More

    ಏಕರೂಪ ನೇಮಕಾತಿ ನೀತಿಗೆ ವಿರೋಧ, ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ, ನಾನ್ ಗೆಜೆಟೆಡ್ ಹುದ್ದೆಗಳಿಗೆ ನೇಮಕಾತಿ

    ದೊಡ್ಡಬಳ್ಳಾಪುರ: ಕೇಂದ್ರದ ನಾನ್ ಗೆಜೆಟೆಡ್ ಹುದ್ದೆಗಳಿಗೆ ಕೇಂದ್ರ ಸರ್ಕಾರವು ಏಕರೂಪ ನೇಮಕಾತಿ ನೀತಿಯನ್ವಯ ಪರೀಕ್ಷೆ ಆರಂಭಿಸಲು ಸಜ್ಜಾಗಿರುವುದನ್ನು ವಿರೋಧಿಸಿ ತಾಲೂಕು ಕಚೇರಿ ಆವರಣದಲ್ಲಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

    ಸಂಘಟನೆ ತಾಲೂಕು ಅಧ್ಯಕ್ಷ ಎಂ. ಮುನೇಗೌಡ ಮಾತನಾಡಿ, ಕೇಂದ್ರ ಜಾರಿಗೆ ತರಲು ಹೊರಟಿರುವ ಏಕರೂಪ ರಾಷ್ಟ್ರೀಯ ನೇಮಕಾತಿ ನೀತಿ ಸ್ಥಳೀಯರಿಗೆ ಮಾರಕವಾಗಿ ಪರಿಣಮಿಸಲಿದೆ. ಇದರಿಂದ ಕನ್ನಡಿಗರಿಗೂ ಸೇರಿ ಪ್ರಾದೇಶಿಕ ಭಾಷೆಯ ಲಾನುಭವಿಗಳಿಗೆ ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಪರೀಕ್ಷೆ ಕಡ್ಡಾಯವಾಗಿ ಬರೆಯಬೇಕಾಗುತ್ತದೆ. ಇದರಿಂದ ಅನ್ಯಾಯವಾಗಲಿದೆ ಎಂದರು.

    ಈ ನೀತಿಯಿಂದಾಗಿ ಹೊರ ರಾಜ್ಯದ ಅಧಿಕಾರಿಗಳು ಕರ್ನಾಟಕಕ್ಕೆ ನೇಮಕಗೊಳ್ಳಲಿದ್ದಾರೆ. ಇಲ್ಲಿನ ಭಾಷೆ, ಕಲೆ, ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಅರಿವಿಲ್ಲದಿರುವುದರಿಂದ ಸುಗಮ ಆಡಳಿತ ಸಾಧ್ಯವಾಗುವುದಿಲ್ಲ. ಹೀಗಾಗಿ ಕೂಡಲೇ ರಾಷ್ಟ್ರೀಯ ಏಕರೂಪ ನೇಮಕಾತಿ ನೀತಿಯನ್ನು ಕೈಬಿಡಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

    ಬಳಿಕ ಉಪವಿಭಾಗಧಿಕಾರಿ ಅರುಳ್ ಕುಮಾರ್, ತಹಸೀಲ್ದಾರ್ ಟಿ.ಎಸ್ ಶಿವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts