More

    ನಮ್ಮ ಮಂಗಳೂರು ರೇಖಾಚಿತ್ರ ಪಯಣ

    ಮಂಗಳೂರು: ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ಮಂಗಳೂರು ಘಟಕ ಹಮ್ಮಿಕೊಂಡ ಪಾರಂಪರಿಕ ತಾಣಗಳ ರೇಖಾಚಿತ್ರಗಳ ಸರಣಿ ‘ಎಕ್ಸ್‌ಪ್ಲೋರಿಂಗ್ ನಮ್ಮ ಮಂಗಳೂರು’ನ ಅಂಗವಾಗಿ ಕಲಾವಿದ ವಿಲ್ಸನ್ ಡಿಸೋಜ ನಗರದ ಪ್ರಮುಖ ತಾಣಗಳ ರೇಖಾಚಿತ್ರ ರಚಿಸಿದರು.

    ರೇಖಾ ಚಿತ್ರ ಪಯಣ ಹಳೇ ಡಿಸಿ ಕಚೇರಿ ಆವರಣದಿಂದ ಪ್ರಾರಂಭವಾಯಿತು. ಲೇಖಕ ವಿಲಿಯಂ ಪಾಯಸ್ ಮಾತನಾಡಿ ನಮ್ಮ ಪೂರ್ವಜರು ಬಿಟ್ಟು ಹೋಗಿರುವ ಅಮೂಲ್ಯ ಪರಂಪರೆಯನ್ನು ಉಳಿಸಬೇಕು. ಪಾರಂಪರಿಕ ತಾಣಗಳ ಅದ್ಬುತ ರೇಖಾಚಿತ್ರಗಳು ಮುಂದಿನ ಪೀಳಿಗೆಗೆ ಶಾಶ್ವತ ದಾಖಲಾತಿಯಾಗಲಿವೆ ಎಂದರು.

    ಮಂಗಳೂರಿನ ಪ್ರಮುಖ ನೈಸರ್ಗಿಕ ಸ್ಥಳಗಳು ಮತ್ತು ನಿರ್ಮಿತ ಪರಂಪರೆಯ ದಾಖಲೀಕರಣಕ್ಕಾಗಿ ಇಂಟಾಕ್ ಮತ್ತು ಆರ್ಟ್ ಕೆನರಾ ಟ್ರಸ್ಟ್ ಆರಂಭಿಸಿರುವ ಮಂಗಳೂರು ಕಲೆ ಮತ್ತು ಆರ್ಕೈವಲ್ ಯೋಜನೆ ಭಾಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ . ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ರೇಖಾಚಿತ್ರಗಳು ಮತ್ತು ಛಾಯಾಚಿತ್ರಗಳ ಪ್ರದರ್ಶನದೊಂದಿಗೆ ಸರಣಿಯು ಮುಕ್ತಾಯಗೊಳ್ಳಲಿದೆ ಎಂದು ಇಂಟಾಕ್‌ನ ಮಂಗಳೂರು ಘಟಕದ ಸಂಚಾಲಕ ಸುಭಾಷ್ ಚಂದ್ರ ಬಸು ತಿಳಿಸಿದರು.

    ವಿಲ್ಸನ್ ಸೋಜ ಅವರಿಗೆ ಮಹಾಲಸಾ ಕಾಲೇಜ್ ಆಫ್ ವಿಷುಯಲ್ ಆರ್ಟ್‌ನ ಪ್ರಾಧ್ಯಾಪಕ ಸೈಯದ್ ಆಸಿಫ್ ಅಲಿ ಸಾಥ್ ನೀಡಿದರು. ನೇಮಿರಾಜ್ ಶೆಟ್ಟಿ, ರಾಜೇಂದ್ರ ಕೇದಿಗೆ, ಸಂತೋಷ್ ಅಂದ್ರಾದೆ, ಹರೀಶ್ ಕೊಡಿಯಾಲಬೈಲ್ ಮೊದಲಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts