More

    ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ಲಾಭ

    ಕೂಡ್ಲಿಗಿ: ಪ್ರಸ್ತುತ ದಿನದಲ್ಲಿ ರೈತರು ಬೆಳೆಯುವುದಕ್ಕೆ ಸಿಮೀತರಾಗಬಾರದು. ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವ ಕಡೆ ಗಮನ ಹರಿಸಿದರೆ ಮಾತ್ರ ಲಾಭಗಳಿಕೆ ದುಪ್ಪಾಟಗಲಿದೆ ಎಂದು ಸಾವಯವ ಕೃಷಿಕ ಎಂ.ಬಸವರಾಜ ಕಕ್ಕುಪ್ಪಿ ವಿಶ್ವಾಸ ವ್ಯಕ್ತಪಡಿಸಿದರು.

    ನರ್ಬಾಡ್ ಸಂಸ್ಥೆಯಿಂದ ಸಾವಯವ ಕೃಷಿಗೆ ಆರ್ಥಿಕ ಸಹಾಯ

    ತಾಲೂಕಿನ ಸಾಸಲವಾಡ ಗ್ರಾಮದಲ್ಲಿ ಸ್ನೇಹ ಸಂಕಲ್ಪ ಸೇವಾಶ್ರಮ ಟ್ರಸ್ಟ್ ಶುಕ್ರವಾರ ರೈತರಿಗೆ ಗ್ರಾಮ ಮಟ್ಟದ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರದಲ್ಲಿ ಮಾತನಾಡಿದರು. ಕೂಡ್ಲಿಗಿ ತಾಲೂಕು ಮಳೆಯಾಶ್ರಿತ ಪ್ರದೇಶವಾಗಿದೆ. ಅರಣ್ಯ ಕೃಷಿಗಳಾದ ಹುಣಸೇ, ಬೇಲ, ಸೀತಾಫಲ, ಸಪೋಟ ಬೆಳೆಗಳನ್ನು ಬೆಳೆದು ಮೌಲ್ಯವರ್ಧನೆ ಮಾಡಿಕೊಳ್ಳಬೇಕು. ಬಳಿಕ ಮಾರಾಟ ಮಾಡಿದಾಗ ಅಧಿಕ ಲಾಭ ಪಡೆಯಲು ಸಹಾಯವಾಗಲಿದೆ. ಇನ್ನು ನರ್ಬಾಡ್ ಸಂಸ್ಥೆಯು ಸಾವಯವ ಕೃಷಿಗೆ ಆರ್ಥಿಕ ಸಹಾಯ ನೀಡಲಿದೆ. ರೈತರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

    ಇದನ್ನೂ ಓದಿ: ಮೊದಲ ಪತ್ನಿ ಜೀವಂತ ಇರುವಾಗ ಸರ್ಕಾರಿ ನೌಕರರು 2ನೇ ಮದುವೆ ಆಗುವಂತಿಲ್ಲ! ಆಗಿದ್ದಲ್ಲಿ ಕಠಿಣ ಕ್ರಮದ ಎಚ್ಚರಿಕೆ

    ಸ್ನೇಹ ಸಂಕಲ್ಪ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೇಮನ ಗೌಡ ಪ್ರಾಸ್ತಾವಿಕ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರ್ಕಾರದ ಯೋಜನೆಗಳು ಸಂಪೂರ್ಣ ಡಿಜಿಟಲೀಕರಣವಾಗಿದೆ. ಅದನ್ನು ರೈತರು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕಾಗಿದೆ. ಕ್ಷಣಾರ್ಧದಲ್ಲಿ ಯೋಜನೆಗಳು ಹಾಗೂ ಬ್ಯಾಂಕ್ ಸೌಲಭ್ಯಗಳ ಕುರಿತಾಗಿ ಮಾಹಿತಿ ದೊರಕಲಿದೆ. ಎಲ್ಲ ರೈತರು ಡಿಜಿಟಲ್ ಮಾಧ್ಯಮವನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.
    ಸ್ನೇಹ ಸಂಕಲ್ಪ ಸಂಸ್ಥೆಯ ಕೆ.ಸೋಮಶೇಖರ, ಕೆ.ಎಚ್.ಎಂ.ಸಚಿನ್ ಕುಮಾರ್, ನವೀನ್, ನಾಗರಾಜ್, ವಿನಯ್, ಕೆ. ವೀರಣ್ಣ, ನಂದಿ ಜಂಬಣ್ಣ, ಆನಂದ್, ನಂದಿ ರಾಜೇಶ್, ವೀರೇಶ್, ಡಿ.ಗಂಗಮ್ಮ, ಅಕ್ಕಮ್ಮ ಸೇರಿದಂತೆ ರೈತರು, ಗ್ರಾಮಸ್ಥರು ಮತ್ತು ಮಹಿಳೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts