More

    ಶಿಷ್ಯವೇತನ ಕಡಿತಕ್ಕೆ ವಿರೋಧ

    ವಿಜಯಪುರ: ಶಿಷ್ಯವೇತನ (ಫೆಲೋಷಿಪ್) ಕಡಿತಗೊಳಿಸಿರುವುದನ್ನು ಖಂಡಿಸಿ ಡೆಮಾಕ್ರಟಿಕ್ ರಿಸರ್ಚ್ ಸ್ಕಾಲರ್ಸ್ ಸಂಘಟನೆ (ಡಿಆರ್‌ಎಸ್‌ಒ) ನೇತೃತ್ವದಲ್ಲಿ ಅಕ್ಕಮಹಾದೇವಿ ವಿವಿ ಮುಖ್ಯದ್ವಾರದ ಮುಂದೆ ಸಂಶೋಧನಾ ವಿದ್ಯಾರ್ಥಿನಿಯರು ಸೋಮವಾರ ಪ್ರತಿಭಟನೆ ನಡೆಸಿದರು.
    ಈ ವೇಳೆ ಡಿಆರ್‌ಎಸ್‌ಒ ಸದಸ್ಯೆ ಗೀತಾ ಎಚ್. ಮಾತನಾಡಿ, ಕರೊನಾ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಹಂತದಲ್ಲಿ ಸಂಶೋಧನಾ ವಿದ್ಯಾರ್ಥಿನಿಯರ ಶಿಷ್ಯವೇತನವನ್ನು 15ರಿಂದ 8 ಸಾವಿರ ರೂ.ಗೆ ಕಡಿತ ಮಾಡಲಾಗಿದೆ ಹಾಗೂ ಪ್ರಗತಿ ವರದಿ ಶುಲ್ಕವನ್ನು ಕೂಡ ಹೆಚ್ಚಿಸಿದ್ದಾರೆ. ಸಂಶೋಧನಾ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯವಿಲ್ಲ. ಇದ್ದರೂ ಅದರ ಶುಲ್ಕ ಕೂಡ ಜಾಸ್ತಿಯಾಗಿದೆ. ಐದು ತಿಂಗಳಿಂದ ಶಿಷ್ಯವೇತನವನ್ನು ನೀಡಿಲ್ಲ. ಈ ರೀತಿಯಾದರೆ ವಿದ್ಯಾರ್ಥಿನಿಯರು ಸಂಶೋಧನೆಯನ್ನು ಅರ್ಧಕ್ಕೆ ಕೈಬಿಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯದಲ್ಲಿರುವ ಏಕೈಕ ಮಹಿಳಾ ವಿಶ್ವವಿದ್ಯಾಲಯಕ್ಕೆ ಸಾಕಷ್ಟು ವಿದ್ಯಾರ್ಥಿನಿಯರು ಬಡತನದಿಂದಲೇ ಸಂಶೋಧನೆಗೆ ಬರುತ್ತಾರೆ. ಆದ್ದರಿಂದ ಈ ಕೂಡಲೇ ನಿಗದಿಪಡಿಸಿದ ಶಿಷ್ಯವೇತನವನ್ನು ಬಿಡುಗಡೆ ಮಾಡಬೇಕು ಹಾಗೂ ಹಾಸ್ಟೆಲ್ ಸಮಸ್ಯೆ ಮತ್ತು ಪ್ರಗತಿ ವರದಿ ಶುಲ್ಕವನ್ನು ಕೂಡ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು. ದೀಪಾಲಿ, ತ್ರಿವೇಣಿ, ಗೀತಾ ರಾಠೋಡ, ವಿಜಯಲಕ್ಷ್ಮಿ, ಜ್ಞಾನಸುಂದರಿ, ಶೋಭಾ ಎಸ್. ಮುಂತಾದವರು ಭಾಗವಹಿಸಿದ್ದರು.

    ಶಿಷ್ಯವೇತನ ಕಡಿತಕ್ಕೆ ವಿರೋಧ
    ಶಿಷ್ಯವೇತನ ಕಡಿತಕ್ಕೆ ವಿರೋಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts