More

    ನಿರುದ್ಯೋಗ ಹೋಗಲಾಡಿಸಲು ಯುವ ಕೌಶಲ ಕರ್ನಾಟಕ ಯೋಜನೆ ಜಾರಿ

    ಕೆ.ಆರ್.ನಗರ: ವಿದ್ಯಾವಂತರು ಹಾಗೂ ಯುವಕರಿಗೆ ಸ್ವಂತ ಉದ್ಯೋಗಕ್ಕೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಸರ್ಕಾರದಿಂದ ‘ಯುವ ಕೌಶಲ ಕರ್ನಾಟಕ’ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಎನ್.ಎಸ್.ಶಿವಣ್ಣ ಹೇಳಿದರು.

    ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಗುರುವಾರ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಯುವ ಕೌಶಲ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರುದ್ಯೋಗವನ್ನು ಹೋಗಲಾಡಿಸುವ ಗುರಿ ಹೊಂದಿರುವ ಸರ್ಕಾರ ನಮ್ಮ ಇಲಾಖೆಯ ಮೂಲಕ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ ಎಂದು ತಿಳಿಸಿದರು.

    ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು, ಪದವಿ ಕಾಲೇಜುಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ ಕನಿಷ್ಠ ಎಸ್‌ಎಸ್‌ಎಲ್‌ಸಿ ಪಾಸಾಗಿರುವ 18 ರಿಂದ 35 ವರ್ಷದೊಳಗಿನವರು ನೋಂದಣಿ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

    ನೋಂದಾಯಿತರಿಗೆ ಇಲಾಖೆಯ ವತಿಯಿಂದ ಮೃದು ಕೌಶಲ ತರಬೇತಿ ನೀಡಿ ಉದ್ಯೋಗಾರ್ಹತೆ ಮಟ್ಟವನ್ನು ಹೆಚ್ಚಿಸಿ ಅವರೊಡನೆ ಸಮಾಲೋಚನೆ ನಡೆಸಲಾಗುವುದು. ಜತೆಗೆ ಅವರಲ್ಲಿರುವ ಕೊರತೆಗಳನ್ನು ಅರಿತು ಮತ್ತಷ್ಟು ಸೂಕ್ತ ತರಬೇತಿ ನೀಡಿ ಮೌಲ್ಯಮಾಪನ ಮಾಡಲಾಗುವುದು. ಸುಮಾರು 245 ವೃತ್ತಿಗಳಲ್ಲಿ 5 ವೃತ್ತಿಗಳನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಲಾಗುವುದು. ಇದಕ್ಕೆ ಸರ್ಕಾರ ಹಣ ಸಂದಾಯ ಮಾಡುತ್ತದೆ ಎಂದರು.

    ನಂತರ ತರಬೇತಿ ಪಡೆದವರಿಗೆ ತರಬೇತಿ ಸಂಸ್ಥೆಯೇ ಉದ್ಯೋಗ ಕೊಡಿಸುವ ಜತೆಗೆ ಸಾಲಸೌಲಭ್ಯವನ್ನು ಇಲಾಖೆ ಮೂಲಕ ಕೊಡಲಾಗುವುದು. ಕಾಲೇಜಿನ 500ಕ್ಕು ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡಿದ್ದು, 200 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.

    ಪ್ರಾಂಶುಪಾಲ ಪ್ರೊ.ಪ್ರಸನ್ನಕುಮಾರ್, ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕಿ ರಾಣಿ, ಕಿರಿಯ ತರಬೇತಿ ಅಧಿಕಾರಿ ಮಂಜುನಾಥ್ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts