More

    ಸಂಸತ್​ ಸದಸ್ಯತ್ವದಿಂದ ರಾಹುಲ್​ ಅನರ್ಹ; ಕಪ್ಪುಬಟ್ಟೆ ಧರಿಸಿ ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ

    ನವದೆಹಲಿ: ಸಂಸತ್​ ಸದಸ್ಯತ್ವದಿಂದ ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ಅನರ್ಹ ಮಾಡಿರುವುದನ್ನು ಖಂಡಿಸಿ ಸೋಮವಾರ ವಿಪಕ್ಷಗಳ ಸದಸ್ಯರು ಕಪ್ಪು ಬಟ್ಟೆ ಧರಿಸಿ ಸಂಸತ್​​ ಭವನದ ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ.

    ವಿಪಕ್ಷಗಳಾದ ಕಾಂಗ್ರೆಸ್​, ಟಿಎಂಸಿ, ಸಮಾಜವಾದಿ ಪಕ್ಷ, ಡಿಎಂಕೆ, ಜೆಡಿ(ಯು), ಬಿಆರ್​ಎಸ್​​, ಸಿಪಿಐ(ಎಂ), ಆರ್​ಜೆಡಿ, ಎನ್​ಸಿಪಿ, ಎನ್​ಡಿಎಂಕೆ, ಶಿವಸೇನೆ(ಉದ್ದವ್​ ಠಾಕ್ರೆ ಬಣ), ಎಎಪಿ ಪಕ್ಷದ ಸದಸ್ಯರು ಸಂಸತ್​ ಭವನದಿಂದ ವಿಜಯ್​ ಚೌಕ್​ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಘೋಷಣೆಗಳನ್ನ ಕೂಗಿ ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನ ರಕ್ಷಿಸಲು ಯಾರು ಮುಂದೆ ಬರುತ್ತಾರೋ ಅವರನ್ನು ನಾವು ಸ್ವಾಗತಿಸುತ್ತೇವೆ. ತಮ್ಮನ್ನು ಬೆಂಬಲಿಸಿದ ಎಲ್ಲಾ ಸಮಾನ ಮನಸ್ಕರ ಪಕ್ಷಗಳಿಗೆ ಧನ್ಯವಾದಗಳನ್ನ ತಿಳಿಸಿದ್ಧಾರೆ.

    ಇದನ್ನೂ ಓದಿ: ಎಲ್ಲಾ ಪಕ್ಷದವರು ನನ್ನನ್ನು ಫುಟ್​ಬಾಲ್​ನಂತೆ ಆಡಿಸಿದ್ದರು! ಹೀಗಾಗಿ ಫುಟ್​ಬಾಲ್ ಚಿಹ್ನೆ ಆಯ್ಕೆ ಮಾಡಿಕೊಂಡೆ; ಜನಾರ್ದನ ರೆಡ್ಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts