More

    ಎಚ್ಚರ: ಆನ್‌ಲೈನ್ ಷೇರ್ ಟ್ರೇಡಿಂಗ್ ವಂಚನೆ: ಬರೋಬ್ಬರಿ 2.5 ಕೋಟಿ ರೂ. ಮೋಸ ಹೋದ ವೈದ್ಯ!

    ಗುರುಗ್ರಾಮ​: ಸೈಬರ್ ವಂಚಕರು ದಿನಕಳೆದಂತೆ ತಮ್ಮ ವಂಚನೆಗಾಗಿ ಹೊಸ ಹೊಸ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಈ ವಂಚನೆಯಲ್ಲಿ ವೈದ್ಯರು, ವಕೀಲರು, ಎಂಜಿನಿಯರಗಳು ಸೈಬರ್​ ವಂಚಕರ ಬಲೆಗೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ:48ನೇ ವಯಸ್ಸಿನಲ್ಲಿ 3ನೇ ಮಗುವಿಗೆ ತಂದೆಯಾದ ಪಾಕ್​ ಮಾಜಿ ಸ್ಟಾರ್ ಕ್ರಿಕೆಟಿಗ! ಸಂತಸದಲ್ಲಿ ತೇಲಾಡಿದ ರಾವಲ್ಪಿಂಡಿ ಎಕ್ಸ್​​ಪ್ರೆಸ್ 

    ಇದೀಗ ಆನ್‌ಲೈನ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳ ಉದ್ಯೋಗಿಗಳಂತೆ ನಟಿಸಿ ಗ್ರಾಹಕರಿಕೆ ವಂಚಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಇತ್ತೀಚೆಗೆ ಗುರುಗ್ರಾಮದ ವೈದ್ಯರೊಬ್ಬರು ಈ ಸೈಬರ್ ವಂಚನೆಗೆ ಬಲಿಯಾಗಿದ್ದು, ಅಪರಿಚಿತ ಸೈಬರ್ ವಂಚಕರಿಂದ ಬರೋಬ್ಬರಿ 2.5 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ.

    ಗುರುಗ್ರಾಮದ ಸೆಕ್ಟರ್ 56ನ ಕೇಂದ್ರೀಯ ವಿಹಾರ್ ಸೊಸೈಟಿಯ ನಿವಾಸಿ ಡಾ. ಪುನೀತ್ ಸರ್ದಾನ ವಂಚನೆಗೊಳಗಾದ ವೈದ್ಯ. ಗುರುಗ್ರಾಮದ ವೈದ್ಯ ಡಾ. ಪುನೀತ್ ಸರ್ದಾನ ಅವರು ಜನವರಿ 4, 2024 ರಂದು ಫೇಸ್​ಬುಕ್​ನಲ್ಲಿ ಆನ್​ಲೈನ್​ ಟ್ರೇಡಿಂಗ್​ ಮೂಲಕ ಹೆಚ್ಚಿನ ಹಣಗಳಿಸಬಹುದು ಎಂದು ಜಾಹೀರಾತು ನೋಡಿ ಬರೋಬ್ಬರಿ ಬರೋಬ್ಬರಿ 2.5 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ.

    ಆನ್‌ಲೈನ್ ಸ್ಟಾಕ್ ಮತ್ತು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಹೂಡಿಕೆಗಳ ಮೂಲಕ ಗಮನಾರ್ಹ ಲಾಭದ ಭರವಸೆ ನೀಡಿದ್ದಾರೆ. ಹೆಚ್ಚಿನ ಲಾಭಗಳಿಸಬಹುದು ಎಂಬ ಆಸೆಯಿಂದ ಆಕರ್ಷಿತರಾದ ಡಾ. ಸರ್ದಾನ ಅವರು ಜಾಹೀರಾತಿನಲ್ಲಿ ಒದಗಿಸಿದ ಸಂಖ್ಯೆಯನ್ನು ಸಂಪರ್ಕಿಸಿದ್ದಾರೆ. ವೈದ್ಯನ ನಂಬರ್​ಗೆ ಲಿಂಕ್​ ಕ್ಲಿಕ್ ಮಾಡಿ ನೋಂದಣಿ ಮಾಡಿಕೊಂಡಿದ್ದಾರೆ.  ನಂತರ ವಾಟ್ಸ್​ಆ್ಯಪ್​ ಮೂಲಕ ಜೆಟಿಎಫ್​​ಎಸ್​ಇ ಎಂಬ ಲಿಂಕ್ ಕಳುಹಿಸಿ ಡೌನ್​ಲೋಡ್​ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಆ್ಯಪ್​ ಡೌನ್​ಲೋಡ್​ ಮಾಡಿಕೊಂಡು ಆರಂಭದಲ್ಲಿ 50.000 ಸಾವಿರ ಹಣವನ್ನು ಟ್ರೇಡಿಂಗ್​ನಲ್ಲಿ ಹೂಡಿಕೆ ಮಾಡಿದ್ದಾರೆ.

    ಆರಂಭಿದಲ್ಲಿ ಹೂಡಿಕೆಯು ನಂತರ ಡಾ. ಸರ್ದಾನ ಅವರನ್ನು ಮತ್ತಷ್ಟು ಹೂಡಿಕೆ ಮಾಡಲು ಹೆಚ್ಚಿನ ಲಾಭ ಬರುವಂತೆ ನಂಬಿಸಿ ವೈದ್ಯನನ್ನು ಮನವೊಲಿಸಿದ್ದಾರೆ. ಆತನು ಹೆಚ್ಚಿನ ಲಾಭಗಳಿಸಬಹುದು ಎಂಬ ಆಸೆಬಿದ್ದು ಮತ್ತಷ್ಟು ಹಣವನ್ನುಹೂಡಿಕೆ ಮಾಡಿದ್ದಾನೆ. ಕೆಲವು ದಿನಗಳ ನಂತರ ಬರೋಬ್ಬರಿ 3.19 ಕೋಟಿ ರೂಪಾಯಿಗಳ ಗಣನೀಯ ಲಾಭವನ್ನು ತೋರಿಸಿದ್ದಾರೆ. ಲಾಭಗಳಿಸಿದ ಖುಷಿಯಲ್ಲಿ ಡಾ. ಸರ್ದಾನ್​ ಆ ಸಂತೋಷ ಹೆಚ್ಚಿನ ಸಮಯವಿರಲಿಲ್ಲ.

    ತಮ್ಮ ಲಾಭವನ್ನು ಪಡೆಯಲು ಮುಂದಾದ ಸಂದರ್ಭದಲ್ಲಿ ಅದು ಸಾಧ್ಯವಾಗಿಲ್ಲ. ಈ ಸಂರ್ಭದಲ್ಲಿ ಸೈಬರ್ ವಂಚಕರನ್ನು ಸಂಪರ್ಕಿಸಿದಾಗ ನಿಮ್ಮ ಹಣವನ್ನು ಹಿಂಪಡೆಯಬೇಕಾದರೆ “ಭದ್ರತಾ ಠೇವಣಿಗಳ” ನೆಪದಲ್ಲಿ ಹೆಚ್ಚುವರಿ ಹಣವನ್ನು ಠೇವಣಿ ಮಾಡಲು ಅವರು ಅವನಿಗೆ ಮನವರಿಕೆ ಮಾಡಿದರು. ಅವರ ವಿಸ್ತೃತ ಯೋಜನೆಗೆ ಬಲಿಯಾದ ಡಾ. ಸರ್ದಾನ ಅವರು ಬಹು ವಹಿವಾಟುಗಳಲ್ಲಿ ಒಟ್ಟು 1.36 ಕೋಟಿ ರೂ.ಗಳನ್ನು ವರ್ಗಾಯಿಸಿದ್ದಾರೆ.

    ವೈದ್ಯ ಸರ್ದಾನ ಅವರು ಆನ್​ಲೈನ್​ ಟ್ರೇಡಿಂಗ್​ ಕಂಪನಿಗಳಲ್ಲಿ ಒಟ್ಟು 2.5 ಕೋಟಿ ಹೂಡಿಕೆ ಮಾಡಿದ್ದು ಆನ್​ಲೈನ್​ ಟ್ರೇಡಿಂಗ್​ ಮೂಲಕ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿ ಮೋಸ ಮಾಡಿದವರನ್ನು ಪತ್ತೆ ಮಾಡಿ ಹಣ ವಾಪಸ್​ ಕೊಡಿಸುವಂತೆ ಕೋರಿ ಸೈಬರ್​ ಠಾಣೆಗೆ ದೂರು ನೀಡಿದ್ದಾರೆ.

    48ನೇ ವಯಸ್ಸಿನಲ್ಲಿ 3ನೇ ಮಗುವಿಗೆ ತಂದೆಯಾದ ಪಾಕ್​ ಮಾಜಿ ಸ್ಟಾರ್ ಕ್ರಿಕೆಟಿಗ! ಸಂತಸದಲ್ಲಿ ತೇಲಾಡಿದ ರಾವಲ್ಪಿಂಡಿ ಎಕ್ಸ್​​ಪ್ರೆಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts