆಮನೆಗೆ ತೆರಳಿ 2,000ಕ್ಕೂ ಹೆಚ್ಚು ಮಾಸ್ಕ್ ವಿತರಿಸಿ ಕಾಳಜಿ ಮೆರೆದಿದ್ದಾರೆ.
    ಶ್ರೀಗಳ ಸೂಚನೆ ಮೇರೆಗೆ ಗ್ರಾಮದಲ್ಲಿ ಹೊಲಿಗೆ ಯಂತ್ರ ಹೊಂದಿರುವ 20ಕ್ಕೂ ಹೆಚ್ಚು ಗೃಹಣಿಯರು ಹಾಗೂ ದರ್ಜಿಗಳು ಶ್ರೀಮಠಕ್ಕೆ 2,000ಕ್ಕೂ ಹೆಚ್ಚು ಮಾಸ್ಕ್ ತಯಾರಿಸಿ ಕೊಟ್ಟಿದ್ದರು. ಶ್ರೀಗಳು ಅದನ್ನು ಗ್ರಾಮದ ಮನೆ ಮನೆಗೂ ತೆರಳಿ ವಿತರಿಸಿದರು. ಕರೊನಾ ತಡೆಯುವ ನಿಟ್ಟಿನಲ್ಲಿ ಶ್ರೀಗಳು ಇಟ್ಟಿರುವ ಹೆಜ್ಜೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

    ಶ್ರೀಮಠದಲ್ಲಿ ದರ್ಶನ ನಿಂತರೂ ಧರ್ಮದ ಕಾರ್ಯ ನಿಲ್ಲಬಾರದು ಎನ್ನುವ ಉದ್ದೇಶ ಶ್ರೀಗಳದ್ದು. ಮಾರುಕಟ್ಟೆಯಲ್ಲಿ ಮಾಸ್ಕ್‌ಗಳ ಕೊರತೆ ಎದುರಾಗಿದ್ದನ್ನು ಮನಗಂಡು ಮಠದಿಂದಲೇ ಬಟ್ಟೆ, ದಾರ ಸೇರಿ ಅಗತ್ಯ ಸಾಮಗ್ರಿ ಒದಗಿಸಿ ಮಾಸ್ಕ್ ತಯಾರಿಸಿ ಕೊಡಲು ಭಾನುವಾರ ಶ್ರೀಗಳು ಕರೆ ನೀಡಿದ್ದರು. ಅನೇಕ ಗೃಹಿಣಿಯರು ಹಗಲು, ರಾತ್ರಿ ಎನ್ನದೆ ಮಾಸ್ಕ್ ತಯಾರಿಸಿದ್ದಾರೆ. ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರ ಸಹಯೋಗದೊಂದಿಗೆ ಮಾಸ್ಕ್ ವಿತರಿಸಿದ ಶ್ರೀಗಳು, ಜನರು ಮನೆ ಬಿಟ್ಟು ಹೊರಗೆ ಬಾರದಂತೆ ಜಾಗೃತಿ ಮೂಡಿಸಿದರು.

    ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಮಾಸ್ಕ್ ಬಗ್ಗೆ ಅರಿವಿಲ್ಲ. ಮಾಸ್ಕ್ ಖರೀದಿಸಬೇಕೆಂದರೂ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಎಲ್ಲರಿಗೂ ಮಾಸ್ಕ್ ಲಭ್ಯವಾಗಬೇಕೆಂದು ಶ್ರೀಮಠದಿಂದಲೇ ಮಾಸ್ಕ್ ತಯಾರಿಸಿ ಹಂಚಲಾಗುತ್ತಿದೆ. ತಾಲೂಕಿನ ಎಲ್ಲ ಗ್ರಾಮಗಳಲ್ಲಿಯೂ ಮಾಸ್ಕ್ ವಿತರಣೆ ಮಾಡಬೇಕೆಂಬ ಉದ್ದೇಶವಿದೆ.
    |ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ನಿಡಸೋಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts