More

    ದೇಶದ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ನೀಡುತ್ತಿದ್ದವನ ಬಂಧನ

    ನಾಸಿಕ್​: ಭಾರತದ ರಹಸ್ಯ ಮಾಹಿತಿಯನ್ನು ಶತ್ರುರಾಷ್ಟ್ರವಾದ ಪಾಕಿಸ್ತಾನಕ್ಕೆ ಕಳುಹಿಸಿದ್ದವರು ಈ ಹಿಂದೆ ಅನೇಕರು ಸಿಕ್ಕಿ ಹಾಕಿಕೊಂಡಿದ್ದಾರೆ. ಈಗ ಆ ಪಟ್ಟಿಗೆ ಮತ್ತೊಬ್ಬ ದೇಶದ್ರೋಹಿ ಸೇರಿಕೊಂಡಿದ್ದಾನೆ.

    ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್​) ನಾಸಿಕ್ ಘಟಕದ ಪೊಲೀಸರು ಹೀಗೊಬ್ಬನನ್ನು ಬಂಧಿಸಿದ್ದಾಗಿ ಶುಕ್ರವಾರ ಹೇಳಿಕೊಂಡಿದ್ದಾರೆ. ಇಂಟೆಲಿಜೆನ್ಸ್​ ತಂಡವೊಂದನ್ನು ನಾಸಿಕ್​ ಎಟಿಎಸ್​ ರಚಿಸಿತ್ತು. ಅದರಲ್ಲಿದ್ದಾತನೊಬ್ಬ ಭಾರತದ ಯುದ್ಧ ವಿಮಾನ ಹಾಗೂ ಅದನ್ನು ನಿರ್ಮಿಸುವ ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿ. ಬಗ್ಗೆ ರಹಸ್ಯ ಮಾಹಿತಿಗಳನ್ನು ನೀಡುತ್ತಿದ್ದುದನ್ನು ತಿಳಿದು ಆತನನ್ನು ಬಂಧಿಸಿದೆ.

    ಆತ ಪಾಕಿಸ್ತಾನದ ಬೇಹುಗಾರಿಕಾ ಪಡೆಯ ಇಂಟರ್​ ಸರ್ವಿಸಸ್​ ಇಂಟೆಲಿಜೆನ್ಸ್ ಜತೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದ ಎಂಬುದು ವಿಚಾರಣೆ ವೇಳೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಂಧಿತನಿಂದ ಮೂರು ಮೊಬೈಲ್​ ಫೋನ್​, ಐದು ಸಿಮ್​​ ಕಾರ್ಡ್​, ಎರಡು ಮೆಮೊರಿ ಕಾರ್ಡ್​ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅದನ್ನು ಫೊರೆನ್ಸಿಕ್​ ಸೈನ್ಸ್​ ಲ್ಯಾಬ್​ಗೆ ಕಳುಹಿಸಿಕೊಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts