More

    ರಾಹುಲ್ ಗಾಂಧಿ ಬೆನ್ನಿಗೆ ನಿಂತ ವಿಪಕ್ಷಗಳು; ಕಾನೂನಿಗಿಂತ ಯಾರೂ ಮೇಲಿಲ್ಲಎಂದ ಬಿಜೆಪಿ

    ಸೂರತ್: 2019ರ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಸೂರತ್ ನ್ಯಾಯಾಲಯದ ತೀರ್ಪಿನ ಹೊರತಾಗಿಯೂ ರಾಹುಲ್ ಗಾಂಧಿ ಅಥವಾ ಕಾಗ್ರೆಸ್ ಪಕ್ಷದ ಕಾರ್ಯಕರ್ತರು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಾತನಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಕಾಂಗ್ರೆಸ್ ಗುರುವಾರ ಹೇಳಿದೆ.

    ಸಂಸತ್ ಸದಸ್ಯರಾಗಿ (ಎಂಪಿ) ರಾಹುಲ್ ಗಾಂಧಿ ಅವರ ಭವಿಷ್ಯವನ್ನು ಅಪಾಯಕ್ಕೆ ತಳ್ಳುವ ಈ ತೀರ್ಪನ್ನು “ಕಾನೂನುಬದ್ಧವಾಗಿ ಮತ್ತು ರಾಜಕೀಯವಾಗಿ” ಎದುರಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.

    ಏತನ್ಮಧ್ಯೆ, ರಾಹುಲ್ ಗಾಂಧಿ ವಿರುದ್ಧದ ತೀರ್ಪನ್ನು ಬಿಜೆಪಿ ಸ್ವಾಗತಿಸಿದ್ದು, ಯಾರೂ ತಮ್ಮನ್ನು ಕಾನೂನಿಗಿಂತ ಮೇಲು ಎಂದು ಪರಿಗಣಿಸಬಾರದು ಎಂದು ಹೇಳಿದೆ. ತೀರ್ಪು ಪ್ರಕಟವಾದ ಕೂಡಲೇ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, “ಗುಜರಾತಿನಲ್ಲಿ ರಾಹುಲ್ ಗಾಂಧಿ ವಿರುದ್ಧ ತೆಗೆದುಕೊಂಡ ಕ್ರಮದ ವಿರುದ್ಧ ನಾವು ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ. ನಾವು ಹೆದರುವುದಿಲ್ಲ ಅಥವಾ ಹಿಂದೆ ಸರಿಯುವುದಿಲ್ಲ. ಈ ಸರ್ಕಾರದ ದುಷ್ಕೃತ್ಯಗಳನ್ನು ನಾವು ಯಾವುದೇ ಬೆಲೆ ತೆತ್ತಾದರೂ ಬಯಲಿಗೆಳೆಯುವುದನ್ನು ಮುಂದುವರಿಸುತ್ತೇವೆ.

    ಸತ್ಯವನ್ನು ಹೇಳಿದ್ದಕ್ಕಾಗಿ ರಾಹುಲ್ ಗಾಂಧಿಯನ್ನು ಸಂಸತ್ತಿನಿಂದ ಹೊರಗಿಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಖರ್ಗೆ, “ಇಂದು ಪರಿಸ್ಥಿತಿ ಹೇಗಿದೆಯೆಂದರೆ ರಾಹುಲ್ ಗಾಂಧಿ ಅವರ ಕನಸಿನಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಮೋದಿ ಸರ್ಕಾರ ಕೈಮುಗಿದು ಕುಳಿತು ದೇಶದ ಸಂಪತ್ತನ್ನು ತನ್ನ ಸ್ನೇಹಿತರಿಗೆ ಹಸ್ತಾಂತರಿಸುವುದನ್ನು ಮುಂದುವರಿಸಿದರೆ, ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಕಾರ್ಯಕರ್ತರು ಸುಮ್ಮನಿರುವುದಿಲ್ಲ. ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡಲು ನಾವು ಸ್ವಾತಂತ್ರ್ಯವನ್ನು ನೀಡುವುದಿಲ್ಲ’ ಎಂದು ಹೇಳಿದರು.

    ದ್ರಾವಿಡ ಪಕ್ಷಗಳ ನಾಯಕ ಕಳಗಂನ ಎಂ.ಕೆ.ಸ್ಟಾಲಿನ್ ರಾಹುಲ್ ಗಾಂಧಿ ಜತೆ ಈ ಕುರಿತಾಗಿ ಮಾತನಾಡಿದ್ದು, ಎನ್ಸಿಪಿಯ ಶರದ್ ಪವಾರ್ ಇದನ್ನು ವಿರೋಧ ಪಕ್ಷದ ನಾಯಕರ ಧ್ವನಿಯನ್ನು ನಿಗ್ರಹಿಸುವ ಪ್ರಯತ್ನ ಎಂದು ಬಣ್ಣಿಸಿದ್ದಾರೆ. ರಾಷ್ಟ್ರೀಯ ಜನತಾ ದಳದ ತೇಜಸ್ವಿ ಯಾದವ್, ಎಲ್ಲಾ ವಿರೋಧ ಪಕ್ಷಗಳು ತಡ ಮಾಡದೇ ಹೇಗೆ ಒಗ್ಗೂಡಬೇಕು ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts