More

    ಡಿಪೋ ವ್ಯವಸ್ಥಾಪಕರ ವಿರುದ್ಧ ಆಕ್ರೋಶ

    ಬೇಲೂರು: ಊರುಗಳಿಗೆ ತೆರಳಲು ಸರಿಯಾದ ಬಸ್ ವ್ಯವಸ್ಥೆ ಇಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಡಿಪೋ ವ್ಯವಸ್ಥಾಪಕರು ಮತ್ತು ಅಧಿಕಾರಿಗಳ ವಿರುದ್ಧ ಗುರುವಾರ ರಾತ್ರಿ ಪ್ರತಿಭಟನೆ ನಡೆಸಿದರು.

    ಪಟ್ಟಣದ ಬಸ್ ನಿಲ್ದಾಣದ ಟಿಸಿ ಕೊಠಡಿ ಮುಂಭಾಗ ಜಮಾಯಿಸಿದ ಪ್ರಯಾಣಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಸಂದರ್ಭ ಮೂಡಿಗೆರೆ-ಗೆಂಡೇಹಳ್ಳಿ ಮಾರ್ಗದ ಬಸ್ ಬಂದಿದ್ದರಿಂದ ಸಮಾಧಾನಗೊಂಡ ಪ್ರಯಾಣಿಕರು, ಪ್ರತಿಭಟನೆ ಕೈಬಿಟ್ಟರು. ನಿತ್ಯ ನಿಗದಿತ ಸಮಯಕ್ಕೆ ಬಸ್ ಬಿಡಬೇಕು ಎಂದು ಆಗ್ರಹಿಸಿದರು.

    ಸಂಜೆ 5 ಗಂಟೆಯ ನಂತರ ಗೆಂಡೇಹಳ್ಳಿ ಮಾರ್ಗವಾಗಿ ಮೂಡಿಗೆರೆಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಬಾರದ ಕಾರಣ ದೂರದ ಊರುಗಳಿಗೆ ತೆರಳಲು ಕಷ್ಟವಾಗುತ್ತಿದೆ. ರಾತ್ರಿ 8 ಗಂಟೆಯಾದರೂ ಬಸ್ ಇಲ್ಲದೆ ನಿಲ್ದಾಣದಲ್ಲೇ ಕಾಲ ಕಳೆಯುವಂತಾಗಿದೆ. ಜತೆಗೆ ವಿದ್ಯಾರ್ಥಿಗಳೂ ಪರಿತಪಿಸುವಂತಾಗಿದೆ. ಟಿಸಿ ವಿಚಾರಿಸಿದರೆ ಸಬೂಬು ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಇದು ಮುಂದುವರಿದರೆ ರಸ್ತೆ ಸಂಚಾರ ತಡೆ ದು ಪ್ರತಿಭಟಿಸಬೇಕಾಗುತ್ತದೆ ಎಂದು ಮೂಡಿಗೆರೆ-ಗೆಂಡೇಹಳ್ಳಿ ನಾರ್ಗದ ಪ್ರಯಾಣಿಕ ಮಧು ಎಚ್ಚರಿಸಿದರು.

    ಪ್ರತಿಭಟನೆಯಲ್ಲಿ ಮೂಡಿಗೆರೆ-ಗೆಂಡೇಹಳ್ಳಿ ಮಾರ್ಗದ ಪ್ರಯಾಣಿಕರಾದ ನಂದಿನಿ, ಶರತ್, ಪ್ರಜ್ವಲ್, ಕುಮಾರ್, ಶೇಖರ್, ರವಿ ಆಚಾರಿ, ಮಂಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts