More

    ಆನ್‌ಲೈನ್ ಬೋಧನೆ ಅನಿವಾರ್ಯ – ಎಂಎಲ್‌ಸಿ ಕವಟಗಿಮಠ

    ಬೆಳಗಾವಿ: ಕೋವಿಡ್-19 ನಂತರದ ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಆನ್‌ಲೈನ್ ಬೋಧನೆ ಅನಿವಾರ್ಯವಾಗಿದೆ ಎಂದು ಕೆಎಲ್‌ಇ ಸಂಸ್ಥೆಯ
    ನಿರ್ದೇಶಕ ಹಾಗೂ ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

    ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಮಹಾ ವಿದ್ಯಾಲಯದ ಐಕ್ಯೂಎಸಿ ಘಟಕದಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರಸ್ತುತ ಸನ್ನಿವೇಶದಲ್ಲಿ ಪರಿಣಾಮಕಾರಿ ಆನ್‌ಲೈನ್ ಬೋಧನೆ ವಿಷಯ ಕುರಿತ ವೆಬಿನಾರ್‌ನಲ್ಲಿ ಅವರು ಮಾತನಾಡಿದರು. ಕೋವಿಡ್-19 ನಂತರ ಶೈಕ್ಷಣಿಕ ಅಗತ್ಯತೆ ಪೂರೈಸಲು ಆನ್‌ಲೈನ್ ಬೋಧನೆ ಕಡ್ಡಾಯವಾಗಿದೆ. ಎಲ್ಲ ವಿಶ್ವವಿದ್ಯಾಲಯ, ಕಾಲೇಜ್‌ಗಳು, ಶಾಲೆಗಳು ಇಂದು ಪಾಠ ಬೋಧನೆಗಾಗಿ ಆನ್‌ಲೈನ್ ಮಾಧ್ಯಮ ಆಯ್ದುಕೊಂಡಿವೆ.

    ಆನ್‌ಲೈನ್ ಶಿಕ್ಷಣದ ಮೂಲಕವೇ ವಿದ್ಯಾರ್ಥಿಗಳಿಗೆ ಜ್ಞಾನ ನೀಡುವ ಸಂದರ್ಭ ಇಂದು ಬಂದಿದೆ. ಆನ್‌ಲೈನ್ ಶಿಕ್ಷಣದ ಮೂಲಕ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸ್ವಯಂ ಶಿಸ್ತು ರೂಪಿಸಬೇಕು ಎಂದು ಕವಟಗಿಮಠ ಸಲಹೆ ನೀಡಿದರು. ಖ್ಯಾತ ವಾಗ್ಮಿ ಡಾ. ಗುರುರಾಜ ಕರಜಗಿ ಮಾತನಾಡಿ, ಕರೊನದಿಂದಾಗಿ 191 ರಾಷ್ಟ್ರಗಳ ಶೇ.98.03 ವಿದ್ಯಾರ್ಥಿಗಳು ತರಗತಿಯಿಂದ ಹೊರಗಿದ್ದಾರೆ. ಏಪ್ರಿಲ್‌ಗಿಂತ ಮೊದಲು ಹಲವು ಶಿಕ್ಷಕರು, ವಿದ್ಯಾರ್ಥಿಗಳಿಗೆ ಆನ್‌ಲೈನ್ ಬೋಧನೆ ಕುರಿತು ಜ್ಞಾನವಿರಲಿಲ್ಲ.

    ಆನ್‌ಲೈನ್ ತರಗತಿಗಳನ್ನು ನಡೆಸಲು ಶಿಕ್ಷಕರಲ್ಲಿ ಕೌಶಲಗಳಿರಲಿಲ್ಲ. ಸದ್ಯ ಅನಿವಾರ್ಯವಾಗಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ತರಗತಿ ತೆಗೆದುಕೊಳ್ಳಬೇಕು. ಆನ್‌ಲೈನ್ ಬೋಧನೆಯಿಂದಲೂ ವೈಯಕ್ತಿಕವಾಗಿ ವಿದ್ಯಾರ್ಥಿಗಳಲ್ಲಿ ಪ್ರಗತಿ ಸಾಧ್ಯವಾಗುತ್ತದೆ ಎಂದರು. ಕೆಎಲ್‌ಇ ಸಂಸ್ಥೆಯ ಸದಸ್ಯ ಡಾ.ಪ್ರಕಾಶ ಕಡಕೋಳ, ಸತೀಶ ಪಾಟೀಲ, ಪ್ರಾಚಾರ್ಯ ಡಾ. ಆರ್.ಎಂ. ಪಾಟೀಲ, ಉಪಪ್ರಾಚಾರ್ಯ ಪ್ರೊ. ಎಂ.ಆರ್. ಬನಹಟ್ಟಿ, ಡಾ. ಶರಯು ಪೊತ್ನೀಸ್, ಸುಧಾ ಚಿಕ್ಕಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts