More

    ಮೊದಲ ಪತ್ನಿ ಜೀವಂತ ಇರುವಾಗ ಸರ್ಕಾರಿ ನೌಕರರು 2ನೇ ಮದುವೆ ಆಗುವಂತಿಲ್ಲ! ಆಗಿದ್ದಲ್ಲಿ ಕಠಿಣ ಕ್ರಮದ ಎಚ್ಚರಿಕೆ

    ದೀಸ್ಪುರ್​: ಮೊದಲ ಪತ್ನಿ ಜೀವಂತ ಇರುವಾಗ ಎರಡನೇ ಮದುವೆಯಾಗಲು ಸರ್ಕಾರಿ ನೌಕರರಿಗೆ ಯಾವುದೇ ಅವಕಾಶ ಇರುವುದಿಲ್ಲ ಎಂದು ಅಸ್ಸಾಂ ಸರ್ಕಾರ ಸ್ಪಷ್ಟನೆ ನೀಡಿದೆ. ಒಂದು ವೇಳೆ ಮದುವೆಯಾಗುವುದಾದರೆ ಅಂಥವರು ಸರ್ಕಾರದಿಂದ ವಿಶೇಷ ಅನುಮತಿಯನ್ನು ಪಡೆಯಬೇಕಾಗುತ್ತದೆ ಎಂದು ತಿಳಿಸಿದೆ.

    ಈ ಆದೇಶವನ್ನು ಯಾರು ಉಲ್ಲಂಘಿಸುತ್ತಾರೋ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಹಿಮಂತ್​ ಬಿಸ್ವ ಶರ್ಮ ತಿಳಿಸಿದ್ದಾರೆ. ಮೃತ ಸರ್ಕಾರಿ ನೌಕರನ ಇಬ್ಬರು ಪತ್ನಿಯರಿಗೆ ಪಿಂಚಣಿ ನೀಡುವ ವಿಚಾರದಲ್ಲಿ ತಕರಾರು ಇರುವುದರಿಂದ ಪ್ರಸ್ತುತ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ಧರಿಸಲಾಗಿದೆ ಎಂದು ಶರ್ಮ ಹೇಳಿದರು.

    ಸರ್ಕಾರಿ ನೌಕರನು ತನ್ನ ಹೆಂಡತಿ ಜೀವಂತವಾಗಿರುವಾಗ ಸರ್ಕಾರದ ಅನುಮತಿಯಿಲ್ಲದೆ ಮರುಮದುವೆ ಆಗಬಾರದು ಎಂದು ಸಿಬ್ಬಂದಿ ಇಲಾಖೆಯ ಕಚೇರಿ ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ. ಆದಾಗ್ಯೂ, ವಿಚ್ಛೇದನದ ಮಾನದಂಡಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಸಿಬ್ಬಂದಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೀರಜ್ ವರ್ಮ ಅವರು ಅಕ್ಟೋಬರ್ 20ರಂದು ಈ ಕುರಿತು ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಅಸ್ಸಾಂ ನಾಗರಿಕ ಸೇವಾ ನಿಯಮಗಳು 1965ರ ನಿಯಮ 26ರ ನಿಬಂಧನೆಗಳ ಅಡಿಯಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

    ನಮ್ಮ ಸೇವಾ ನಿಯಮಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಅಡಿಯಲ್ಲಿ ಯಾವುದೇ ಉದ್ಯೋಗಿ ಎರಡನೇ ಮದುವೆಗೆ ಅರ್ಹರಲ್ಲ. ಕೆಲವು ಧರ್ಮಗಳು ಎರಡನೇ ಮದುವೆಗೆ ಅವಕಾಶ ನೀಡಿದರೆ, ಅವರು ರಾಜ್ಯ ಸರ್ಕಾರದಿಂದ ಅನುಮತಿ ಪಡೆಯಬೇಕು. ನೌಕರನ ಮರಣದ ನಂತರ ಪಿಂಚಣಿಗಾಗಿ ಇಬ್ಬರೂ ಸಂಗಾತಿಗಳು ಜಗಳವಾಡುವ ಸಂದರ್ಭಗಳಿವೆ. ಆ ವಿವಾದಗಳನ್ನು ಪರಿಹರಿಸುವುದು ತುಂಬಾ ಕಷ್ಟ. ಈ ನಿಯಮ ಈಗಾಗಲೇ ಇತ್ತು ಆದರೆ, ನಾವು ಅದನ್ನು ಪಾಲಿಸಿರಲಿಲ್ಲ. ಈಗ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ನೀರಜ್ ವರ್ಮಾ ಹೇಳಿದರು. (ಏಜೆನ್ಸೀಸ್​)

    ಹುಲಿ ಉಗುರು ಲಾಕೆಟ್​​​ ಪ್ರಕರಣ; ಜೈಲು ಸೇರಿದ್ದ ಬಿಗ್​ ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​​​​ಗೆ ಜಾಮೀನು

    ಇದೊಂದಿದ್ರೆ ಸಾಕು, ಬ್ಯಾಂಕ್​ ಖಾತೆಯೇ ಬೇಕಾಗಿಲ್ಲ: ಹಣ ಪಾವತಿ-ಸ್ವೀಕೃತಿ ಎಲ್ಲವೂ ಬ್ಯಾಂಕ್ ಅಕೌಂಟ್ ಇಲ್ಲದೆಯೂ ಸಾಧ್ಯ!

    ಹುಲಿ ಉಗುರು ಕೇಸ್​: ಜಾಮೀನು ಪಡೆದ ವರ್ತೂರು ಸಂತೋಷ್​​ ಮತ್ತೆ ಬಿಗ್​ಬಾಸ್​ ಮನೆಗೆ ಹೋಗ್ತಾರಾ? ಇಲ್ಲಿದೆ ಉತ್ತರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts