More

    ಕಲಾವಿದರಿಗೆ ಅವಕಾಶ ಕಲ್ಪಿಸಲು ಮನವಿ

    ವಿಜಯಪುರ: ಮದುವೆ, ಹುಟ್ಟು ಹಬ್ಬ, ಜಾತ್ರೆ, ದಸರಾ, ಗಣಪತಿ ಹಬ್ಬ ಇನ್ನಿತರ ಸಮಾರಂಭಗಳಿಗೆ ಆರ್ಕೆಸ್ಟ್ರಾ ಮತ್ತು ನಾಟಕ ಕಂಪನಿಗಳು ನಡೆಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ಉತ್ತರ ಕರ್ನಾಟಕ ಕಲಾವಿದರ ಕಲ್ಯಾಣ ವೇದಿಕೆ ವತಿಯಿಂದ ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರಿಗೆ ಮನವಿ ಸಲ್ಲಿಸಲಾಯಿತು.
    ವೇದಿಕೆ ರಾಜ್ಯಾಧ್ಯಕ್ಷ ಶಕ್ತಿಕುಮಾರ ಉಕುಮನಾಳ ಮಾತನಾಡಿ, ಲಾಕ್‌ಡೌನ್‌ನಿಂದಾಗಿ ಮೂರು ತಿಂಗಳು ಕಳೆದರು ಕಲಾವಿದರಿಗೆ ಯಾವ ಕಾರ್ಯಕ್ರಮಗಳು ಇಲ್ಲದೆ ಒಂದು ಹೊತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿ ಬಂದಿದೆ. ವೃತ್ತಿ ರಂಗಭೂಮಿ ಕಲಾವಿದರು ಹಾಗೂ ಆರ್ಕೆಸ್ಟ್ರಾ ಕಲಾವಿದರು ಕಲೆಯನ್ನು ಬಿಟ್ಟು ಬೇರೆ ಯಾವ ಕೆಲಸ ಬರುವುದಿಲ್ಲ. ಕಲೆಯನ್ನು ನಂಬಿ ಜೀವನ ಮಾಡುತ್ತಿದ್ದಾರೆ. ಆದ್ದರಿಂದ ಆರ್ಕೆಸ್ಟ್ರಾ ಮತ್ತು ನಾಟಕಗಳನ್ನು ಮಾಡಲು ಅನುಮತಿ ಕೊಡಬೇಕೆಂದು ಮನವಿ ಮಾಡಿದರು.

    ರಾಜ್ಯ ಉಪಾಧ್ಯಕ್ಷರಾದ ಯಾಜ ಕಲಾದಗಿ, ಪ್ರಶಾಂತ ಚೌಧರಿ, ಜಿಲ್ಲಾಧ್ಯಕ್ಷ ಸೋಮಶೇಖರ ರಾಠೋಡ, ಕಲಾವಿದರಾದ ಯಾಸೀನ ಕಲಾದಗಿ, ಯಾಸೀನ ಜಿಗರ, ರವಿ ಕೋರಿ, ಪ್ರಕಾಶ ಮಹೇಂದ್ರಕರ, ದತ್ತಾತ್ರೆಯ ಹಿಪ್ಪರಗಿ, ಆನಂದ ಹೂಗಾರ, ಚಿದಾನಂದ ಕಾಂಬಳೆ, ಪರಶುರಾಮ ವಿಜಯಪುರ, ಆಶಾ ಬಾಗವಾನ, ಸುಭದ್ರಮ್ಮ ಕರಜಗಿ, ನೀತಾ ಮೈದರಗಿ, ವಿರೇಶ ಹಿರೇಮಠ, ಅನಿಲ್ ಚವಾಣ್‌ಇನ್ನಿತರರು ಭಾಗವಹಿಸಿದ್ದರು.

    ಕಲಾವಿದರಿಗೆ ಅವಕಾಶ ಕಲ್ಪಿಸಲು ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts