More

    ರಾಜ್ಯ ಕಾಂಗ್ರೆಸ್​ನಲ್ಲಿ ಹೊಸ ಶಕೆ ಆರಂಭ

    ರಾಜ್ಯ ಕಾಂಗ್ರೆಸ್​ನಲ್ಲಿ ಹೊಸ ಶಕೆ ಆರಂಭ

    ಚಿಕ್ಕಮಗಳೂರು: ಡಿ.ಕೆ.ಶಿವಕುಮಾರ್ ಸಂಕಷ್ಟದ ಕಾಲದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ನಾಯಕತ್ವ ವಹಿಸಿಕೊಂಡಿದ್ದಾರೆ. ಪದಗ್ರಹಣ ಕಾರ್ಯಕ್ರಮವನ್ನೂ ಲಕ್ಷಾಂತರ ಜನ ವೀಕ್ಷಿಸಿದ್ದು, ರಾಜ್ಯದಲ್ಲಿ ಪಕ್ಷದ ಹೊಸ ಶಕೆ ಆರಂಭವಾಗಿದೆ ಎಂದು ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಡಾ. ಡಿ.ಎಲ್.ವಿಜಯ್ಕುಮಾರ್ ಹೇಳಿದರು.

    ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಕಾರ್ಯಕ್ರಮದ ನೇರಪ್ರಸಾರವನ್ನು ಆನ್​ಲೈನ್​ನಲ್ಲಿ ವೀಕ್ಷಿಸಿ ಮಾತನಾಡಿದರು.

    ಬಡವರು, ದೀನ ದಲಿತರು ಹಾಗೂ ಶೋಷಿತರ ಪರವಾದ ಪಕ್ಷ ಕಾಂಗ್ರೆಸ್. ಸ್ವಾತಂತ್ರ್ಯ ಬಂದಾಗಿನಿಂದಲೂ ಇವರ ಪರ ಹೋರಾಟ ಮಾಡುವುದೇ ನಮ್ಮ ಸಿದ್ಧಾಂತ. ಜಾತಿ, ಧರ್ಮ ಭೇದವಿಲ್ಲದೆ ಸಂಘಟನೆಯಲ್ಲಿ ತೊಡಗಿದೆ. ಚೀನಾ ಎದುರಿಸುವ ಶಕ್ತಿ ಇಂದು ದೇಶಕ್ಕಿದೆ ಎಂದರೆ ಅದು ಕಾಂಗ್ರೆಸ್ ಹಾಕಿಕೊಟ್ಟ ಬುನಾದಿ ಎಂದರು.

    ಎಲ್ಲರನ್ನು, ಎಲ್ಲವನ್ನೂ ಒಗ್ಗೂಡಿಸಿ ಕೊಂಡೊಯ್ಯುವ ಶಕ್ತಿ ಡಿ.ಕೆ.ಶಿವಕುಮಾರ್ ಅವರಿಗಿದೆ. ಅವರ ಕೈ ಬಲಪಡಿಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.

    ಚಿಕ್ಕಮಗಳೂರು ನಗರದಲ್ಲಿ 9, ವಿಧಾನಸಭಾ ಕ್ಷೇತ್ರದಲ್ಲಿ 26, ಜಿಲ್ಲೆಯಲ್ಲಿ 250 ಸ್ಥಳಗಳಲ್ಲಿ 50 ಕಾರ್ಯಕರ್ತರಿಗೆ ಸೀಮಿತವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ಏಕಕಾಲದಲ್ಲಿ ರಾಜ್ಯದಲ್ಲಿ 7500 ಕೇಂದ್ರದಲ್ಲಿ 10 ಲಕ್ಷ ಜನ ವೀಕ್ಷಿಸಿದ್ದಾರೆ ಎಂದು ತಿಳಿಸಿದರು.

    ಕೆಪಿಸಿಸಿ ವೀಕ್ಷಕ ಪಟೇಲ್ ಶಿವಣ್ಣ ಮಾತನಾಡಿ, ಸಾಮಾಜಿಕ ಜಾಲತಾಣದ ಮೂಲಕ ರಾಜ್ಯಕ್ಕೆ ಪ್ರತಿಜ್ಞಾವಿಧಿ ಸಮಾರಂಭ ತಲುಪುತ್ತಿದೆ. ರಾಷ್ಟ್ರದಲ್ಲೇ ಇದೊಂದು ವಿನೂತನ ಕಾರ್ಯಕ್ರಮ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ನೆನಪಿಸಿಕೊಳ್ಳುವಂತಹ ದಿನವಿದು. ಸವಿಂಧಾನದ ಆಶಯಗಳನ್ನು ಈಡೇಸುವ ನಿಟ್ಟಿನಲ್ಲಿ ಡಿಕೆಶಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ ಎಂದರು.

    ಜಿಲ್ಲಾ ಕಾಂಗ್ರೆಸ್ ಕಚೇರಿ, ಸಾಯಿ ಮಧುವನ ಬಡಾವಣೆ, ಗೌರಿಕಾಲುವೆ, ವಿಜಯಪುರ, ಕೋಟೆ, ಷರೀಫ್​ಗಲ್ಲಿ, ಕೆಂಪನಹಳ್ಳಿ, ಉಪ್ಪಳ್ಳಿ, ದಂಟರಮಕ್ಕಿ, ಸೇರಿ ಕ್ಷೇತ್ರದ 26 ಹಾಗೂ ಜಿಲ್ಲೆಯ 250 ಸ್ಥಳಗಳಲ್ಲಿ ಡಿಜಿಟಲ್ ಪರದೆಗಳನ್ನು ಅಳವಡಿಸಿ ನೇರಪ್ರಸಾರ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಪಾಲ್ಗೊಂಡು ಪ್ರತಿಜ್ಞಾ ವಿಧಿ ಬೋಧನೆ ಮಾಡಿ, ಆನ್​ಲೈನ್​ನಲ್ಲೇ ಸಂವಾದ ನಡೆಸಿದರು.

    ಸೇವಾದಳ ಜಿಲ್ಲಾಧ್ಯಕ್ಷ ಸಿಲ್ವರ್​ಸ್ಟರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಪಾಪುರ ಮಂಜೇಗೌಡ, ಜಿಲ್ಲಾ ವಕ್ತಾರ ಶಿವಾನಂದಸ್ವಾಮಿ, ಯುವ ಕಾಂಗ್ರೆಸ್ ಕಾರ್ಯದರ್ಶಿ ವಿನಾಯಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಎಐಸಿಸಿ ಯುವ ಕಾರ್ಯದರ್ಶಿ ಪುಷ್ಪಲತಾ, ರೂಬೆನ್ ಮೊಸಸ್, ತನೂಜ್​ಕುಮಾರ್, ಕಾರ್ತಿಕ್ ಚೆಟ್ಟಿಯಾರ್, ಸಿ.ಎನ್.ಅಕ್ಮಲ್, ಉದಯ್ಕುಮಾರ್, ಮಲ್ಲೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts