More

    ಕರೊನಾ ಮುಂದೆ ಇತರ ರೋಗಗಳು ಗೌಣ: ಶಾಸಕ ಜಿ.ಬಿ.ಜ್ಯೋತಿಗಣೇಶ್

    ತುಮಕೂರು: ನಾಯಿ ಅತ್ಯಂತ ವಿಶ್ವಾಸಾರ್ಹ ಪ್ರಾಣಿ, ಹಾಗೆಂದ ವಾತ್ರಕ್ಕೆ ಅದು ಕಡಿದಾಗ ನಿರ್ಲಕ್ಷ್ಯ ವಹಿಸುವುದು ಬೇಡ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

    ನಗರದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರೇಬಿಸ್ ದಿನಾಚರಣೆಯಲ್ಲಿ ಮಾತನಾಡಿದರು. ಕರೊನಾದಿಂದ ಇಂದು ಹಲವು ರೋಗಗಳು ಮರೆತೇ ಹೋಗಿವೆ. ಆದರೂ ರೇಬಿಸ್‌ನಂಥ ವಾರಾಣಾಂತಿಕ ರೋಗಗಳ ಬಗ್ಗೆ ಇಲಾಖೆ ಎಚ್ಚೆತ್ತುಕೊಂಡು ತನ್ನ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾನೀಯ ಎಂದರು.

    ಮೇಯರ್ ಫರೀಧಾಬೇಗಂ ವಾತನಾಡಿ, ಈ ರೋಗದ ಬಗ್ಗೆ ಜಾಗೃತಿ ಅಗತ್ಯ, ಬೀದಿ ನಾಯಿಗಳಿಗೆ ಲಸಿಕೆ ಹಾಕಿಸುವ ಸಂಬಂಧ ಪಾಲಿಕೆಯಿಂದ ಪಶುವೈದ್ಯಕೀಯ ಇಲಾಖೆಗೆ ಎಲ್ಲ ರೀತಿಯ ನೆರವು ನೀಡಲು ಸಿದ್ಧ ಎಂದರು.
    ಡಿಎಚ್‌ಒ ಡಾ.ನಾಗೇಂದ್ರಪ್ಪ ವಾತನಾಡಿ, ಪ್ರಾಣಿ ಜನ್ಯ ರೋಗಗಳಿಂದ ಜನರನ್ನು ರಕ್ಷಿಸಲು ಸರ್ಕಾರ ಹಲವು ಸವಲತ್ತು ನೀಡಿದೆ. ಹುಚ್ಚು ನಾಯಿ ಕಡಿತದ ವಿರುದ್ಧ ಲಸಿಕೆ ಸಾಕಷ್ಟು ಲಭ್ಯವಿದೆ ಎಂದರು. ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಕೊಟ್ರೇಶಪ್ಪ ವಾತನಾಡಿ, ಈ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ. ಯುರೋಪ್‌ನ ಹಲವು ರಾಷ್ಟ್ರಗಳು ಈಗಾಗಲೇ ರೇಬಿಸ್‌ಮುಕ್ತವಾಗಿವೆ ಎಂದರು.

    ಡಾ.ನವೀನ್ ಜವಳಿ, ಜಿಲ್ಲಾ ಪಶುವೈದ್ಯಕೀಯ ಸಂದ ಅಧ್ಯಕ್ಷ ಡಾ.ರುದ್ರಪಸಾದ್, ಕುರಿ ಅಭಿವೃದ್ದಿ ಮಂಡಳಿ ಉಪನಿರ್ದೇಶಕ ಡಾ.ನಾಗಣ್ಣ, ಇನ್ನರ್ ವ್ಹೀಲ್ ಕ್ಲಬ್‌ನ ಪ್ರಿಯಾ ಪ್ರದೀಪ್, ಪಶುವೈದ್ಯಕೀಯ ಸಂದ ಉಪಾಧ್ಯಕ್ಷ ಡಾ.ದಿವಾಕರ್, ಡಾ.ಶಶಿಕಾಂತ್ ಬೂದಿಹಾಳ್,ಡಾ.ನಾಗ ಭೂಷಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts