More

    ಮೂಲ ಸೌಲಭ್ಯ ಕಲ್ಪಿಸಲು ಪ್ರಯತ್ನ

    ರಾಮದುರ್ಗ: ಪಟ್ಟಣದ ಜನತೆಗೆ ಮೂಲ ಸೌಲಭ ಕಲ್ಪಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದ್ದಾರೆ. ಪಟ್ಟಣದ ವಿಠ್ಠಲ ಪೇಟೆಯ ಭೋರಾದೇವಿ ಗುಡಿ ಹತ್ತಿರ ಪುರಸಭೆಯಿಂದ ಏರ್ಪಡಿಸಿದ್ದ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರೊನಾ ಸಾಂಕ್ರಾಮಿಕ ರೋಗದಿಂದ ಪಟ್ಟಣ ಜನತೆ ತತ್ತರಿಸಿ ಹೋಗಿದ್ದಾರೆ. ಜೀವದ ಹಂಗು ತೊರೆದು ಕರ್ತವ್ಯ ನಿಷ್ಠೆ ತೋರಿದ ಪೌರಕಾರ್ಮಿಕರ ಸೇವೆ ಅನನ್ಯ ಎಂದು ಶ್ಲಾಘಿಸಿದರು.

    ಕಾರ್ಮಿಕರಿಗೆ ನೀಡಿದ ಮಾಸ್ಕ ಮತ್ತು ಕೈಗವಸು ಬಳಿಸಿ ಸ್ವಚ್ಛತಾ ಸಿಬ್ಬಂದಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಪುರಸಭೆ ಮಾಜಿ ಸದಸ್ಯ ಮುದ್ದಿ, ವಿಠ್ಠಲ ಪೇಟೆಯಲ್ಲಿ ಅಗತ್ಯವಿರುವ ಕಾಮಗಾರಿ ಶೀಘ್ರ ಪ್ರಾರಂಭಿಸಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿದರು. ಪುರಸಭೆ ಸದಸ್ಯರಾದ ಪ್ರಲ್ಹಾದ ಬಡಿಗೇರ, ನಾಗರಾಜ ಕಟ್ಟಿಮನಿ, ಎಸ್.ಜಿ.ಅಂಬಿಗೇರ, ವೆಂಕಟೇಶ ಕಾಮಣ್ಣವರ, ಎಂ.ಪಿ.ನದಾಫ್ ಇದ್ದರು.

    ಮಾಸ್ಕ ವಿತರಣೆ: ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ತಾಲೂಕು ಘಟಕ ಏರ್ಪಡಿಸಿದ್ದ ಉಚಿತ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಮಹಾದೇವಪ್ಪ ಯಾದವಾಡ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದರು. ಆತ್ಮ ನಿರ್ಭರ ಯೋಜನೆಯಡಿ ಕೇಂದ್ರ 10 ಸಾವಿರ ರೂ.ಸಾಲ ನೀಡಲಾಗುವುದು ಎಂದರು. ಹುಸೇನಬಾಷಾ ಮಹಮ್ಮದಲಿ, ಅಪ್ಪಣ್ಣ ಬಾಡಗಾರ, ದಾದಾಪೀರ್ ಕಲೈಗಾರ, ಮಹಾದೇವಿ ವರಗಮಾರ, ಪುರಸಭೆ ಮುಖ್ಯಾಧಿಕಾರಿ ಎಸ್.ಜಿ.ಅಂಬಿಗೇರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts