More

    ‘ಕಲ್ಯಾಣ ಕರ್ನಾಟಕ’ ಎಂದು ಹೆಸರು ಬದಲಿಸಿದರೆ ಸಾಕೆ..? ಕರ್ನಾಟಕ ಕಲ್ಯಾಣವಾಗುವುದು ಬೇಡವೇ: ಸಿದ್ದು ಟ್ವೀಟಾಸ್ತ್ರ

    ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಬೆಳಗಾವಿಯಲ್ಲಿ ಅಧಿವೇಶನವನ್ನೇ ಮಾಡಿಲ್ಲ, 2019-20ರ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟ್ಟರ್​​ನಲ್ಲಿ ಹರಿಹಾಯ್ದಿದ್ದಾರೆ.

    ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಶುಭಾಶಯ; ಬಿಎಸ್​​ವೈಗೆ, ಬಿಜೆಪಿಗೆ ಟಾಂಗ್! ಮಾರ್ಮಿಕ ಸಂದೇಶ ನೀಡಿದ ಸಿದ್ದರಾಮಯ್ಯ

    371(ಜೆ) ಅಡಿ ಹೈದ್ರಾಬಾದ್ ಕರ್ನಾಟದ ಅಭಿವೃದ್ಧಿಗೆ ನೀಡಬೇಕಿದ್ದ ಅನುದಾನವನ್ನು 1 ರೂಪಾಯಿ ಕೂಡ ಬಿಡುಗಡೆ ಮಾಡಿಲ್ಲ. ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದರೆ ಸಾಕಾಗುವುದಿಲ್ಲ. ಕರ್ನಾಟಕ ಕಲ್ಯಾಣವಾಗುವಂತೆ ಅಭಿವೃದ್ದಿ ಮಾಡಬೇಕು. 2019-20ರ ಪ್ರವಾಹದಿಂದ 69 ಲಕ್ಷ ಎಕರೆ ಬೆಳೆ ನಷ್ಟ ಆಗಿದೆ.

    ಬಿಎಸ್​ವೈ ರಾಜೀನಾಮೆ | ಇದು ಕರ್ನಾಟಕದ ದುರ್ದೈವವೇ ಸರಿ: ಸಿದ್ದರಾಮಯ್ಯ

    ರೈತರಿಗೆ ನೀಡಬೇಕಾದ ಪರಿಹಾರ ರೂ.35,000 ಕೋಟಿ ಎಂದು ಸರ್ಕಾರ ಅಂದಾಜು ಮಾಡಿ ಈ ವರೆಗೆ ರೂ. 2,500 ಕೋಟಿ ಪರಿಹಾರ ನೀಡಿದೆ. ಭ್ರಷ್ಟ ಬಿಜೆಪಿ ಸರ್ಕಾರದಿಂದ ಉಳಿದ ಪರಿಹಾರದ ಹಣ ಸಂತ್ರಸ್ತರನ್ನು ತಲುಪಲು ಇನ್ನು ಎಷ್ಟು ಶತಮಾನಗಳು ಬೇಕು ಎಂದು ಟ್ವಿಟ್ಟರ್​​ನಲ್ಲಿ ಪ್ರಶ್ನೆ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts