More

    ಆನ್‌ಲೈನ್ ಉದ್ದಿಮೆ ಪರವಾನಗಿ ಮತ್ತಷ್ಟು ಸರಳವಾಗಲಿ : ಪ್ರಗತಿ ಪರಿಶೀಲನೆ ಸಭೆಯಲ್ಲಿ ಗೌರವ್ ಗುಪ್ತ ಆದೇಶ

    ಬೆಂಗಳೂರು : ವಾಣಿಜ್ಯ ಉದ್ದಿಮೆಗಳ ಪರವಾನಗಿ ಮತ್ತು ನವೀಕರಣಕ್ಕೆ ಆನ್‌ಲೈನ್ ತಂತ್ರಾಂಶವನ್ನು ಇನ್ನಷ್ಟು ಸರಳೀಕರಣಗೊಳಿಸಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಆದೇಶಿಸಿದ್ದಾರೆ.

    ಪಾಲಿಕೆ ಕೇಂದ್ರ ಕಚೇರಿಯಲ್ಲಿ ವಾಣಿಜ್ಯ ಉದ್ದಿಮೆಗಳ ಪರವಾನಗಿ ನೀಡುವ ಕುರಿತು ಮಂಗಳವಾರ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಮಾತನಾಡಿ, ಆನ್‌ಲೈನ್ ಮೂಲಕ ಉದ್ದಿಮೆ ನವೀಕರಣ ಕಾರ್ಯ ಶೀಘ್ರ ನಡೆಯುತ್ತಿದೆ. ಆದರೆ, ಹೊಸದಾಗಿ ಟ್ರೇಡ್ ಲೈಸೆನ್ಸ್ ವಿತರಣೆ ಕಾರ್ಯ ವಿಳಂವಾಗುತ್ತಿದೆ. ಕೆಲವು ಉದ್ದಿಮೆಗಳಿಗೆ ಸ್ಥಳ ಪರಿಶೀಲನೆ ಅಗತ್ಯವಿರುವುದಿಲ್ಲ. ಅಂತಹ ಉದ್ದಿಮೆಗಳ ಸ್ಥಳ ಪರಿಶೀಲಿನೆ ಹಂತ ಕಡಿತಗೊಳಿಸಲು ಕ್ರಮವಹಿಸುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

    ಡ್ಯಾಶ್‌ಬೋರ್ಡ್ ಸಿದ್ಧಪಡಿಸಿ: ಉದ್ದಿಮೆ ಪರವಾನಗಿ ಪಡೆಯಲು ಉದ್ದಿಮೆದಾರರು ಸುಲಭ ಮತ್ತು ಸರಳ ವಿಧಾನದಲ್ಲಿ ಲೈಸೆನ್ಸ್ ಪಡೆಯುವಂತೆ ಅನುಕೂಲ ಮಾಡಿಕೊಡಬೇಕು. ವಲಯವಾರು ಎಷ್ಟು ಅರ್ಜಿಗಳು ಸ್ವೀಕೃತಗೊಂಡಿವೆ? ಎಷ್ಟು ಪರವಾನಗಿ ನೀಡಲಾಗಿದೆ ? ಬಾಕಿ ಅರ್ಜಿಗಳು ಎಷ್ಟಿವೆ ಎಂಬ ವಿವರವುಳ್ಳ ಡ್ಯಾಶ್‌ಬೋರ್ಡ ಸಿದ್ಧಪಡಿಸಬೇಕು. ಈ ಮೂಲಕ ಬಾಕಿ ಅರ್ಜಿಗಳ ವಿಲೇವಾರಿಗೆ ಮೇಲಧಿಕಾರಿಗಳು ನಿಗಾವಹಿಸಬೇಕು. ಉದ್ದಿಮೆ ಪರವಾನಗಿಯನ್ನು ಡಿಜಿಲಾಕರ್‌ನೊಂದಿಗೆ ಸಮೀಕರಿಸುವಂತೆ ನಿರ್ದೇಶಿಸಿದರು.

    ಆನ್‌ಲೈನ್‌ನಲ್ಲಿ ಮಳಿಗೆ ಮಾಹಿತಿ: ಪ್ರಸ್ತುತ ಆನ್‌ಲೈನ್ ಟ್ರೇಡ್ ಲೈಸೆನ್ಸ್ ಪೋರ್ಟಲ್‌ನಲ್ಲಿ ಪಾಲಿಕೆ ವ್ಯಾಪ್ತಿಯ ಮೆಡಿಕಲ್ ಸ್ಟೋರ್, ಹೋಟೆಲ್, ದಿನಸಿ ಅಂಗಡಿ ಸೇರಿ ವಿವಿಧ ಉದ್ದಿಮೆಗಳ ಸ್ಥಳ ಗುರುತಿಸಬೇಕು. ಯಾವುದೇ ತುರ್ತು ಸಂದರ್ಭದಲ್ಲಿ ಆಯಾ ಪ್ರದೇಶದ ಉದ್ದಿಮೆಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ಆರೋಗ್ಯಾಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬಹುದು. ಕೂಡಲೇ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಎಲ್ಲ ಮಾಹಿತಿಗಳು ದಾಖಲಾಗುವಂತೆ ಕ್ರಮ ವಹಿಸಬೇಕೆಂದು ಆದೇಶಿಸಿದರು.

    ಸಭೆಯಲ್ಲಿ ವಿಶೇಷ ಆಯುಕ್ತ (ಆರೋಗ್ಯ ವಿಭಾಗ) ರಾಜೇಂದ್ರ ಚೋಳನ್ 8 ವಲಯಗಳ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

    5,646 ಹೊಸ ಉದ್ದಿಮೆ ಆರಂಭ : 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಈವರೆಗೆ ಒಟ್ಟು 5,646 ಹೊಸ ಉದ್ದಿಮೆಗಳಿಗೆ ಪರವಾನಗಿ ನೀಡಲಾಗಿದೆ. 2,341 ಹಳೆಯ ಉದ್ದಿಮೆಗಳ ಪರವಾನಗಿ ನವೀಕರಣ ಮಾಡಲಾಗಿದೆ ಎಂದು ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಕೆ. ವಿಜೇಂದ್ರ ಸಭೆಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts