More

    ಸಂಘಟನೆಗಳು ಬಡವರಿಗೆ ನೆರವಾಗಲಿ

    ಸಂಕೇಶ್ವರ: ಯುವಜನರು ಸಂಘಟನೆಗಳ ಮೂಲಕ ಸಮಾಜ ಸೇವೆಯತ್ತ ಮುಖ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಬಡವರಿಗೆ ನೆರವಾಗಬೇಕು ಎಂದು ಯುವ ಮುಖಂಡ ಪವನ ಕತ್ತಿ ಹೇಳಿದರು.

    ಸಮೀಪದ ಕಮತನೂರ ಗ್ರಾಮದ ಅಡವಿಸಿದ್ಧೇಶ್ವರ ಮಠದ ಆವರಣದಲ್ಲಿ ಈಚೆಗೆ ಸಂಕಲ್ಪ ಸೋಷಿಯಲ್ ಡೆವಲಫಮೆಂಟ್ ಫೌಂಡೇಷನ್ ಉದ್ಘಾಟಿಸಿ ಮಾತನಾಡಿದರು. ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲತೆಗೆ ಬೇಸಿಗೆ ರಜೆ ಶಿಬಿರ, ಬಡ ಜನರಿಗೆ ಮೂಲ ಸೌಕರ್ಯ ಒದಗಿಸುವ ಮೂಲಕ ಸಂಘಟನೆಗಳು ಸಮಾಜ ಸೇವೆಗೆ ಮುಂದಾಗಬೇಕು ಎಂದರು.

    ಕಮತನೂರ ಅಡವಿಸಿದ್ಧೇಶ್ವರ ಮಠದ ಕೃಪಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಫೌಂಡೇಷನ್ ಅಧ್ಯಕ್ಷ ಜ್ಯೋತಿಬಾ ಮಗದುಮ್ಮ ಮಾತನಾಡಿದರು. ಕಲ್ಲಣ್ಣ ಚೌಗಲಾ, ಭರಮಗೌಡ ಪಾಟೀಲ, ಶಿವಗೌಡ ಪಾಟೀಲ, ರಾಜೇಶ್ವರಿ ಗೋಟಿ, ಸುರೇಶ ಬೋರಗಲ್ಲಿ, ಅಪ್ಪಯ್ಯ ಬೋರಗಲ್ಲಿ, ಶಿವಪ್ಪ ಮಂಗಸೂಳಿ, ಕಲ್ಲಪ್ಪ ಕಮತೆ, ಭೀಮಪ್ಪ ತಂಗಡಿ, ಸಾತಪ್ಪ ಹಿರೇಕೋಡಿ, ಕಿರಣ ಹಿರೇಕೋಡಿ, ಕಾಶಿನಾಥ ಖಾಡಿ, ಬಾಬುರಾವ ಚೌಗಲಾ, ದುಂಡೇಶ ಚೌಗಲಾ, ಭಾಗೀರತಿ ಪಾಟೀಲ, ದೀಪಾ ಖಾಡಿ, ಸಂತೋಷ ಬಡಕಂಬಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts