More

    12 ಲಕ್ಷದ ಆಸೆಗೆ 26 ಲಕ್ಷ ರೂ. ಕಳೆದುಕೊಂಡ!

    ಉಡುಪಿ: ಆನ್‌ಲೈನ್ ವಂಚನೆಗಳ ಬಗ್ಗೆ ಜನರಿಗೆ ಎಷ್ಟು ಮಾಹಿತಿ ನೀಡಿದರೂ ಕಡಿಮೆಯೇ ಆಗುತ್ತಿದೆ. ಅದೇನು ಮರಳು ಮಾಡುತ್ತಾರೋ ಏನೋ… ದಿನದಿಂದ ದಿನಕ್ಕೆ ಇಂಥ ಪ್ರಕರಣಗಳು ಉಡುಪಿಯಲ್ಲಿ ಹೆಚ್ಚುತ್ತಿದೆ.
    ಹೀಗೆ ವಂಚಕರ ಜಾಲಕ್ಕೆ ಬಿದ್ದ ವ್ಯಕ್ತಿಯೊಬ್ಬರು 12 ಲಕ್ಷ ರೂ.ಬಹುಮಾನದ ಆಸೆಗೆ 26 ಲಕ್ಷ ರೂ. ಕಳೆದುಕೊಂಡಿದ್ದಾರೆ. ಪ್ರಕರಣದ ಬಗ್ಗೆ ಒಂದು ವರ್ಷದ ಬಳಿಕ ದೂರು ನೀಡಿದ್ದಾರೆ.
    ಮಾ.29, 2019ರಂದು ಕೆ.ನಾಗರಾಜ ಭಟ್ ಎಂಬುವರಿಗೆ ನ್ಯಾಪ್ಟಾಲ್ ಕಂಪನಿ ಹೆಸರಿನಲ್ಲಿ ಸ್ಕ್ರಾಚ್ ಕೂಪನ್ ಪೋಸ್ಟ್ ಮೂಲಕ ಬಂದಿದ್ದು, 12 ಲಕ್ಷ ರೂ. ವಿಜೇತರಾಗಿದ್ದೀರಿ ಎಂಬುದಾಗಿ ನಮೂದಿಸಲಾಗಿತ್ತು. ಜತೆಗೆ ಸಂಪರ್ಕ ಸಂಖ್ಯೆ ನೀಡಲಾಗಿತ್ತು. ಇದನ್ನು ನಂಬಿದ ಭಟ್ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ಹಣವನ್ನು ಪಡೆಯಬೇಕಾದರೆ ರಿಜಿಸ್ಟ್ರೇಶನ್ ಚಾರ್ಜ್ ಪಾವತಿಸುವಂತೆ ಬ್ಯಾಂಕ್ ಖಾತೆ ವಿವರ ನೀಡಿದ್ದಾನೆ. ಈತನ ಮಾತು ನಂಬಿ ಏಪ್ರಿಲ್ 4 ರಂದು 12 ಸಾವಿರ ರೂ. ಹಣವನ್ನು ಪಾವತಿಸಿದ್ದಾರೆ. ನಂತರದ ದಿನಗಳಲ್ಲಿ ಆರೋಪಿ ಅಮಿತ್ ಬಿಸ್ವಾಸ್, ಚೇತನ್ ಕುಮಾರ್ ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಿ, ದೂರುದಾರರನ್ನು ನಂಬಿಸಿ, ಜಿಎಸ್‌ಟಿ ಟ್ಯಾಕ್ಸ್, ವೆರಿಫಿಕೇಶನ್ ಚಾರ್ಜ್, ಸಬ್ ಚಾರ್ಜ್ ಎಂದು ಹೇಳಿ ಜುಲೈ 28, 2019ವರೆಗೆ ಒಟ್ಟು ರೂ. 26,47,650 ರೂ. ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಸಿಕೊಂಡು, ಬಹುಮಾನದ ಹಣ ನೀಡದೇ ವಂಚಿಸಿದ್ದಾರೆ ಎಂದು ಉಡುಪಿ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts