More

    ಮೇಲ್ಮನೆ ವಿರೋಧ ಪಕ್ಷದ ನಾಯಕರಾಗಿ ಕೋಟ; ಕೆಳಮನೆ ಉಪನಾಯಕನಾಗಿ ಅರವಿಂದ ಬೆಲ್ಲದ್

    ಬೆಂಗಳೂರು:
    ಕಳೆದ ಆರು ತಿಂಗಳಿಂದಲೂ ಬಾಕಿ ಇದ್ದ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಸ್ಥಾನಗಳಿಗೆ ಹೈಕಮಾಂಡ್ ನಿರ್ದೇಶನ ಮೇರೆಗೆ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
    ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿ, ಉಪ ನಾಯಕರಾಗಿ ಸುನೀಲ್ ವಲ್ಯಾಪುರೆ, ಮುಖ್ಯ ಸಚೇತಕರಾಗಿ ಎನ್.ರವಿಕುಮಾರ್ ಅವರು ನೇಮಕಗೊಂಡಿದ್ದಾರೆ.
    ವಿಧಾನಸಭೆ ಉಪನಾಯಕನ ಸ್ಥಾನ ಅರವಿಂದ ಬೆಲ್ಲದ್ ಅವರಿಗೆ ಒಲಿದಿದೆ. ಮುಖ್ಯಸಚೇತಕರಾಗಿ ದೊಡ್ಡನಗೌಡ ಎಚ್ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.
    ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಆರ್.ಅಶೋಕ್ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಕಾರಣ, ಉಪನಾಯಕನ ಸ್ಥಾನವನ್ನು ಅರವಿಂದ ಬೆಲ್ಲದ್ ಅವರಿಗೆ ನೀಡುವ ಮೂಲಕ ಮತ್ತೊಂದು ಪ್ರಬಲ ಸಮುದಾಯ ಲಿಂಗಾಯಿತರಿಗೆ ಮಣೆ ಹಾಕಿರುವುದು ವಿಶೇಷ. ಹುಬ್ಬಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಬೆಲ್ಲದ್ ಅವರಿಗೆ ಸ್ಥಾನ ನೀಡುವ ಮೂಲಕ ಉತ್ತರ ಕರ್ನಾಟಕ ಭಾಗಕ್ಕೂ ನ್ಯಾಯ ಒದಗಿಸುವ ಪ್ರಯತ್ನವನ್ನು ಮಾಡಲಾಗಿದೆ.
    ವಿಧಾನಸಭೆಯ ಮುಖ್ಯ ಸಚೇತಕರನ್ನಾಗಿ ಕೊಪ್ಪಳ ಜಿಲ್ಲೆ ಕುಷ್ಟಗಿ ಕ್ಷೇತ್ರದ ದೊಡ್ಡನಗೌಡ ಎಚ್ ಪಾಟೀಲ್ ಅವರಿಗೆ ಸ್ಥಾನ ಕಲ್ಪಿಸುವ ಮೂಲಕ ಕುರುಬ ಸಮುದಾಯಕ್ಕೆ ಆದ್ಯತೆ ನೀಡುವ ಮತ್ತು ಹೈದರಾಬಾದ್ ಕರ್ನಾಟಕ ಭಾಗದ ಕೋಟಾ ತುಂಬುವ ಕೆಲಸವನ್ನು ಮಾಡಿರುವುದು ವಿಶೇಷ.

    ಹಲವು ರಾಜಕೀಯ ಲೆಕ್ಕಾಚಾರ
    ಮೇಲ್ಮನೆಯಲ್ಲಿ ಸದಾ ಕ್ರೀಯಾಶೀಲವಾಗಿ ಕಳೆದ ಬಾರಿ ವಿರೋಧ ಪಕ್ಷದ ನಾಯಕನಾಗಿ ಸಮರ್ಥವಾಗಿ ಕೆಲಸ ಮಾಡಿದ್ದ ಕೋಟ ಶ್ರೀನಿವಾಸ ಪೂಜಾರಿಗೆ ಮತ್ತೊಮ್ಮೆ ಅದೇ ಸ್ಥಾನ ಒಲಿದುಬಂದಿದೆ. ಆ ಮೂಲಕ ಹಿಂದುಳಿದ ವರ್ಗಕ್ಕೆ ಆದ್ಯತೆ ನೀಡಿ ಕರಾವಳಿ ಭಾಗದ ಕೋಟಾವನ್ನು ಕೋಟ ಮೂಲಕ ತುಂಬಿರುವುದು ವಿಶೇಷ.
    ವಿಧಾನ ಪರಿಷತ್ ಉಪನಾಯಕನಾಗಿ ಸುನೀಲ್ ವಲ್ಯಾಪುರೆ ಅವರನ್ನು ಆಯ್ಕೆ ಮಾಡುವ ಮೂಲಕ ಪರಿಶಿಷ್ಟ ಜಾತಿಗೂ ಆದ್ಯತೆ ನೀಡಲಾಗಿದೆ.
    ಪಕ್ಷ ಸಂಘಟನೆಯಲ್ಲಿ ಸದಾಕ್ರೀಯಾಶೀಲವಾಗಿರುವ ಎನ್.ರವಿಕುಮಾರ್ ಅವರನ್ನು ಪರಿಷತ್‌ನ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡುವ ಮೂಲಕ ಮಧ್ಯಕರ್ನಾಟಕಕ್ಕೂ ನ್ಯಾಯ ಒದಗಿಸಲಾಗಿದೆ.
    ಹಳೆ ಮೈಸೂರು ಭಾಗ, ಕರಾವಳಿ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ಎಲ್ಲಾ ಭಾಗಕ್ಕೂ ಆದ್ಯತೆ ನೀಡಿ, ಜಾತಿ ಸಮೀಕರಣದಲ್ಲಿಯೂ ರಾಜಕೀಯ ಲೆಕ್ಕಾಚಾರ ಕಾಯ್ದುಕೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts