More

    ಭಾರತೀಯರ ರಕ್ಷಣೆಗೆ ಆಪರೇಷನ್​ ಸಮುದ್ರ ಸೇತು; ಮಾಲ್ಡೀವ್ಸ್​ ತಲುಪಿದ ಜಲಾಶ್ವ

    ನವದೆಹಲಿ: ವಿದೇಶಗಳಲ್ಲಿರುವ ಭಾರತೀಯರನ್ನು ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಕರೆತರಲು ಆಪರೇಷನ್​ ಸಮುದ್ರ ಸೇತು ಆರಂಭವಾಗಿದೆ. ಈಗಾಗಲೇ ಭಾರತೀಯ ನೌಕಾದಳದ ಐಎನ್​ಎ ಜಲಾಶ್ವ ನೌಕೆ ಗುರುವಾರ ಮಾಲ್ಡೀವ್ಸ್​ನ ರಾಜಧಾನಿ ಮಾಲೆ ತಲುಪಿದೆ.
    ದ್ವೀಪರಾಷ್ಟ್ರದಲ್ಲಿ ಸಂಕಷ್ಟದಲ್ಲಿರುವ ಒಂದು ಸಾವಿರಕ್ಕೂ ಅಧಿಕ ಭಾರತೀಯರನ್ನು ಹೊತ್ತ ಹಡಗು ಶುಕ್ರವಾರ ಕೊಚ್ಚಿಗೆ ತೆರಳಲಿದೆ ಮಾಲ್ಡೀವ್ಸ್​ನಲ್ಲಿರುವ ಭಾರತೀಯ ದೂತಾವಾಸದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಮಾಲ್ಡೀವ್ಸ್​ನಲ್ಲಿ ಭಾರತೀಯರು ಅತಿಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೇ, ಭಾರತೀಯ ಮೂಲದವರು ಇಲ್ಲಿ ಸ್ಥಳೀಯರೇ ಆಗಿದ್ದಾರೆ. ಈ ದ್ವೀಪರಾಷ್ಟ್ರ ಪ್ರಮುಖವಾಗಿ ಪ್ರವಾಸೋದ್ಯಮವನ್ನೇ ಅವಲಂಬಿಸಿದೆ.

    ಇದನ್ನೂ ಓದಿ: ಎರಡು ಲಕ್ಷಕ್ಕೂ ಅಧಿಕ ಭಾರತೀಯರ ಮಹಾ ಮರುವಲಸೆ; ಅಮೆರಿಕದಿಂದ ಭಾರತಕ್ಕೆ ಬರಲು ನೀಡಬೇಕು ಒಂದು ಲಕ್ಷ ರೂ…!

    ಪ್ರಸ್ತುತ ಮಾಲ್ಡೀವ್ಸ್​ನಲ್ಲೂ ಕರೊನಾ ಸೋಂಕು ವ್ಯಾಪಿಸುತ್ತಿದೆ. 615 ಜನರು ಸೋಂಕಿಗೆ ಒಳಗಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಲಾಕ್​ಡೌನ್​ ಘೋಷಿಸಿದ ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಂಡಿರುವ ಭಾರತೀಯರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇವರನ್ನು ಕರೆತರಲು ಜಲಾಶ್ವ ಹಾಗೂ ಮಘರ್​ ಹಡಗುಗಳನ್ನು ಕಳುಹಿಸಲಾಗಿದೆ. ಸಮುದ್ರ ಸೇತು ಕಾರ್ಯಾಚರಣೆಯ ಮೊದಲ ಹಂತದಲ್ಲಿ ಮಾಲ್ಡೀವ್ಸ್​ನಿಂದ ಭಾರತೀಯರನ್ನು ಕರೆತರಲಾಗುತ್ತಿದೆ.
    ಸದ್ಯಕ್ಕೆ ಇಲ್ಲಿ ಲಾಕ್​ಡೌನ್​ ಇದೆ. ಇದರಿಂದಾಗಿ ಉದ್ಯೋಗ ಕಳೆದುಕೊಂಡವರನ್ನು ಹಾಗೂ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರನ್ನು ಗುರುತಿಸಿ ತಾಯ್ನಾಡಿಗೆ ಕಳುಹಿಸಲಾಗುತ್ತಿದೆ. ಉಳಿದಂತೆ ಇತರರಿಗೆ ಇಲ್ಲಿ ಯಾವುದೇ ತೊಂದರೆ ಎದುರಾಗಿಲ್ಲ. ಕೆಲಸ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಲೆಯಲ್ಲಿ ಇಂಗ್ಲಿಷ್​​ ಅಧ್ಯಾಪಕರಾಗಿರುವ ಕನ್ನಡಿಗ ಸೇಸುರಾಜ್​ ಮೈಕಲ್​ ತಿಳಿಸಿದ್ದಾರೆ.

    ಇದನ್ನೂ ಓದಿ; ಭಾರತದಲ್ಲಿ ಶುರುವಾಯ್ತಾ ಕರೊನಾ ಎರಡನೇ ಅಲೆ? ನಾಲ್ಕು ದಿನಗಳಲ್ಲೇ ಸೋಂಕಿತರ ಸಂಖ್ಯೆ 10 ಸಾವಿರ ಹೆಚ್ಚಳ

    ಜನರನ್ನು ಕರೆತರಲೆಂದೇ ಹಡಗಿನಲ್ಲಿರುವ ಅನುಪಯುಕ್ತ ಅಳವಡಿಕೆಗಳನ್ನು ತೆರವುಗೊಳಿಸಿ ಸಜ್ಜುಗೊಳಿಸಲಾಗಿದೆ. ಇದಲ್ಲದೇ, ಕೊಲ್ಲಿರಾಷ್ಟ್ರಗಳಿಂದ ಭಾರತೀಯರನ್ನು ಕರೆತರಲು 14 ಹಡಗುಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಜಮ್ಮು ಕಾಶ್ಮೀರದಲ್ಲಿ 148 ವರ್ಷಗಳ ‘ದರ್ಬಾರ್​’ಗೆ ಬೀಳುತ್ತಾ ಬ್ರೇಕ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts