More

    ಎಲ್ಲವೂ ಮೋದಿಗಾಗಿ: 5 ಕಿ.ಮೀ ಆಟೋ ಪ್ರಯಾಣಕ್ಕೆ ಕೇವಲ ಒಂದೇ ರೂಪಾಯಿ!

    ಕುಂದಾಪುರ: ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಇದೇ ಮೇ 26ಕ್ಕೆ ಆರು ವರ್ಷ ಪೂರೈಸಿ ಏಳನೇ ವರ್ಷ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ, ದೇಶದಾದ್ಯಂತ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಈ ದಿನವನ್ನು ಆಚರಣೆ ಮಾಡಿದ್ದಾರೆ.

    ಆದರೆ ಕುಂದಾಪುರದ ಆಟೋ ಚಾಲಕರೊಬ್ಬರು ವಿಭಿನ್ನವಾಗಿ ಮೋದಿ ಪರವಾದ ಅಭಿಮಾನ ಮೆರೆದಿದ್ದಾರೆ. ಅದೇನೆಂದರೆ, ಐದು ಕಿಲೋಮೀಟರ್​ವರೆಗೆ ಪ್ರಯಾಣಿಕರಿಗೆ ಉಚಿತ ಸೇವೆ ಮಾಡುವ ಮೂಲಕ. ಉಚಿತ ಸೇವೆ ಎಂದರೆ ಐದು ಕಿ.ಮೀವರೆಗೂ ಪ್ರಯಾಣಿಕರಿಂದ ಕೇವಲ ಒಂದು ರೂಪಾಯಿ ಮಾತ್ರ ಪಡೆಯುವ ಮೂಲಕ, ಗಮನ ಸೆಳೆದಿದ್ದಾರೆ.

    ಇದನ್ನೂ ಓದಿ: ಮಿಡತೆ ಹಾವಳಿಯ ಭಯ ಬೇಡ: ರಾಜ್ಯದ ಕೃಷಿಕರಿಗೆ ಸಚಿವ ಪಾಟೀಲ್ ಅಭಯ

    ಈ ಆಟೋ ಚಾಲಕನ ಹೆಸರು ಎಸ್​. ಸತೀಶ್‌ ಪ್ರಭು. ಕುಂದಾಪುರದ ಕೋಟೇಶ್ವರ ಗ್ರಾಮದ ಅಂಕದಕಟ್ಟೆ ನಿವಾಸಿಯಾಗಿರುವ ಇವರು, ಹಂಗಳೂರು ವಿನಾಯಕ ಚಿತ್ರ ಮಂದಿರ ಬಳಿಯ ರಿಕ್ಷಾ ನಿಲ್ದಾಣದಲ್ಲಿನ ರಿಕ್ಷಾ ಚಾಲಕ ಇವರು. ಮೋದಿ ಅವರು ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ದಿನ ಅಂದರೆ ಮೇ 26ರಿಂದ ತಮ್ಮ ಸೇವೆಯನ್ನು ಶುರು ಮಾಡಿರುವ ಸತೀಶ್​, ಜೂನ್​1 ರವರೆಗೆ 5 ಕಿ.ಮೀ.ವರೆಗೆ ಕೇವಲ 1 ರೂ. ದರದಲ್ಲಿ ರಿಕ್ಷಾ ಬಾಡಿಗೆ ಸೇವೆ ಒದಗಿಸುವುದಾಗಿ ಹೇಳಿದ್ದಾರೆ.

    ಅಷ್ಟಕ್ಕೂ ಸತೀಶ್​​ ಅವರು ಇದೇ ಮೊದಲ ಬಾರಿಗೆ ಅಲ್ಲ. ಬದಲಿಗೆ ಪ್ರಧಾನಿ ಮೋದಿ ಅವರ ಕಟ್ಟಾ ಅಭಿಮಾನಿಯಾಗಿರುವ ಇವರು, ಮೋದಿ ಅವರು ಅಧಿಕಾರಕ್ಕೆ ಬಂದ ಮೊದಲ ವರ್ಷದಿಂದಲೂ ಇದೇ ರೀತಿ ಸೇವೆ ಒದಗಿಸುತ್ತಲೇ ಬಂದಿದ್ದಾರೆ.

    ಇದನ್ನೂ ಓದಿ: ಚೀನಾಕ್ಕೆ ಸೆಡ್ಡು- ಭಾರತದಲ್ಲಿ ತಯಾರಾಯ್ತು ಕೋಟಿಗೂ ಅಧಿಕ ಸ್ವದೇಶಿ ಪಿಪಿಇ ಕಿಟ್​!

    ಇವರು ಮೋದಿಯವರು ಪ್ರಧಾನಿಯಾದ ಮೊದಲ ವರ್ಷದಿಂದ ಈವರೆಗೆ ಪ್ರತಿ ವರ್ಷವೂ ಕೂಡ ಈ ರೀತಿಯಾದ 1 ರೂ. ದರದ ಬಾಡಿಗೆ ಸೇವೆಯನ್ನು ನೀಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮೊದಲ ವರ್ಷ ಒಂದು ದಿನ, ಎರಡನೇ ವರ್ಷ 2 ದಿನ… ಹೀಗೆ ಈಗ ಆರು ವರ್ಷ ಮುಗಿದು ಏಳನೇ ವರ್ಷ ಕಾಲಿಡುವ ಕಾರಣ, ಏಳು ದಿನ ತಮ್ಮದು ಈ ಸೇವೆ ಎಂದಿದ್ದಾರೆ ಸತೀಶ್​.

    ಆಪ್ತ ಸಲಹೆ: ಗುರಿಗಳು ಸಾಕಷ್ಟಿವೆ, ಓದಲು ಆಗುತ್ತಲೇ ಇಲ್ಲ, ಇದಕ್ಕೆ ಕಾರಣವೇನು? ಪರಿಹಾರವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts