More

    ಹೋದ ಸಂದರ್ಶನದಲ್ಲಿ ಏಟು ತಿಂದಿದ್ದ ಕೆನ್ನೆಗೆ ಈ ಬಾರಿ ಸಿಹಿ ಮುತ್ತು! ಆಶು ರೆಡ್ಡಿ ಪಾದಕ್ಕೆ ಆರ್​ಜಿವಿ ಕಿಸ್​

    ಹೈದರಾಬಾದ್​: ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಅವರು ವಿವಾದಗಳ ಕೇಂದ್ರ ಬಿಂದು ಎಂಬುದು ಗೊತ್ತಿರುವ ವಿಚಾರ. ಸದಾ ವಿವಾದಗಳನ್ನೇ ಹುಟ್ಟುಹಾಕವ ಮೂಲಕ ಸುದ್ದಿಯಾಗುವುದೇ ಇವರ ಖಯಾಲಿಯಾಗಿದೆ. ಕಳೆದ ವರ್ಷದ ತೆಲುಗು ಬಿಗ್​ಬಾಸ್​ ಬ್ಯೂಟಿ ಅರಿಯಾನಾ ಗ್ಲೋರಿ ಜತೆ ಆರ್​ಜಿವಿ ಒನ್​ ಟು ಒನ್​ ಸಂದರ್ಶನದಲ್ಲಿ ಬೋಲ್ಡ್​ ಆಗಿ ಮಾತನಾಡಿದ್ದ ವಿಡಿಯೋ ವೈರಲ್​ ಆಗಿತ್ತು. ಇದಾದ ಕೆಲವೇ ದಿನಗಳಲ್ಲಿ ಮತ್ತೊಬ್ಬ ಬಿಗ್​ಬಾಸ್​ ಬ್ಯೂಟಿ ಆಶು ರೆಡ್ಡಿ ಜತೆ “ಬೋಲ್ಡ್​ ಇಂಟರ್ವ್ಯೂವ್​ ವಿತ್​ ಆಶು ರೆಡ್ಡಿ” ಎಂಬ ಸಂದರ್ಶನ ಮಾಡಿದ್ದರು.

    ಸಂದರ್ಶನದಲ್ಲಿ ಆರ್​ಜಿವಿ ಹೆಣ್ಣಿನ ಮೈಮಾಟ ಮತ್ತು ಲೈಂಗಿಕ ಕ್ರಿಯೆ ಇದರ ಬಗ್ಗೆಯೇ ಆಶು ರೆಡ್ಡಿ ಅವರೊಂದಿಗೆ ಚರ್ಚೆ ನಡೆಸಿದ್ದರು. ಆರ್​ಜಿವಿ ಸಂದರ್ಶನದಲ್ಲಿ ಆಶು ರೆಡ್ಡಿಯ ಅಂಗಾಗಳ ಬಗ್ಗೆ ನೇರವಾಗಿಯೇ ಮಾತನಾಡಿದ್ದರು. ಆಶು ರೆಡ್ಡಿ ಎಲ್ಲಿಯೂ ಮುಜಗರ ಪಟ್ಟುಕೊಳ್ಳದೆ ಆರ್​ಜಿವಿ ಜತೆ ಬೋಲ್ಡ್​ ಆಗಿ ಸಂದರ್ಶನದಲ್ಲಿ ಮಾತನಾಡಿದ್ದರು. ಅಲ್ಲದೆ, ಇಡೀ ಸಂದರ್ಶನದಲ್ಲಿ ಆಶು ರೆಡ್ಡಿಯ ದೇಹದ ಅಂಗಾಗಳನ್ನು ಆರ್​ಜಿವಿ ತಮ್ಮ ಮೊಬೈಲ್​ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿರುವ ದೃಶ್ಯವೂ ಇತ್ತು. ಆಶು ರೆಡ್ಡಿ ತೊಡೆಯ ಬಗ್ಗೆ ಆರ್​ಜಿವಿ ಓಪನ್​ ಆಗಿ ಕಾಮೆಂಟ್ ಮಾಡಿದ್ದರು. ಇಡೀ ಸಂದರ್ಶನದಲ್ಲಿ ಲೈಂಗಿಕತೆಯ ಬಗ್ಗೆ ಹೆಚ್ಚು ಮಾತನಾಡಲಾಗಿತ್ತು. ಹೀಗಾಗಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಆಶು ರೆಡ್ಡಿ ಅವರನ್ನು ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗಿತ್ತು.

    ಇದೀಗ ಮತ್ತೊಮ್ಮೆ ಹಾಟ್​ ಆ್ಯಂಡ್​ ಬೋಲ್ಡ್​ ಸಂದರ್ಶನದ ಮೂಲಕ ಆರ್​​ಜಿವಿ ಮತ್ತು ಆಶು ರೆಡ್ಡಿ ಒಂದಾಗಿದ್ದಾರೆ. ಡೇಂಜರಸ್​ ಆಶು ರೆಡ್ಡಿ ಎಂಬ ಶೀರ್ಷಿಕೆಯೊಂದಿಗೆ ಮತ್ತೆ ಲೈಂಗಿಕತೆ ಬಗ್ಗೆ ಓಪ್​ ಆಗಿ ಮಾತನಾಡಿದ್ದಾರೆ. ನಿನ್ನೆ (ಡಿ.6) ರಾತ್ರಿಯಷ್ಟೇ ಆರ್​ಜಿವಿ ತಮ್ಮ ಯೂಟ್ಯೂಬ್​ನಲ್ಲಿ ಸಂದರ್ಶನದ ಪೂರ್ಣ ವಿಡಿಯೋವನ್ನು ಶೇರ್​ ಮಾಡಿದ್ದು, ಈಗಾಗಲೇ 3 ಲಕ್ಷಕ್ಕೂ ಅಧಿಕ ವೀಕ್ಷಣೆಯೊಂದಿಗೆ ವಿಡಿಯೋ ವೈರಲ್​ ಆಗಿದೆ.

    ಇದಕ್ಕೂ ಮುನ್ನ ಫೋಟೋಗಳನ್ನು ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಶೇರ್​ ಮಾಡಿಕೊಂಡಿದ್ದ ಆಶುರೆಡ್ಡಿ ಮತ್ತೊಂದು ಬೋಲ್ಡ್​ ಸಂದರ್ಶನ ಬರುವುದಾಗಿ ಸುಳಿವು ನೀಡಿದ್ದರು. ಆರ್​ಜಿವಿ ಕೂಡ ಟ್ವಿಟರ್​ನಲ್ಲಿ ಫೋಟೋಗಳನ್ನು ಪೋಸ್ಟ್​ ಮಾಡಿದ್ದರು. ಫೋಟೋಗಳಲ್ಲಿ ಆಶು ರೆಡ್ಡಿ ಅವರು ಸೋಫಾ ಮೇಲೆ ಕುಳಿತಿದ್ದರೆ, ಆರ್​ಜಿವಿ ನೆಲದ ಮೇಲೆ ಕುಳಿತಿದ್ದಾರೆ. ಆಶು ರೆಡ್ಡಿ ಕಾಲಿಗೆ ಚುಂಬಿಸುತ್ತಿರುವುದು, ಕಾಲನ್ನು ಹಿಡಿದಿರುವ ಫೋಟೋಗಳು ಜಾಲತಾಣದಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳು ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಸಂದರ್ಶನದಲ್ಲಿ ಆರ್​ಜಿವಿ ಕೆನ್ನೆಗೆ ಆಶು ರೆಡ್ಡಿ ಚುಂಬಿಸಿದ್ದಾರೆ. ಕಳೆದ ಸಂದರ್ಶನದಲ್ಲಿ ಅದೇ ಕೆನ್ನಗೆ ಆಶು ರೆಡ್ಡಿ ಏಟು ನೀಡಿದ್ದರು. ಇಡೀ ಸಂದರ್ಶನ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದು, ಭಾರೀ ವೈರಲ್​ ಆಗುತ್ತಿದೆ.

    ಅಂದಹಾಗೆ ಆಶು ರೆಡ್ಡಿ ಯಾರು ಎಂದು ನೋಡುವುದಾದರೆ, ಆಕೆ ತೆಲುಗು ಚಿತ್ರರಂಗದ ನಟಿ. ಅಲ್ಲದೆ, ಡಬ್​ಸ್ಮ್ಯಾಶರ್​ ಕೂಡ ಹೌದು. ಚಲ್​ ಮೋಹನ್​ ರಂಗ ಚಿತ್ರದ ಮೂಲಕ ಟಾಲಿವುಡ್​ ಚಿತ್ರರಂಗದಲ್ಲಿ ತಮ್ಮ ಸಿನಿ ಜರ್ನಿ ಆರಂಭಿಸಿದ್ದಾರೆ. ಬಿಗ್​ಬಾಸ್​ ಸಿಸನ್​ 3ರಲ್ಲಿ ತುಂಬಾ ಗುರುತಿಸಿಕೊಂಡವರು. ಹ್ಯಾಪಿ ಡೇಸ್ ಎಂಬ ಕಾರ್ಯಕ್ರಮದ ಮೂಲಕ ಟಿವಿ ನಿರೂಪಕರಾಗಿಯು ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಆಶು ರೆಡ್ಡಿ ಇನ್​ಸ್ಟಾಗ್ರಾಂಲ್ಲಿ 1 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ. ನೋಡಲು ಟಾಲಿವುಡ್ ನಟಿ ಸಮಂತಾ ಹೋಲಿಕೆಯು ಆಕೆಗೆ ಸ್ವಲ್ಪ ಖ್ಯಾತಿಯನ್ನು ತಂದುಕೊಟ್ಟಿದೆ. (ಏಜೆನ್ಸೀಸ್​)

    ನಿನ್ನ ಜತೆ ಸೆಕ್ಸ್​ ಮಾಡಿದ್ದೀನಿ, ಆ ಭಾಗವನ್ನು ತುಂಬಾ ಇಷ್ಟಪಡ್ತೇನೆ! ಅರಿಯಾನಾಗೆ ಶಾಕ್​ ಕೊಟ್ಟ ಆರ್​ಜಿವಿ​

    VIDEO| ಕಾಫಿ ಶಾಪ್​ನಲ್ಲಿ ಖಾಸಗಿ ಅಂಗದ ಬಗ್ಗೆ ಮಾತನಾಡಿದ ಆರ್​ಜಿವಿ ಕಪಾಳಕ್ಕೆ ಬಿತ್ತು ಏಟು..!

    ಆರ್​ಜಿವಿ ಸಂದರ್ಶನದಲ್ಲಿ ಲೈಂಗಿಕತೆ ಬಗ್ಗೆ ಬಿಚ್ಚು ಮಾತು: ನಟಿ ಆಶು ರೆಡ್ಡಿ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts