More

    ಟೋಲ್ ವಿನಾಯಿತಿ ರದ್ದತಿಗೆ ಆಕ್ರೋಶ

    ಕೋಟ: ರಾಷ್ಟ್ರೀಯ ಹೆದ್ದಾರಿ 66ರ ಅಸಮರ್ಪಕ ಮತ್ತು ಅವೈಜ್ಞಾಾನಿಕ ಕಾಮಗಾರಿ ಹಾಗೂ ಸ್ಥಳೀಯರಿಗೆ ಸುಂಕ ವಿಧಿಸುವುದನ್ನು ವಿರೋಧಿಸಿ ಬೃಹತ್ ಹೋರಾಟ ನಡೆಸಿ ವಿನಾಯಿತಿ ದೊರಕಿಸಿದ್ದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಸ್ಥಳೀಯರ ಸಹಕಾರದೊಂದಿಗೆ ಫಾಸ್ಟಾೃಗ್‌ನಿಂದ ವಿನಾಯಿತಿಗಾಗಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದೆ. ಈ ಬಗ್ಗೆ ಚರ್ಚಿಸಲು ಫೆ.5ರಂದು ಸಾಯಂಕಾಲ 4.30ಕ್ಕೆ ಸಾಸ್ತಾನದ ಶಿವಕೃಪಾ ಸಭಾಂಗಣದಲ್ಲಿ ಸ್ಥಳೀಯ ಜಿಪಂ ವ್ಯಾಪ್ತಿಯ ಸಾರ್ವಜನಿಕರ ಸಭೆ ಕರೆದಿದೆ.

    2018ರಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸಮ್ಮುಖದಲ್ಲಿ ಕೋಟ ಜಿ.ಪಂ. ಕ್ಷೇತ್ರ ವ್ಯಾಪ್ತಿಯ ವಾಹನಗಳಿಗೆ ಟೋಲ್ ವಿನಾಯಿತಿ ನೀಡಲಾಗಿತ್ತು. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಹಾಗೂ ಜಿಲ್ಲಾಡಳಿತದ ಹಾಗೂ ಹೆದ್ದಾರಿ ಅಧಿಕಾರಿಗಳ ಸಮ್ಮುಖದಲ್ಲೇ ತೆಗೆದುಕೊಂಡ ಈ ನಿರ್ಣಯ ಜಾರಿಯಲ್ಲಿರುವಂತೆ ಈಗ ಫೆಬ್ರವರಿ 15ರಿಂದ ಎಲ್ಲ ವಿನಾಯಿತಿಗಳನ್ನು ರದ್ದುಗೊಳಿಸವ ಬಗ್ಗೆ ಹಾಗೂ ಸ್ಥಳೀಯರು ಕೂಡ ಟೋಲ್ ಪಾವತಿಸಬೇಕು ಎಂಬ ಏಕಪಕ್ಷೀಯ ನಿರ್ಧಾರದ ಬಗ್ಗೆ ಹೆದ್ದಾರಿ ಜಾಗೃತಿ ಸಮಿತಿ ಇತ್ತೀಚೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts