More

    ‘ನೋಡಿ.. ನಾನು ಒಂದು ದಿನ ನಿಮ್ಮ ಬಾಡಿಗಾರ್ಡ್​ ಆಗ್ತೀನಿ..’; ನಟಿ ರಶ್ಮಿಕಾ ಮಂದಣ್ಣ

    ಬೆಂಗಳೂರು: ಈಗ ತೆಲುಗಿನಲ್ಲಿ ಬೇಡಿಕೆಯ ನಟಿ ಆಗಿರುವ ಕನ್ನಡದ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ, ತಾವೀಗ ಬಾಡಿಗಾರ್ಡ್ ಆಗುವುದಾಗಿ ಹೇಳಿಕೊಂಡಿದ್ದಾರೆ. ಮಾತ್ರವಲ್ಲ ಅದಕ್ಕಾಗಿ ಕಷ್ಟಪಡುತ್ತಿರುವುದಾಗಿಯೂ ಹೇಳಿದ್ದಾರೆ.

    ಅಷ್ಟಕ್ಕೂ ಅವರು ಬಾಡಿಗಾರ್ಡ್ ಆಗಲು ಹೊರಟಿದ್ದು ಯಾರಿಗೆ ಗೊತ್ತಾ? ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಅವರಿಗೆ. ಹೌದು.. ರಶ್ಮಿಕಾ ಮಂದಣ್ಣ ತಮ್ಮ ಕಸರತ್ತಿನ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಬಳಿಕ ಅದಕ್ಕೆ ಬಂದ ಮೆಚ್ಚುಗೆಗೆ ಪ್ರತಿಕ್ರಿಯಿಸುತ್ತ ಬಾಡಿಗಾರ್ಡ್ ಆಗುವ ಮಾತನ್ನು ಹೇಳಿದ್ದಾರೆ.

    ಹೀಗೆ ರಶ್ಮಿಕಾ ಅವರಿಂದ ಬಾಡಿಗಾರ್ಡ್ ಆಗುವ ಮಾತು ಹೊರಬರಲು ಕಾರಣ, ‘ವೈಲ್ಡ್​ ಡಾಗ್’. ಅರ್ಥಾತ್​ ನಾಗಾರ್ಜುನ ಅವರ ಹೊಸ ಸಿನಿಮಾ ‘ವೈಲ್ಡ್​ ಡಾಗ್’. ಏಪ್ರಿಲ್​ 2ರಂದು ಬಿಡುಗಡೆ ಆಗಲಿರುವ ‘ವೈಲ್ಡ್​ ಡಾಗ್’ ಸಿನಿಮಾದ ಪ್ರಚಾರಾರ್ಥ ಚಿತ್ರತಂಡ ಸಿನಿಪ್ರಿಯರಿಗೆ ಒಂದು ಚಾಲೆಂಜ್ ಒಡ್ಡಿದೆ. #WildDogPushUpChallenge ಎಂಬ ಹ್ಯಾಷ್​ಟ್ಯಾಗ್​ನಲ್ಲಿ ಈ ಚಾಲೆಂಜ್​ ಹಾಕಲಾಗಿದ್ದು, ಅದನ್ನು ಹಲವರು ಸ್ವೀಕರಿಸಿ ನಿಧಾನಗತಿಯ ಪುಷ್​ಅಪ್​ ಮಾಡಿ ವಿಡಿಯೋ ಪೋಸ್ಟ್​ ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ, ರಶ್ಮಿಕಾ ಕೂಡ ಆ ಚಾಲೆಂಜ್ ಸ್ವೀಕರಿಸಿ, ಪುಷ್​ಅಪ್​ ಮಾಡಿದ್ದು, ಅದು ವೈಲ್ಡ್​ ಡಾಗ್ ಸಿನಿಮಾ ನಿರ್ಮಾಣ ಮಾಡುತ್ತಿರುವ ಮ್ಯಾಟಿನಿ ಎಂಟರ್​ಟೇನ್​​ಮೆಂಟ್​ ಕಂಪನಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಆಗಿದೆ.

    ಇದನ್ನೂ ಓದಿ: ಪರಸ್ತ್ರೀಗೆ ಕಿಸ್​ ಕೊಟ್ಟಿದ್ದಕ್ಕೆ ಪತಿಗೆ ಪಂಚ್​ ಕೊಟ್ಟ ಪತ್ನಿ: ರಿತೀಶ್ ಕಿಸ್​, ಜೆನಿಲಿಯಾ ಜಲಸ್; ನನಗಿಂತ ಪ್ರೀತಿ ಝಿಂಟಾ ಹೆಚ್ಚಾದ್ಲಾ.. ಡಿಶೂಂ ಡಿಶೂಂ! 

    ಅದನ್ನು ಕೋಟ್ ಮಾಡಿಕೊಂಡಿರುವ ನಾಗಾರ್ಜುನ, ವಾವ್ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ನಾಗಾರ್ಜುನ ಅವರು ವ್ಯಕ್ತಪಡಿಸಿರುವ ಮೆಚ್ಚುಗೆಗೆ ಪ್ರತಿಕ್ರಿಯಿಸಿರುವ ರಶ್ಮಿಕಾ, ಸರ್​.. ನೋಡಿ ಇನ್ನೂ ಎಷ್ಟು ಕಷ್ಟಪಡುತ್ತಿದ್ದೇನೆ.. ಒಂದು ದಿನ ನಾನು ನಿಮ್ಮ ಬಾಡಿಗಾರ್ಡ್ ಆಗಿ ನೇಮಕವಾಗುತ್ತೇನೆ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ‘ವೈಲ್ಡ್ ಡಾಗ್’ ಸಿನಿಮಾದಲ್ಲಿ ನಾಗಾರ್ಜುನ, ದಿಯಾ ಮಿರ್ಜಾ, ಸೈಯಾಮಿ ಖೇರ್ ಅಭಿನಯಿಸಿದ್ದಾರೆ. ಅಹಿಶೋರ್ ಸೊಲೊಮನ್​ ನಿರ್ದೇಶನ ಮಾಡಿದ್ದಾರೆ.

    'ನೋಡಿ.. ನಾನು ಒಂದು ದಿನ ನಿಮ್ಮ ಬಾಡಿಗಾರ್ಡ್​ ಆಗ್ತೀನಿ..'; ನಟಿ ರಶ್ಮಿಕಾ ಮಂದಣ್ಣ

    ಕರ್ನಾಟಕದಲ್ಲಿ ಮತ್ತೆ ಲಾಕ್​ಡೌನ್​ ಆಗತ್ತಾ? ಸಿಎಂ ಯಡಿಯೂರಪ್ಪ ಸ್ಪಷ್ಟನೆ ಹೀಗಿದೆ ನೋಡಿ..

    ನಿಮ್ಮೂರಿನ ಇನ್​ಸ್ಪೆಕ್ಟರ್​ ಬದಲಾಗಿದ್ದಾರಾ ನೋಡಿಕೊಳ್ಳಿ: 18 ಡಿವೈಎಸ್‌ಪಿ, 100 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ; ಇಲ್ಲಿದೆ ಪೂರ್ತಿ ಪಟ್ಟಿ

    ಬಿಜೆಪಿ ಸರ್ಕಾರದ ಮಂತ್ರಿಯಾಗಿ ನಾನು ಹೇಗೆ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಲಿ?: ಸಚಿವ ಜೆ.ಸಿ. ಮಾಧುಸ್ವಾಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts