More

    ಜಾತಿ ಆಧಾರದಲ್ಲಿ ವಿಪಕ್ಷಗಳು ದೇಶ ವಿಭಜಿಸಲು ಯತ್ನಿಸುತ್ತಿವೆ: ಪ್ರಧಾನಿ ಮೋದಿ ಕಿಡಿ

    ಗ್ವಾಲಿಯಾರ್: ಪ್ರತಿಪಕ್ಷಗಳು ಕಳೆದ ಆರು ದಶಕಗಳಿಂದ ಬಡವರ ಭಾವನೆಗಳೊಂದಿಗೆ ಆಟವಾಡುವ ಮೂಲಕ ದೊಡ್ಡ ಪಾಪ ಎಸಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಬಿಹಾರ ಸರ್ಕಾರ ಬಿಡುಗಡೆ ಮಾಡಿರುವ ಜಾತಿಗಣತಿ ವರದಿ. ವಿಪಕ್ಷಗಳ ಒಕ್ಕೂಟವಾದ ಇಂಡಿಯಾ ಜಾತಿ ಆಧಾರದ ಮೇಲೆ ದೇಶವನ್ನು ವಿಭಜಿಸುತ್ತಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

    ಮಧ್ಯಪ್ರದೇಶದ ಗ್ವಾಲಿಯಾರ್​ನಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ವಿಪಕ್ಷಗಳು ಅಭಿವೃದ್ದಿ ವಿರೋಧಿ ಧೋರಣೆಯನ್ನು ಹೊಂದಿವೆ ಎಂದು ಇಂಡಿಯಾ ಒಕ್ಕೂಟದ ವಿರುದ್ಧ ಹರಿಹಾಯ್ದಿದ್ದಾರೆ.

    ಇದನ್ನೂ ಓದಿ: ಈದ್​ ಮೆರವಣಿಗೆ ವೇಳೆ ಆಕ್ಷೇಪಾರ್ಹ ಘೋಷಣೆ; 20 ಮಂದಿ ಅರೆಸ್ಟ್

    ನಾವು ಮಧ್ಯಪ್ರದೇಶದಲ್ಲಿ ಒಂದೇ ದಿನದ ಅವಧಿಯಲ್ಲಿ 19 ಸಾವಿರ ಕೋಟಿ ಮೌಲ್ಯದ ಅಭಿವರದ್ದಿ ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟಿದ್ದೇವೆ. ಆದರೆ, ಪ್ರತಿಪಕ್ಷಗಳು ಬಡವರ ಭಾವನೆಗಳೊಂದಿಗೆ ಆಟವಾಡುತ್ತಿದ್ದು, ಜಾತಿ ಆಧಾರದ ಮೇಲೆ ದೇಶವನ್ನು ವಿಭಜಿಸುವ ಮೂಲಕ ದೊಡ್ಡ ಪಾಪವನ್ನು ಮಾಡುತ್ತಿದೆ.

    ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿರುವ ಸಮಯದಲ್ಲಿ ವಿಪಕ್ಷಗಳು ಅಭಿವರದ್ದಿಯ ಬಗ್ಗೆ ಮಾತನಾಡದೆ ಕುರ್ಚಿಯ ಮೇಲೆ ತಮ್ಮ ಕಣ್ಣನ್ನು ನೆಟ್ಟಿವೆ. ಭಾರತವನ್ನು ವಿಶ್ವದ ಬೇರೆ ರಾಷ್ಟ್ರಗಳು ಹೊಗಳುವುದನ್ನು ಸಹಿಸದ ಇವರು ದೇಶದಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ಆಗಿಲ್ಲ ಎಂದು ಬಿಂಬಿಸಲು ಹೊರಟಿವೆ. ಇದರಿಂದ ಅವರಿಗೆ ಹಿನ್ನಡಯಾಗುತ್ತದೆ ಹೊರತು ನಮ್ಮಿಗಲ್ಲ ಎಂದು ಪ್ರಧಾನಿ ಮೋದಿ ವಿಪಕ್ಷಗಳ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts