More

    ಯೂಟ್ಯೂಬ್​​ನಿಂದ ನೋಟು ಮುದ್ರಿಸುವುದನ್ನು ಕಲಿತವ ಈಗ ಪೊಲೀಸರ ಅತಿಥಿ!

    ಮುಂಬೈ: ಯೂಟ್ಯೂಬ್​ನಿಂದ ಅಡುಗೆ, ಹೊಲಿಗೆ, ನೃತ್ಯ, ಸಂಗೀತ… ಏನೆಲ್ಲಾ ಕಲಿಯಬಹುದು. ಅದೆಲ್ಲಾ ಬಿಟ್ಟು ನಕಲಿ ನೋಟು ಮುದ್ರಿಸುವುದನ್ನು ಕಲಿತು ನಕಲಿ ನೋಟು ದಂಧೆ ಆರಂಭಿಸಿದ್ದ ಯುವಕನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಮುಂಬೈ ಪೊಲೀಸರು ಬಂಧಿಸಿರುವ ಮಹೇಂದ್ರ ಖಂಡಸ್ಕರ್ ಎಂಬುವವನೇ ಆ ಅತಿ ಬುದ್ಧಿವಂತ.

    ಆತ 2000, 500, 200 ಮತ್ತು 100 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿ ಇನ್ನು ಮೂವರ ಸಹಾಯದಿಂದ ಚಲಾವಣೆಗೆ ಬಿಡುತ್ತಿದ್ದ. ಈ ನಕಲಿ ನೋಟಿನ ಗ್ಯಾಂಗನ್ನು ಪತ್ತೆ ಹಚ್ಚಿರುವ ಮುಂಬೈ ಪೊಲೀಸರು 35 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ: ತನ್ನಿಂದ ಗರ್ಭಿಣಿಯಾದ ಬಾಲಕಿಯನ್ನು ಮದ್ವೆಯಾಗ್ತೇನೆಂದ ವಿವಾಹಿತ- ಅಮ್ಮನ ಸಮ್ಮತಿ; ಕೋರ್ಟ್​ ನೀಡಿತು ಜಾಮೀನು

    ವಿಖ್ರೋಲಿಯ ಈಸ್ಟರ್ನ್ ಎಕ್ಸ್​ಪ್ರೆಸ್​ ಹೈವೇಯ ಹೊಟೆಲೊಂದರಲ್ಲಿ ಮುಖ್ಯ ಆರೋಪಿ ಮಹೇಂದ್ರ ಖಂಡಸ್ಕರ್, ನೋಟು ಚಲಾವಣೆಯಲ್ಲಿ ಸಹಾಯ ಮಾಡುತ್ತಿದ್ದರೆನ್ನಲಾದ ಅಬ್ದುಲ್ಲಾ ಖಾನ್, ಫಾರೂಕ್ ಚೌಧರಿ ಮತ್ತು ಅಮೀನ್ ಶೇಖ್ ಎಂಬುವವರನ್ನು ಭೇಟಿ ಮಾಡುತ್ತಿರುವುದಾಗಿ ಪೊಲೀಸರಿಗೆ ಕುರುಹು ಸಿಕ್ಕಿತ್ತು. ಕಾರ್ಯಾಚರಣೆ ನಡೆಸಿದ ಮುಂಬೈ ಅಪರಾಧ ವಿಭಾಗದ ಪೊಲೀಸ್ ತಂಡಕ್ಕೆ ಆರೋಪಿಗಳಿಂದ 2.8 ಲಕ್ಷ ರೂಪಾಯಿ ನಕಲಿ ನೋಟುಗಳು ಸಿಕ್ಕವು.

    ವಿಚಾರಣೆ ಮುಂದುವರಿಸಿದಾಗ ಖಂಡಸ್ಕರ್ ತನ್ನ ಪಾಲ್​ಘರ್​ ನಿವಾಸದಲ್ಲಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದುದು ಬೆಳಕಿಗೆ ಬಂದಿದೆ. ಅಲ್ಲಿಂದ ಮತ್ತೆ ಸುಮಾರು 32 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳನ್ನೂ, ಆರೋಪಿಯು ಬಳಸುತ್ತಿದ್ದ ಲ್ಯಾಪ್​ಟಾಪ್​, ಪ್ರಿಂಟರ್, ಬಾಂಡ್ ಪೇಪರ್ ಮುಂತಾದವುಗಳನ್ನೂ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಏಕಾಂತದಲ್ಲಿದ್ದಾಗ ಮನೆಗೆ ನುಗ್ಗಿ ವಿಡಿಯೋ ಮಾಡಿಕೊಂಡ! ಸೆಕ್ಸ್​ಗೆ ಒಪ್ಪದಿದ್ದರೆ ವಿಡಿಯೋ ವೈರಲ್​ ಮಾಡುವುದಾಗಿ ಬೆದರಿಸಿದ

    “ಮಹೇಂದ್ರ ಖಂಡಸ್ಕರ್ ನಕಲಿ ನೋಟುಗಳನ್ನು ಮುದ್ರಿಸಿ ರಿಯಾಯಿತಿ ದರದಲ್ಲಿ ಮಾರುತ್ತಿದ್ದ. ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ನೋಟುಗಳನ್ನು ಒಂದು ಲಕ್ಷಕ್ಕೆ ಕೊಳ್ಳುತ್ತಿದ್ದ ಇತರರು ಅದರ ಚಲಾವಣೆಯಲ್ಲಿ ತೊಡಗಿದ್ದರು. ಕಳೆದ ಮೂರು ತಿಂಗಳಿನಿಂದ ಈ ಅಪರಾಧದಲ್ಲಿ ತೊಡಗಿದ್ದರು” ಎಂದು ಡಿಸಿಪಿ ಅಕ್ಬರ್ ಪಠಾನ್ ತಿಳಿಸಿದ್ದಾರೆ. (ಏಜೆನ್ಸೀಸ್​)

    ಪೊಲೀಸರಿಗಿದು ಸಂತಸದ ಸುದ್ದಿ; ವಾರಕ್ಕೊಮ್ಮೆ ಆರಾಮ..!

    ಎರಡು ಸಲ ತಾಳಿ ಕಿತ್ತೆಸೆದರೂ ಬಿಡಲಿಲ್ಲ, ನನಗಾದ ಅನ್ಯಾಯ ಯಾರಿಗೂ ಆಗಬಾರದು: ಎಲ್ಲ ಹೇಳಿಕೊಂಡ ಸಂತ್ರಸ್ತೆ…

    ಪ್ರೀತಿಗೆ ಒಲ್ಲೆ ಎಂದವಳನ್ನು ಕೊಂದಿದ್ದ ಪಾಗಲ್​ ಪ್ರೇಮಿ ನೇಣಿಗೆ ಶರಣು! ಕೊಲೆಗಡುಕನನ್ನು ಸಾವಿನಿಂದ ರಕ್ಷಿಸಿದ್ದ ಮೃತಳ ಚಿಕ್ಕಪ್ಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts