More

    ಶಸ್ತ್ರಚಿಕಿತ್ಸೆಯಿಂದ ಕ್ಯಾನ್ಸರ್ ಗಡ್ಡೆ ಹೊರತೆಗೆದು ವೈದ್ಯರು ; 55 ವರ್ಷದ ಮಹಿಳೆ ಗುಣಮುಖ

    ತುಮಕೂರು : ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 55 ವರ್ಷದ ಮಹಿಳೆಗೆ ಕಂಡುಬಂದಿದ್ದ ಅಂಡಾಶಯದ ಕ್ಯಾನ್ಸರ್ ಅನ್ನು ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸುವಲ್ಲಿ ವೈದ್ಯ ತಂಡ ಯಶಸ್ವಿಯಾಗಿದೆ.
    ಶಸ್ತ್ರಚಿಕಿತ್ಸೆ ಮೂಲಕ 40ಎಂ ಗಾತ್ರದ ಕ್ಯಾನ್ಸರ್ ಗಡ್ಡೆ ತೆಗೆದು ಹಾಕಲಾಗಿದೆ. ವೆಚ್ಚವಿಲ್ಲದೆ ಚಿಕಿತ್ಸೆ ನಡೆಸಲಾಗಿದ್ದು, ಮಹಿಳೆ ಗುಣಮುಖರಾಗಿದ್ದಾರೆ.

    55 ವರ್ಷದ ಮಹಿಳೆ ಅನಾರೋಗ್ಯದಿಂದ ತಪಾಸಣೆಗಾಗಿ ಆಸ್ಪತ್ರೆಗೆ ಬಂದಾಗ ಅಪರೂಪದ ಅಂಡಾಶಯದ ಕ್ಯಾನ್ಸರ್ ಕಂಡುಬಂತು, ಮಹಿಳೆಯನ್ನು ಇತ್ತೀಚೆಗೆ ಆರಂಭವಾಗಿರುವ ಗ್ರಂಥಿ ವಿಜ್ಞಾನ (ಅಂಕಾಲಜಿ) ವಿಭಾಗದಲ್ಲಿ ಪರೀಕ್ಷೆ ಒಳಪಡಿಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈ ರೀತಿಯ ಶಸ್ತ್ರಚಿಕಿತ್ಸೆಯಲ್ಲಿ ಇಂಪ್ರಿಂಟ್ ಸೈಟಾಲಜಿ ಎಂಬ ವಿಧಾನ ಕೂಡ ಬಳಸಲಾಯಿತು. ಈ ಚಿಕಿತ್ಸೆಯ ನಂತರ ರೋಗಿಯು ಸಂಪೂರ್ಣವಾಗಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.
    ರೋಗಿ ಗ್ರಾಮಾಂತರ ಪ್ರದೇಶದಿಂದ ಬಂದಿದ್ದು ಆರ್ಥಿಕವಾಗಿ ಹಿಂದುಳಿದವರಾಗಿದ್ದರಿಂದ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಡಿ ರೋಗಿಗೆ ಯಾವುದೇ ವೆಚ್ಚವಿಲ್ಲದೆ, ಶಸ್ತ್ರ ಚಿಕಿತ್ಸೆಯನ್ನು ಸಂಪೂರ್ಣವಾಗಿ ಉಚಿತವಾಗಿ ನಡೆಸಲಾಯಿತು.

    ಶ್ರೀ ಸಿದ್ಧಾರ್ಥ ಆಸ್ಪತ್ರೆಯಲ್ಲಿ ಸರ್ಕಾರದ ಆರೋಗ್ಯ ಯೋಜನೆಗಳಿಗೆ ಚಿಕಿತ್ಸೆ ಲಭ್ಯವಿದ್ದು, ಇದೀಗ ಕ್ಯಾನ್ಸರ್ ಸಂಬಂಧಿತ ಚಿಕಿತ್ಸೆ ಕೈಗೊಳ್ಳಲಾಗುತ್ತಿದೆ. ಕ್ಯಾನ್ಸರ್‌ಗೆ ಸಂಬಂಧಪಟ್ಟ ಎಲ್ಲ ರೀತಿಯ ಚಿಕಿತ್ಸೆಗಳು ಲಭ್ಯವಿದ್ದು, ರೋಗಿಗಳು ಬೆಂಗಳೂರಿನಂಥ ಮಹಾನಗರಕ್ಕೆ ಎಡತಾಗುವುದು ತಪ್ಪಿದಂತಾಗಿದೆ.

    ಅಪರೂಪದ ಹಾಗೂ ಕಠಿಣವಾದ ಶಸ್ತ್ರಚಿಕಿತ್ಸೆಯಲ್ಲಿ ಅಂಕಾಲಜಿ ವಿಭಾಗದ ತಜ್ಞ ವೈದ್ಯ ಡಾ.ಅರುಣ್ ಕುಮಾರ್ ಬಾರಡ್, ಸರ್ಜನ್ ಡಾ.ದ್ವಾರಕನಾಥ್ ಮತ್ತು ಡಾ.ಗಿರೀಶ್, ಡಾ.ಕಾವ್ಯ, ಡಾ.ರಮೇಶ್ ಇದ್ದರು. ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ, ಸೂಪರ್ ಸ್ಪೆಷಾಲಿಟಿ ವಿಭಾಗ ಸಹ ಆರಂಭಗೊಂಡಿದೆ. ತೆರೆದ ಹೃದಯ ಶಸ್ತ್ರಚಿಕಿತ್ಸೆ, ನೆಪ್ರೋಲಾಜಿ, ನ್ಯೂರಲಾಜಿ, ಪ್ಲಾಸ್ಟಿಕ್ ಸರ್ಜರಿ ಕೂಡ ನಡೆಸಿದ್ದು ದಾಖಲೆಯಾಗಿದೆ ಎಂದು ಆಸ್ಪತ್ರೆ ಉಪಪ್ರಾಂಶುಪಾಲ ಡಾ.ಪ್ರಭಾಕರ್ ತಿಳಿಸಿದ್ದಾರೆ.

    ಆಸ್ಪತ್ರೆಯಲ್ಲಿ ಕ್ಯಾನ್ಸರ್ ತಜ್ಞರ ತಂಡವಿದ್ದು, ಗ್ರಾಮಾಂತರ ಪ್ರದೇಶದ ಬಡ ರೋಗಿಗಳಿಗೆ ತಪಾಸಣೆ ಮತ್ತು ಚಿಕಿತ್ಸೆ ನಡೆಸಲಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ, ಸರ್ಜರಿ ಮಾಡಲು ಆಧುನಿಕ ಸಲಕರಣೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಆರೋಗ್ಯ ಕರ್ನಾಟಕ, ಆಯುಷ್ಮಾನ್ ಭಾರತ್ ಅಡಿಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ನಡೆಸಲಾಗುತ್ತಿದೆ.
    ಡಾ.ಜಿ.ಪರಮೇಶ್ವರ್, ಶ್ರೀ ಸಿದ್ಧಾರ್ಥ ಆಸ್ಪತ್ರೆ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts