More

    ನಿಮ್ಮ ಕಣ್ಣಿಗೊಂದು ಸವಾಲ್​: ಎರಡರಲ್ಲಿ ಯಾವ ಕುದುರೆಗೆ ಸೇರಿದ ತಲೆ ಎಂಬುದನ್ನು ಗೆಸ್​ ಮಾಡುವಿರಾ?

    ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ದೃಷ್ಟಿ ಭ್ರಮೆ ಎಂದರೇನು?

    ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

    ಇದನ್ನೂ ಓದಿ: ಟ್ವಿಟರ್​ ಬರ್ಡ್​ಗೆ ವಿದಾಯ: ಲೋಗೋ ಬದಲಾಯಿಸಿ ರೀಬ್ರ್ಯಾಂಡ್​ ಮಾಡಲು ಎಲನ್​ ಮಸ್ಕ್​ ಪ್ಲ್ಯಾನ್​

    ಮೋಜಿನ ಮಾರ್ಗ

    ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ. ನೆಟ್ಟಿಗರು ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ತಮ್ಮನ್ನು ಮನರಂಜಿಸುವ ಮೋಜಿನ ಮಾರ್ಗವಾಗಿದೆ ಮತ್ತು ಸ್ನೇಹಿತರೊಂದಿಗೆ ತಮ್ಮ ಬುದ್ಧಿವಂತಿಕೆಯನ್ನು ಸಾಬೀತುಪಡಿಸುವ ಮಾರ್ಗವಾಗಿದೆ ಎಂದು ಭಾವಿಸುತ್ತಾರೆ. ಇದರ ಹೊರತಾಗಿ, ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್​ಗಳು ಸಹ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

    ನಿಮ್ಮ ವೀಕ್ಷಣಾ ಕೌಶಲ್ಯವನ್ನು ಹೆಚ್ಚಿಸಲು ನೀವು ಬಯಸುವಿರಾ? ಹಾಗಾದರೆ, ಈ ಸವಾಲನ್ನು ಸ್ವೀಕರಿಸಿ….

    Horse Head
    ಸದ್ಯ ವೈರಲ್​​​ ಆಗಿರುವ ಫೋಟೋದಲ್ಲಿ ಎರಡು ಕುದುರೆ ಎದುರು-ಬದುರು ನಿಂತಿರುವುದನ್ನು ಕಾಣಬಹುದು. ಆದರೆ, ಇಲ್ಲೊಂದು ಗೊಂದಲವಿದೆ. ಅದೇನೆಂದರೆ, ಎರಡು ಕುದುರೆ ಇದ್ದರು ಕಾಣುತ್ತಿರುವುದು ಮಾತ್ರ ಒಂದೇ ತಲೆ. ಆದರೆ, ಆ ತಲೆ ಯಾವ ಕುದುರೆಗೆ ಸೇರಿದ್ದು ಎಂಬದುನ್ನು ಪತ್ತೆಹಚ್ಚಬೇಕು. ಆದರೆ, ಪತ್ತೆಹಚ್ಚುವುದು ಸುಲಭವಲ್ಲ. ಎರಡೂ ಕುದುರೆ ಒಂದೇ ರೀತಿ ಇರುವುದರಿಂದ ತಲೆ ಯಾವ ಕುದುರೆಗೆ ಸೇರಿದ್ದು ಎಂಬುದನ್ನು ಹೇಳಲು ಕಷ್ಟವಾಗುತ್ತದೆ. ಆದರೆ, ಸೂಕ್ಷ್ಮವಾಗಿ ಗಮನಿಸಿದರೆ ಕಂಡುಹಿಡಿಯಬಹುದು. ನಿಮಗೆ 10 ಸೆಕೆಂಡ್​ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ತಲೆಯು ಎರಡರಲ್ಲಿ ಯಾವ ಕುದುರೆಗೆ ಸೇರಿದ್ದು ಎಂಬುದುನ್ನು ಪತ್ತೆಹಚ್ಚಬೇಕು. ನಿಮ್ಮ ಸಮಯ ಈಗ ಶುರು.

    ಇದನ್ನೂ ಓದಿ: SSLC ಫೇಲಾದ ಬಳಿಕ ಕೃಷಿಯತ್ತ ಮುಖ: ಕೈಹಿಡಿದ ಟೊಮ್ಯಾಟೋ, ಒಂದೇ ತಿಂಗಳಲ್ಲಿ 1.8 ಕೋಟಿ ರೂ. ಲಾಭ

    10 ಸೆಕೆಂಡ್​ ಸಮಯದಲ್ಲಿ ನೀವು ಯಾವ ಕುದುರೆಗೆ ಸೇರಿದ ತಲೆ ಎಂದು ಗುರುತಿಸಿದ್ದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ಫುಲ್​ ಮಾರ್ಕ್ಸ್​ ಕೊಟ್ಟುಬಿಡಿ. ಒಂದು ವೇಳೆ ಗುರುತಿಸಲು ಸಾಧ್ಯವಾಗದೇ, ಇನ್ನೂ ಗೊಂದಲದಲ್ಲಿದ್ದರೆ, ಉತ್ತರ ನಾವು ಹೇಳುತ್ತೇವೆ ಮುಂದೆ ಓದಿ.

    ಅಂದಹಾಗೆ ತಲೆಯು ಎರಡನೇ ಅಥವಾ ಬಲಭಾಗದ ಕುದುರೆಗೆ ಸೇರಿದ್ದಾಗಿದೆ. ಹೇಗೆಂದರೆ, ಎರಡನೇ ಕುದುರೆಯು ಅದರ ಕೂದಲಿನ ಬಣ್ಣಕ್ಕೆ ಹೊಂದಿಕೆಯಾಗುವ ಗಾಢ ಬಣ್ಣದ ಕುತ್ತಿಗೆಯ ಕೂದಲನ್ನು ಅನ್ನು ಹೊಂದಿದೆ ಎಂಬುದು ಸೂಕ್ಷ್ಮವಾಗಿ ಗಮನಿಸಿದಾಗ ತಿಳಿಯುತ್ತದೆ. ಮೊದಲ ಕುದುರೆಯು ಎರಡನೆಯದಕ್ಕಿಂತ ಹಗುರವಾದ ಮತ್ತು ಚಿಕ್ಕದಾದ ಕೂದಲನ್ನು ಹೊಂದಿದೆ. ಈ ಸಣ್ಣ ವ್ಯತ್ಯಾಸವು ನಮ್ಮ ಮೆದುಳಿಗೆ ತಲೆಯು ಯಾವ ಕುದುರೆಗೆ ಸೇರಿದೆ ಎಂಬುದನ್ನು ನಿರ್ಧರಿಸಲು ಅನುವು ಮಾಡಿಕೊಡುತ್ತದೆ. (ಏಜೆನ್ಸೀಸ್​)

    1 ದಿನದ ರಜೆಗೆ 500, ಇಷ್ಟದ ಡ್ಯೂಟಿಗೆ 10,000 ರೂಪಾಯಿ: ಕೆಲ KSRP ಅಧಿಕಾರಿಗಳ ಲಂಚಾವತಾರ ಬಯಲು

    ಹೆಂಡತಿ ಮಕ್ಕಳನ್ನು ಹೊಂದಲು ಸಾಧ್ಯವಿಲ್ಲ ಎಂದು ತಿಳಿದ ನಂತರ ಮಗುವಿಗೆ ಜನ್ಮ ಕೊಟ್ಟ ಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts