More

    ರಾಜ್ಯದಲ್ಲಿ ಕರೊನಾ ಆತಂಕ; ಬೆಂಗಳೂರಿನ ವ್ಯಕ್ತಿ ಕೋವಿಡ್​ಗೆ ಬಲಿ

    ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್​ ಪ್ರಕರಣಗಳ ಸಂಖ್ಯೆ ಹೆಚ್ಚುವ ಭೀತಿ ನಡುವೆಯೇ ವ್ಯಕ್ತಿಯೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಈ ವಿಚಾರವನ್ನು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಅವರೇ ಖಚಿತಪಡಿಸಿದ್ದಾರೆ.

    ಮೃತಪಟ್ಟಿರುವವರು ಬೆಂಗಳೂರಿನ ಚಾಮರಾಜಪೇಟೆಯ 64 ವರ್ಷದ ವ್ಯಕ್ತಿ ಎಂದು ತಿಳಿದು ಬಂದಿದ್ದು, ಡಿಸೆಂಬರ್ 14 ರಂದು ಮಲ್ಲಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ಜೊತೆಗೆ ಹಾರ್ಟ್, ಟಿಬಿ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಸಚಿವರು ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಸಚಿವ ದಿನೇಶ್​ ಗುಂಡೂರಾವ್​, ಕೋವಿಡ್​ನಿಂದ ಕೇರಳದಲ್ಲಿ ಐದು ಜನರ ಮೃತಪಟ್ಟಿದ್ದಾರೆ.‌ಅವರಿಗೂ ಹೃದಯ ಸಂಬಂಧಿ, ಕ್ಯಾನ್ಸರ್ ಸಮಸ್ಯೆ ಜೊತೆಗೆ ಕೋವಿಡ್ ಬಂದ ಹಿನ್ನಲೆಯಲ್ಲಿ ಸಾವು ಆಗಿದೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲಿ ಒಂದು ಸಾವು ಆಗಿದೆ. ಮೃತಪಟ್ಟರಿಗೆ ಹೃದಯ ಸಂಬಂಧಿ ಕಾಯಿಲೆ ಹಾಗೂ ಅಸ್ತಮಾ ಕಾಯಿಲೆ ಇತ್ತು. ಇದರೊಂದಿಗೆ ಕೋವಿಡ್ ಬಂದ ಹಿನ್ನಲೆಯಲ್ಲಿ ಅವರು ಸಾವಿಗೀಡಾಗಿದ್ದಾರೆ.

    Dinesh Gundurao

    ಇದನ್ನೂ ಓದಿ: ಸನಾತನ ಧರ್ಮದ ಪ್ರಕಾರ ಹಿಂದುಗಳು ಜಟ್ಕಾ ಕಟ್​ ಮಾಂಸವನ್ನು ಮಾತ್ರ ತಿನ್ನಬೇಕು: ಕೇಂದ್ರ ಸಚಿವ ಗಿರಿರಾಜ್ ಸಿಂಗ್

    ಪೋರ್ಟಲ್ ಸರಿಪಡಿಸಲು ಮನವಿ

    ಕೋವಿಡ್ ಸಂಬಂಧವಾಗಿ ಕೇಂದ್ರ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಹಾಗೂ ಉನ್ನತ ಅಧಿಕಾರಿಗಳು ಹಾಗೂ ಎಲ್ಲಾ ರಾಜ್ಯದ ಆರೋಗ್ಯ ಅಧಿಕಾರಿಗಳು ಭಾಗಿಯಾಗಿದ್ದರು. ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಸಭೆಯಲ್ಲಿ ವೆಂಟಿಲೇಟರ್ ನಿರ್ವಹಣೆಗೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿದ್ದೇವೆ. ಐಸಿಎಂಆರ್ ಫೋರ್ಟಲ್​ನಲ್ಲಿ ಡೇಟಾ ಮಾಹಿತಿ ಸಿಗುತ್ತಿಲ್ಲ .ಪೋರ್ಟಲ್ ಸರಿಪಡಿಸಲು ಮನವಿ ಮಾಡಿದ್ದೇವೆ.

    ಕೋವಿಡ್ ಹಿನ್ನಲೆಯಲ್ಲಿ ಜೆಎನ್ 1 ರೂಪಾಂತರಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡಿದೆ. ಅಮೆರಿಕಾ, ಯೂರೋಪ್ ರಾಷ್ಟ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಜೆಎನ್ 1 ರೂಪಾಂತರಿ ಬಹಳ ವೇಗವಾಗಿ ಹರಡುವ ವೈರಾಣಾಗಿದೆ. ಆದರೆ ಇದು ಹಾನಿಕಾರಕ ಅಲ್ಲ, ಸಾವು ಕೂಡಾ ವಿರಳ. ಈ ನಿಟ್ಟಿನಲ್ಲಿ ಸಾರ್ವಜನಿಕರು ಆತಂಕ ಹಾಗೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts