More

    ಪಿಎಸ್‌ಐ ಪರೀಕ್ಷೆಗೆ ವಸ್ತ್ರ ಸಂಹಿತೆ: ಟೋಪಿ, ಮಾಸ್ಕ್, ನೀರಿನ ಬಾಟೆಲ್ ನಿಷೇಧಿಸಿದ ಪರೀಕ್ಷಾ ಪ್ರಾಧಿಕಾರ

    ಬೆಂಗಳೂರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆ ನೇಮಕಾತಿಗೆ ಇದೇ 23ರಂದು ನಡೆಸುತ್ತಿರುವ ಮರು ಪರೀಕ್ಷೆ ಯನ್ನು ತುಂಬ ಕಟ್ಟುನಿಟ್ಟಾಗಿ ನಡೆಸಲು ನಿರ್ಧರಿಸಿದ್ದು, ಪರೀಕ್ಷಾ ಕೇಂದ್ರಕ್ಕೆ ಟೋಪಿ, ಮಾಸ್ಕ್ ಧರಿಸುವುದು ಮತ್ತು ಕುಡಿಯುವ ನೀರಿನ ಬಾಟಲ್ ತರುವುದನ್ನು ನಿಷೇಧಿಸಿದೆ.

    ಪರೀಕ್ಷೆಗೆ ಸಂಬಂಧಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವಸ್ತ್ರಸಂಹಿತೆಯನ್ನು ಪ್ರಕಟಿಸಿದೆ. ಆ ಪ್ರಕಾರ ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಅಂಗಿಗಳನ್ನು ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ರಹಿತ ಅಂಗಿಗಳನ್ನು ಧರಿಸಲು ಆದ್ಯತೆ ನೀಡಬೇಕು.

    ಜೇಬುಗಳು ಇಲ್ಲದಿರುವ/ಕಡಿಮೆ ಜೇಬುಗಳಿರುವ ಪ್ಯಾಂಟ್ ಅನ್ನು ಧರಿಸಬೇಕು. ಕುರ್ತಾ, ಪೈಜಾಮ, ಜೀನ್ಸ್ ಪ್ಯಾಂಟ್‌ಗೆ ಅನುಮತಿ ಇಲ್ಲ. ಜಿಪ್ ಪಾಕೆಟ್‌ಗಳು, ದೊಡ್ಡ ಬಟನ್ ಮತ್ತು ವಿಸ್ತಾರವಾದ ಕಸೂತಿ ಬಟ್ಟೆಗಳನ್ನು ಧರಿಸಬಾರದು.

    ಪರೀಕ್ಷಾ ಕೇಂದ್ರದೊಳಗೆ ಶೂಗಳನ್ನು ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಸ್ಯಾಂಡಲ್ ಅಥವಾ ತೆಳುವಾದ ಚಪ್ಪಲಿಗಳನ್ನು ಧರಿಸುವುದು ಸೂಕ್ತ. ಅಭ್ಯರ್ಥಿಗಳು ಕುತ್ತಿಗೆಯ ಸುತ್ತು ಯಾವುದೇ ಲೋಹದ ಆಭರಣಗಳನ್ನು ಧರಿಸುವುದು, ಕಿವಿಯೋಲೆ, ಉಂಗುರ ಮತ್ತು ಕಡಗಗಳನ್ನು ನಿಷೇಧಿಸಲಾಗಿದೆ.

    ಮಹಿಳಾ ಅಭ್ಯರ್ಥಿಗಳು ಕಸೂತಿ, ಹೂ, ಬ್ರೂಜ್ ಅಥವಾ ಬಟನ್ ಹೊಂದಿರುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಪೂರ್ಣತೋಳಿನ ಬಟ್ಟೆಗಳು/ಜೀನ್ಸ್ ಪ್ಯಂಟ್ ಧರಿಸಬಾರದು. ಹೀಲ್ಡ್ ಚಪ್ಪಲಿಗಳೂ, ಶೂಗಳನ್ನು ನಿಷೇಧಿಸಲಾಗಿದೆ. ತೆಳುವಾದ ಚಪ್ಪಲಿಗಳನ್ನು ಧರಿಸಬೇಕು. ಮಂಗಳಸೂತ್ರ ಮತ್ತು ಕಾಲುಂಗರ ಹೊರತುಪಡಿಸಿ ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸಲು ಅವಕಾಶವಿಲ್ಲ.

    ಎಲ್ಲ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ೆನ್, ಪೆನ್‌ಡ್ರೈವ್, ಇಯರ್ ೆನ್, ಮೈಕೋ್ರೆೆನ್, ಬ್ಲೂಟೂತ್ ಮತ್ತು ಕೈ ಗಡಿಯಾರ ಧರಿಸಲು ಅವಕಾಶವಿಲ್ಲ. ಪರೀಕ್ಷಾ ಕೇಂದ್ರದಲ್ಲಿಯೇ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ನೀರಿನ ಬಾಟಲ್‌ಗೂ ಅನುಮತಿ ನೀಡಿಲ್ಲ. ಜಾಮಿಟ್ರಿ ಬಾಕ್ಸ್ ಹಾಗೂ ಪೆನ್ನು, ಪೆನ್ಸಿಲ್‌ಗೂ ಅನುಮತಿ ಇಲ್ಲ.

    ಇನ್ನು ಪ್ರತಿ ಬಾರಿ ಗೊಂದಲ ಸೃಷ್ಟಿಸುತ್ತಿಲ್ಲ ಧಾರ್ಮಿಕ ವಸದ ಕುರಿತಂತೆ ಯಾವುದೇ ನಿಯಮಗಳನ್ನು ಉಲ್ಲೇಖಿಸಿಲ್ಲ. ಸರ್ಕಾರದಿಂದ ಮಾನ್ಯವಾದ ೆಟೋ ಸಹಿತ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು. ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದಲ್ಲಿ ಅಭ್ಯರ್ಥಿಗಳ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts