More

    ಇನ್ನು ಮುಂದೆ ವರ್ಷಕ್ಕೆ 100 ದಿನ ಮಾತ್ರ ಶಾಲೆ!

    ನವದೆಹಲಿ: ಕರೊನಾ ಹಾವಳಿ ಹಿನ್ನೆಲೆಯಲ್ಲಿ ಶಾಲೆಗಳ ಕಲಿಕಾ ಅವಧಿ, ಬೋಧನೆಯ ವಿಧಾನ ಮತ್ತಿತರ ವಿಷಯಗಳನ್ನು ಬದಲಿಸಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮುಂದಾಗಿದೆ.

    ಈ ಕುರಿತು ತಜ್ಞರಿಂದ ಬಂದಿರುವ ಪ್ರಸ್ತಾವನೆಯನ್ನು ಅದು ಪರಿಶೀಲಿಸುತ್ತಿದೆ. ಮಕ್ಕಳು ಶಾಲೆಯಲ್ಲಿದ್ದು ಕಲಿಯುವ ಅವಧಿಯನ್ನು ಅರ್ಧದಷ್ಟು ಕಡಿಮೆ ಮಾಡಬೇಕು ಎಂಬುದು ತಜ್ಞರಿಂದ ಬಂದಿರುವ ಸಲಹೆಗಳಲ್ಲಿ ಪ್ರಮುಖವಾದದ್ದು ಎನ್ನಲಾಗಿದೆ.

    ಈವರೆಗೆ ವರ್ಷಕ್ಕೆ 220 ದಿನಗಳ ಕಾಲ ಶಾಲೆಯಲ್ಲಿ ಪಾಠಪ್ರವಚನ ನಡೆಯುತ್ತಿದ್ದವು. ಇನ್ನು ಮುಂದೆ ಅದನ್ನು ನೂರು ದಿನಗಳಿಗೆ ಇಳಿಸಲಾಗುವುದು. ಶೈಕ್ಷಣಿಕ ಅವಧಿಯನ್ನು 1320 ಗಂಟೆಗಳಿಂದ 600 ಗಂಟೆಗಳಿಗೆ ಇಳಿಸಲಾಗುವುದು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ‘ಕರೊನಾ ಬಗ್ಗೆ ತಿಳಿವಳಿಕೆ ಹೇಳಿದ್ದಕ್ಕೆ ಹೊಡೆದರು, ನಿಂದಿಸಿದರು’: ಆಶಾ ಕಾರ್ಯಕರ್ತೆಯ ಅಳಲು

    ಉಳಿದ ಅವಧಿಯನ್ನು, ಅಂದರೆ ನೂರು ದಿನ (600 ಗಂಟೆಗಳು) ಮನೆಯಲ್ಲೇ ಇದ್ದು ಸಕ್ರಿಯವಾಗಿ ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದಕ್ಕೆ ಯೋಜನೆ ರೂಪುಗೊಳ್ಳುತ್ತಿದೆ. ಉಳಿದ 20 ದಿನಗಳನ್ನು (120 ಗಂಟೆಗಳು) ವಿದ್ಯಾರ್ಥಿಗಳ ಮಾನಸಿಕ ಮತ್ತು ಭಾವನಾತ್ಮಕ ವಿಷಯಗಳಲ್ಲಿ ಕೌನ್ಸೆಲಿಂಗ್ ಕೊಡಿಸುವುದಕ್ಕೆ ಮೀಸಲಿರಿಸಲಾಗುವುದು.

    ಹೊಸ ಯೋಜನೆಯಂತೆ, ಶೇಕಡಾ 30-35ರಷ್ಟು ವಿದ್ಯಾರ್ಥಿಗಳು ದಿನ ಬಿಟ್ಟು ದಿನ ಅಥವಾ ವಾರಕ್ಕೆ ಎರಡು ದಿನ ರೊಟೇಶನ್ ಆಧಾರದಲ್ಲಿ ಶಾಲೆಗೆ ಹೋಗಲು ಅನುಮತಿಸಲಾಗುವುದು. 9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳು ವಾರದಲ್ಲಿ 4-5 ಬಾರಿ ಶಾಲೆಗೆ ಹೋಗಬೇಕಾಗುತ್ತದೆ. 6ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳು ವಾರದಲ್ಲಿ 4 ಬಾರಿ ಕ್ಲಾಸಿಗೆ ಹೋಗಬೇಕಾಗುತ್ತದೆ. ಇದಕ್ಕಿಂತ ಕೆಳಗಿನ ತರಗತಿಗಳಲ್ಲಿ ಇರುವ ಮಕ್ಕಳು ವಾರದಲ್ಲಿ ಒಂದೇ ದಿನ ಶಾಲೆಯ ಮುಖ ನೋಡಬೇಕಾಗಬಹುದು ಎಂದು ಹೇಳಲಾಗಿದೆ.

    ಪ್ರತಿ ಪೀರಿಯಡ್‌ನ ಅವಧಿಯನ್ನು 45 ನಿಮಿಷಗಳಿಂದ 30 ನಿಮಿಷಗಳಿಗೆ ಇಳಿಸುವ ಇರಾದೆಯೂ ಇಲಾಖೆಗೆ ಇದೆ. ಆಸಕ್ತ ಮಕ್ಕಳಿಗೆ ‘ಸ್ಟಡಿ ಫ್ರಂ ಹೋಮ್’ ಸೌಲಭ್ಯವೂ ಇರಲಿದೆ. ಇದಕ್ಕೆ ಬೇಕಾದ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಪೆನ್, ಪೇಪರ್ ಬಳಸಿ ಬರೆಯುವ ಸಾಂಪ್ರದಾಯಿಕ ಪರೀಕ್ಷೆಗೆ ಗುಡ್‌ಬೈ ಹೇಳಿ ಆನ್‌ಲೈನ್ ಪರೀಕ್ಷೆಗಳಿಗೆ ಪ್ರೋತ್ಸಾಹ ನೀಡುವ ನಿರೀಕ್ಷೆ ಇದೆ.

    ಇದನ್ನೂ ಓದಿ: 300ರ ಗಡಿ ದಾಟಿತು ಬೆಂಗಳೂರು: 11 ಜಿಲ್ಲೆಗಳಲ್ಲಿ ಶತಕ ಮೀರಿದ ಕರೊನಾ ಸೋಂಕು!

    ತಬ್ಲಿಘಿಗಳು ಪ್ರವೇಶಿಸುತ್ತಿದ್ದಂತೆ ಸೋಂಕು ಕಾಡ್ಗಿಚ್ಚಿನಂತೆ ಹಬ್ಬಿತು…: ಸಿಎಂ ರೂಪಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts